ಪ್ರೈಮೇಟ್[೨] ಸಸ್ತನಿ ವರ್ಗದ ಪ್ರಾಣಿಗಳ ಒಂದು ಗಣ (ಆರ್ಡರ್). ಈ ಗಣದ ಟ್ಯಾಕ್ಸಾನಮಿಯಲ್ಲಿ (ಜೀವ ವರ್ಗೀಕರಣಶಾಸ್ತ್ರ) ಎರಡು ವಿಭಿನ್ನ ವಂಶಾವಳಿಗಳಿದ್ದು ಅವು ಸ್ಟ್ರೆಪ್ಸಿರ್ಹಿನಿ ಮತ್ತು ಹಾಪ್ಲೊರ್ಹಿನಿ.[೧] ಪ್ರೈಮೇಟ್‌ಗಳು ಉಷ್ಣವಲಯದ ಕಾಡುಗಳಲ್ಲಿ ಬದುಕುತ್ತಿದ್ದ ಜೀವಿಗಳಿಂದ ವಿಕಾಸವಾದವು ಮತ್ತು ಹಲವು ಪ್ರೈಮೇಟ್‌ಗಳ ಗುಣಗಳು ಇಲ್ಲಿಯ ಮೂರು ಆಯಾಮಗಳ ಸವಾಲಾದ ಪರಿಸರಕ್ಕೆ ಹೊಂದಿಕೊಂಡ ಗುಣಗಳನ್ನು ಪ್ರತಿನಿಧಿಸುತ್ತವೆ. ಪ್ರೈಮೇಟ್‌ಗಳಲ್ಲಿ ಬಹಳಷ್ಟು ಮರವಾಸಿಗಳು.
ಅಂಟಾರ್ಕಿಟಿಕ ಹೊರತು ಪಡಿಸಿ ಎಲ್ಲಾ ಖಂಡಗಳಲ್ಲಿ ವಾಸಿಸುವ ಮಾನವರನ್ನು ಹೊರತು ಪಡಿಸಿದರೆ[೩] ಇತರ ಬಹಳಷ್ಟು ಪ್ರೈಮೇಟ್‌ಗಳು ಎರಡು ಅಮೆರಿಕ, ಆಫ್ರಿಕಾ ಮತ್ತು ಏಶಿಯದ ಉಷ್ಣವಲಯ ಮತ್ತು ಅರೆಉಷ್ಣವಲಯದ ಕಾಡುಗಳಲ್ಲಿ ವಾಸಿಸುತ್ತವೆ.[೪] ಅವುಗಳ ಗಾತ್ರದ ವ್ಯಾಪ್ತಿ ೩೦ ಗ್ರಾಂ ತೂಗುವ ಮೇಡಂ ಬರ್ತೆಯ ಇಲಿ ಲೆಮುರ್‌ನಿಂದ ೨೦೦ ಕಿಲೊಗ್ರಾಂ ತೂಗುವ ಪೂರ್ವ ಗೊರಿಲ್ಲಗಳವರೆಗೂ ಇದೆ. ಪಳಿಯುಳಿಕೆಗಳ ಪುರಾವೆಗಳ ಆಧಾರದ ಮೇಲೆ ಹೇಳುವುದಾದರೆ ಮೊದಲ ನಿಜ ಪ್ರೈಮೇಟ್ ಟೆಯಿಲ್‌ಹಾರ್ಡಿನ ಕುಲದ ಕಾಲಮಾನ ೫೫.೮ ದಶಲಕ್ಷ ವರುಷಗಳ ಹಿಂದೆ (ದವಹಿಂ).[೫] ತಡವಾದ ಪಾಲಿಯೋಸಿನ್, ೫೫-೫೮ ದವಹಿಂನ ಕಾಲಮಾನದಲ್ಲಿ ಬಹಳ ಹೆಚ್ಚಾಗಿ ಕಂಡುಬರುವ ಪ್ರೈಮೇಟ್‌ನ ಹತ್ತಿರದ ಸಂಬಂಧಿ ಪ್ಲೆಸಿಯಡಪಿಸ್.[೬] ಅಣ್ವಿಕ ಗಡಿಯಾರದ ಅಧ್ಯಯನಗಳು ಪ್ರೈಮೇಟ್ ಕವಲು ಇನ್ನೂ ಹಳೆಯದು ಕ್ರೆಟೇಶಿಯಸ್ ಪಾಲಿಯೊಜೀನ್ ಗಡಿ ಅಥವಾ ೬೩ ರಿಂದ ೭೪ ದವಹಿಂನದು ಎಂದು ಸೂಚಿಸುತ್ತವೆ.[೭][೮][೯][೧೦]
ಗಣ ಪ್ರೈಮೇಟನ್ನು ಸಂಪ್ರದಾಯಿಕವಾಗಿ ಪ್ರೊಸಿಮಿಯನ್ ಮತ್ತು ಅಂತ್ರೊಪಾಯ್ಡ್ (ಸಿಮಿಯನ್) ಎಂದು ವಿಭಜಿಸಲಾಗುತ್ತಿತ್ತು. ಪ್ರೊಸಿಮಿಯನ್‌ಗಳು ಪ್ರಾಚೀನ ಪ್ರೈಮೇಟ್‌ಗಳನ್ನು ಹೋಲುತ್ತಿದ್ದು ಮಡಗಾಸ್ಕರನ ಲೆಮುರ್‌ಗಳನ್ನು, ಲೊರಿಸೊಯ್ಡ್ ಮತ್ತು ಟಾರ್ಸಿಯರ್‌ಗಳನ್ನು ಒಳಗೊಳ್ಳುತ್ತಿದ್ದವು. ಸಿಮಿಯನ್‌ಗಳು ಕೋತಿ, ವಾನರ ಮತ್ತು ಹೊಮಿನಿನ್‌ಗಳನ್ನು ಒಳಗೊಳ್ಳುತ್ತಿದ್ದವು. ಆದರೆ ಇತ್ತೀಚೆಗೆ ಟಾಕ್ಸಾನಮಿ ತಜ್ಞರು ತೇವಾಂಶದ ಮೂಗಿನ ಗುಂಪಾದ ಉಪಗಣ ಸ್ಟ್ರೆಪ್ಸಿರ್ಹಿನಿ (ಟಾರ್ಸಿಯರ್ ಅಲ್ಲದ ಪ್ರೊಸಿಮಿಯನ್‌ಗಳನ್ನು ಈ ಗುಂಪು ಒಳಗೊಳ್ಳುತ್ತದೆ) ಮತ್ತು ಒಣ ಮೂಗಿನ ಟಾರ್ಸಿಯರ್ ಹಾಗೂ ಸಿಮಿಯನ್‌ಗಳಿರುವ ಉಪಗಣ ಹಾಪ್ಲೊರ್ಹಿನಿಯಾಗಿ ವಿಭಜಿಸಲು ಬಯಸುತ್ತಾರೆ.
ಸಿಮಿಯನ್‌ಗಳನ್ನು ಮುಂದೆ ಕಿರಿಮೂಗಿನ ಕೋತಿಗಳು (ಹಳೆಯ ಪ್ರಪಂಚದ ಕೋತಿಗಳು), ಆಫ್ರಿಕಾ ಮತ್ತು ಆಗ್ನೇಯದ (ದಕ್ಷಿಣ-ಪೂರ್ವ) ವಾನರಗಳನ್ನು ಒಳಗೊಳ್ಳುವ ಕಾಟರ್ಹಿನಿ ಮತ್ತು ದಕ್ಷಿಣ ಹಾಗೂ ಮಧ್ಯ ಅಮೆರಿಕದಲ್ಲಿರುವ ಚಪ್ಪಟೆಮೂಗಿನ ಕೋತಿಗಳನ್ನು (ಹೊಸ ಪ್ರಪಂಚದ ಕೋತಿಗಳು) ಒಳಗೊಳ್ಳುವ ಪ್ಲಾಟಿರ್ಹಿನಿಯಾಗಿ ವಿಭಜಿಸಿದ್ದಾರೆ. ಕಾಟರ್ಹಿನಿ ಹಳೆಯ ಪ್ರಪಂಚದ ಕೋತಿ, ಗಿಬ್ಬಾನ್ ಮತ್ತು ದೊಡ್ಡ ವಾನರಗಳನ್ನೂ ಒಳಗೊಳ್ಳುತ್ತವೆ. ಹೊಸ ಪ್ರಪಂಚದ ಕೋತಿಗಳು ಕಾಪುಚಿನ್, ಊಳು ಕಪಿ ಮತ್ತು ಅಳಿಲು ಕೋತಿಯನ್ನು ಒಳಗೊಳ್ಳುತ್ತದೆ. ಆಫ್ರಿಕಾ, ದಕ್ಷಿಣ ಏಶಿಯ ಮತ್ತು ಪೂರ್ವ ಏಶಿಯದ ಹೊರಗಡೆ ಬದುಕಿರುವ ಏಕೈಕ ಕಾಟರ್ಹಿನಿ ಮಾನವ. ಆದರೆ ಹಿಂದೆ ಯುರೂಪಿನಲ್ಲಿಯೂ ಕಾಟರ್ಹಿನಿಗಳು ಇದ್ದವು ಎಂದು ಪಳಿಯುಳಿಕೆಯು ನಮಗೆ ಸುಳಿವು ನೀಡುತ್ತದೆ. ಹೊಸ ಪ್ರೈಮೇಟ್‌ಗಳನ್ನು ಇನ್ನೂ ಗುರುತಿಸಲಾಗುತ್ತಿದೆ. ೨೦೦೦ದ ದಶಕದಲ್ಲಿ ೨೫ ಪ್ರಭೇದಗಳ ಜೀವ ವರ್ಗೀಕರಣ ಮಾಡಲಾಯಿತು ಮತ್ತು ೨೦೧೦ ರಿಂದ ಇಲ್ಲಿಯವರೆಗೆ ೧೧ ಪ್ರೈಮೇಟ್‌ಗಳನ್ನು ವಿವರಿಸಲಾಗಿದೆ.
ಸೀಮಿತವಲ್ಲದ ಸಸ್ತನಿಗಳು ಎಂದು ಪರಿಗಣಿಸಲಾದ ಪ್ರೈಮೇಟ್‌ಗಳು ವ್ಯಾಪಕ ಗುಣ ವ್ಯತ್ಯಾಸಗಳನ್ನು ಪ್ರತಿನಿಧಿಸುತ್ತವೆ. ಮಾನವ ಮತ್ತು ಬಬೂನ್‌ಗಳಂತೆ ಕೆಲವು ಮೂಲತಹ ಭೂವಾಸಿಗಳಾದರೆ ಎಲ್ಲ ಪ್ರೈಮೇಟ್‌ಗಳು ಮರ ಹತ್ತಲು ಹೊಂದಾಣಿಕೆ ಪಡೆದಿವೆ. ಇವುಗಳ ಚಲನೆಯ ಸ್ವರೂಪ- ಮರದಿಂದ ಮರಕ್ಕೆ ಹಾರುವುದು, ಎರಡು ಅಥವಾ ನಾಲ್ಕು ಕಾಲುಗಳ ಮೇಲೆ ನಡೆಯುವುದು, ಗೆಣ್ಣುಗಳ ಮೇಲೆ ನಡಿಗೆ ಮತ್ತು ಬಾಹುಗಮನ (ಕೊಂಬೆಯಿಂದ ಕೊಂಬೆಗೆ ತೂಗಾಡುತ್ತಾ ಸಾಗುವುದು).
ಪ್ರೈಮೇಟ್‌ಗಳ ಮಿದುಳು ಇತರ ಸಸ್ತನಿಗಳಿಗೆ ಹೋಲಿಸಿದರೆ ದೊಡ್ಡದು. ಅವುಗಳಲ್ಲಿ ಇತರ ಸಸ್ತನಿಗಳಲ್ಲಿ ಪ್ರಮುಖವಾದ ವಾಸನೆ ಶಕ್ತಿ ಕುಗ್ಗುತ್ತದೆ ಮತ್ತು ಮೂರು ಆಯಾಮಗಳ ನೋಟದ ಮಹತ್ವ ಹೆಚ್ಚಾಗುತ್ತದೆ. ಈ ಲಕ್ಷಣ ಲೋರಿಸ್ ಮತ್ತು ಲೆಮುರ್‌ಗಳಿಗಿಂತ ಕೋತಿಗಳು ಮತ್ತು ವಾನರಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಮೂರು ಬಣ್ಣಗಳ ನೋಟ ಕೆಲವು ಪ್ರೈಮೇಟ್‌ಗಳಲ್ಲಿ ವಿಕಾಸವಾಗಿದೆ. ಬಹಳಷ್ಟು ಪ್ರೈಮೇಟ್‌ಗಳಲ್ಲಿ ಕೈಯ ಹೆಬ್ಬರಳು ವಿರುದ್ಧ ದಿಕ್ಕಿನಲ್ಲಿದೆ ಮತ್ತು ಕೆಲವದರಲ್ಲಿ ಗ್ರಾಹಕ ಬಾಲ ಇದೆ. ಇವುಗಳಲ್ಲಿ ಲೈಂಗಿಕ ದ್ವಿರೂಪತೆ (ಹೆಣ್ಣು ಮತ್ತು ಗಂಡುಗಳಲ್ಲಿನ ವ್ಯತ್ಯಾಸ) ಇದ್ದು ಅದು ದೇಹದ ಗಾತ್ರ, ಕೋರೆಹಲ್ಲಿನ ಗಾತ್ರ ಮತ್ತು ಬಣ್ಣಗಳಲ್ಲಿನ ವ್ಯತ್ಯಾಸವನ್ನು ಒಳಗೊಂಡಿದೆ. ವಯಸ್ಕ ಜೀವಿಗಳು ಒಂದೇ ಬದುಕ ಬಹುದು, ಲೈಂಗಿಕ ಜೋಡಿಗಳಲ್ಲಿ ಬದುಕ ಬಹುದು ಅಥವಾ ನೂರರವರೆಗಿನ ಸಂಖ್ಯೆಯ ಗುಂಪುಗಳಲ್ಲಿಯೂ ಬದುಕ ಬಹುದು. ಇದು ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರ ಬಹುದು.
ಪ್ರೈಮೇಟ್‌ಗಳ ಭಿನ್ನ ಗುಂಪುಗಳ ನಡುವಿನ ಸಂಬಂಧ ಇತ್ತೀಚಿನವರೆಗೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಹೀಗಾಗಿ ಅವುಗಳ ಸಾಮಾನ್ಯ ಹೆಸರುಗಳಲ್ಲಿ ತುಸು ಗೊಂದಲವಿದೆ. ಉದಾಹರಣೆಗೆ “ವಾನರ” ಪದವನ್ನು ಕೆಲವೊಮ್ಮೆ “ಕೋತಿ” ಪದಕ್ಕೆ ಅಥವಾ ಮಾನವನಂತಿರುವ, ಬಾಲವಿಲ್ಲದ ಪ್ರೈಮೇಟ್‌ಗಳಿಗೆ ಬಳಸಲಾಗಿದೆ.[೧೧]
ಮಾನವ (ಪ್ರಭೇದ ಹೋಮೋ)
ಹಳೆಯ ಪ್ರಪಂಚದ ಕೋತಿಗಳು (ಮಹಾಕುಟುಂಬ ಸೆರ್ಕೊಪಿತಿಕೊಯಿಡೆ)
ಹೊಸ ಪ್ರಪಂಚದ ಕೋತಿಗಳು (ಪಾರ್ವಗಣ ಪ್ಲಾಟಿರ್ಹಿನಿ)
ಟಾರ್ಸಿಯರ್ (ಮಹಾಕುಟುಂಬ ಟಾರ್ಸೊಯಿಡೆ)
ಲೆಮುರ್ (ಮಹಾಕುಟುಂಬ ಲೆಮುರೊಯಿಡೆ)
ಲೋರಿಸ್ ಮತ್ತು ಸಂಬಂಧಿಗಳು (ಮಹಾಕುಟುಂಬ ಲೊರಿಸೊಯಿಡೆ)
ಸಾಮಾನ್ಯ ಹಿಂದಿನ ಹೆಸರುಗಳು
ಪ್ರೊಸಿಮಿಯನ್ ಕೋತಿ ಸಣ್ಣ ವಾನರ ದೊಡ್ಡ ವಾನರ ಮಾನವ
ಪ್ರೈಮೇಟ್‌ಗಳ ತಜ್ಞರಾದ ಸರ್ ವಿಲ್‌ಫ್ರಿಡ್ ಲೆ ಗ್ರಾಸ್ ಕ್ಲಾರ್ಕ್ ಪ್ರೈಮೇಟ್‌ಗಳ ವಿಕಾಸ ಮತ್ತು ಮಾನವನ ವರೆಗೂ ಬದುಕಿರುವ ಪ್ರೈಮೇಟ್‌ಗಳನ್ನು “ಏರು ಕ್ರಮದಲ್ಲಿ” ಇರಿಸುವ ಪದ್ಧತಿಯನ್ನು ಅಭಿವೃದ್ಧಿ ಪಡಿಸಿದರು.[೧೨] ಸಾಮಾನ್ಯವಾಗಿ ಬಳಸುವ ಪ್ರೈಮೇಟ್ ಗುಂಪುಗಳ ಹೆಸರುಗಳಾದ “ಪ್ರೊಸಿಮಿಯನ್”, “ಕೋತಿ”, “ಸಣ್ಣ ವಾನರ” ಮತ್ತು “ದೊಡ್ಡ ವಾನರ” ಹೆಸರುಗಳು ಈ ಪದ್ಧತಿಯನ್ನು ಪ್ರತಿಬಿಂಬಿಸುತ್ತವೆ. ಇಂದಿನ ಪ್ರೈಮೇಟ್‌ಗಳ ವಿಕಾಸದ ಇತಿಹಾಸ ಅರ್ಥ ಮಾಡಿಕೊಂಡಂತೆ ಈ ಗುಂಪುಗಳು ಒಂದೇ ಪೂರ್ವಜರ ಮೂಲದಿಂದ ವಿಕಾಸವಾಗಿಲ್ಲ.[೧೩] ಆಧುನಿಕ ವರ್ಗೀಕರಣವು ಒಂದೇ ಮೂಲ ವಂಶದಿಂದ ಬಂದವುಗಳನ್ನು ಒಂದೇ ಗುಂಪಾಗಿ ವಿಂಗಡಿಸುತ್ತದೆ ಮತ್ತು ಈ ರೀತಿಯ ವಿಂಗಡನೆಯನ್ನು ಇಲ್ಲಿ (ನೋಡಿ -ಬದುಕಿರುವ ಪ್ರೈಮೇಟ್‌ಗಳ ಆಧುನಿಕ ಹೆಸರುಗಳು) ಕೊಡಲಾಗಿದ್ದು[೧೪][೧೫] ಹಿಂದಿನ ವರ್ಗೀಕರಣದ ಹೆಸರುಗಳನ್ನು ಬಣ್ಣಗಳಲ್ಲಿ ತೋರಿಸಲಾಗಿದೆ.
ಪ್ರೈಮೇಟ್ ಕುಟುಂಬಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದ್ದು ಅದರೊಂದಿಗೆ ಒಂದು ಸಾಧ್ಯ ಪ್ರೈಮೇಟ್‌ಗಳ ವರ್ಗೀಕರಣವನ್ನು[೧][೧೪][೧೬][೧೭] ಕೊಡಲಾಗಿದ್ದು ಇತರ ವರ್ಗೀಕರಣಗಳೂ ಇವೆ. ಉದಾಹರಣೆಗೆ ಇನ್ನೊಂದು ವರ್ಗೀಕರಣದಲ್ಲಿ ಬದುಕಿರುವ ಉಪಗಣ ಸ್ಟ್ರೆಪ್ಸಿರ್ಹಿನಿಯನ್ನು ಎರಡು ಇಂಫ್ರಾಗಣ ಲೆಮುರಿಫೊರ್ಮೆ ಮತ್ತು ಲೊರ್ಸಿಫೊರ್ಮೆ ಎಂದು ವಿಭಜಿಸಲಾಗುತ್ತದೆ.[೧೮]
ಪ್ರೈಮೇಟ್‌ಗಳ ಕವಲು ಕನಿಷ್ಠ ೬೫ ದಶಲಕ್ಷ ವರುಷಗಳ ಹಿಂದೆ (ದವಹಿಂ) ಹೋಗುತ್ತದೆ ಎಂದು ಭಾವಿಸಲಾಗಿದೆ.[೧೯] ಆದರೆ ಇಂದು ತಿಳಿದ ಅತಿ ಪುರಾತನ ಪ್ರೈಮೇಟ್ ಪಳಿಯುಳಿಕೆಗಳು ಆಫ್ರಿಕಾದಲ್ಲಿನ ತಡವಾದ ಪಾಲಿಯೋಸಿನ್ ಕಾಲಮಾನ[೨೦] ಅಥವಾ ಉತ್ತರ ಖಂಡಗಳಲ್ಲಿನ ಪಾಲಿಯೋಸಿನ್ ಇಯೋಸಿನ್ ಗಡಿ ಕಾಲಮಾನ ಸುಮಾರು ೫೫ ದವಹಿಂ ಹೋಗುತ್ತದೆ. ಅಣ್ವಿಕ ಗಡಿಯಾರ ಅಧ್ಯಯನಗಳನ್ನೂ ಒಳಗೊಂಡು ಇತರ ಅಧ್ಯಯನಗಳು ಪ್ರೈಮೇಟ್ ಕವಲಿನ ಹುಟ್ಟನ್ನು ಮಧ್ಯ ಕ್ರೆಟೇಶಿಯಸ್ ಕಾಲಮಾನ ಸುಮಾರು ೮೫ ದವಹಿಂ ಇರಿಸುತ್ತವೆ.[೨೧][೨೨][೨೩]
ಆಧುನಿಕ ಅಧ್ಯಯನಗಳ ಪ್ರಕಾರ ಎಲ್ಲಾ ಪ್ರೈಮೇಟ್‌ಗಳೂ ಒಂದೇ ವಂಶದ ಮೂಲದವು. ಉಪಗಣ ಸ್ಟ್ರೆಪ್ಸಿರ್ಹಿನಿ ಅಥವಾ ತೇವಾಂಶ ಮೂಗಿನ ಪ್ರೈಮೇಟ್‌ಗಳು ಪ್ರಾಚೀನ ಪ್ರೈಮೇಟ್‌ಗಳಿಂದ ೬೩ ದವಹಿಂ ಸಿಡಿದು ಬೇರೆಯಾದವು ಎನ್ನಲಾಗಿದ್ದು,[೨೪] ಅದಕ್ಕೂ ಹಿಂದಿನ ಕಾಲಮಾನವನ್ನೂ ಬೆಂಬಲಿಸುವ ನಿಲುವುಗಳಿವೆ.[೨೫] ಇಯೋಸಿನ್ ಕಾಲಮಾನದಲ್ಲಿ ಉತ್ತರದ ಖಂಡಗಳಲ್ಲಿ ಎರಡು ಗುಂಪುಗಳು -ಅಡಪಿಪೊರ್ಮ್ ಮತ್ತು ಒಮೊಮಿಡ್‌ಗಳು, ಪ್ರಭಲವಾಗಿದ್ದವು.[೨೬][೨೭] ಮೊದಲನೆಯ ಗುಂಪನ್ನು ಸ್ಟ್ರೆಪ್ಸಿರ್ಹಿನಿ ಉಪಗಣಕ್ಕೆ ಸೇರಿಸಲಾಗಿದೆ ಆದರೆ ಅವಕ್ಕೆ ಆಧುನಿಕ ಲೆಮುರ್‌ಗಳಂತೆ ಹಲ್ಲುಬಾಚಣಿಗೆ (ಇನ್ನೊಂದು ಸಹಜೀವಿಯನ್ನು “ಶುಚಿಗೊಳಿಸಲು” ಅಥವಾ ಪರಜೀವಿ ಮತ್ತು ಗಾಯಗಳ ಆರೈಕೆಗೆ ಬಳಸುವ ಬಾಚಣಿಗೆಯಂತಹ ಹಲ್ಲು) ಇರಲಿಲ್ಲ. ಇತ್ತೀಚಿನ ವಿಶ್ಲೇಷಣೆಗಳು ಡಾರ್ವಿನಿಯಸ್ ಮಸಿಲ್ಲೆ (ಜರ್ಮನಿಯಲ್ಲಿ ದೊರೆತ ಪಳಿಯುಳಿಕೆ -ಕಾಲಮಾನ ೪೭ ದವಹಿಂ) ಈ ಗುಂಪಿಗೆ ಹೊಂದುತ್ತದೆ ಎನ್ನುತ್ತವೆ.[೨೮] ನಂತರದ್ದು (ಒಮೊಮಿಡ್) ಟಾರ್ಸಿಯರ್, ಕೋತಿಗಳು ಮತ್ತು ವಾನರ ಹೆಚ್ಚು ಹತ್ತಿರವಾಗಿತ್ತು. ಈ ಗುಂಪುಗಳ ಈಗ ಬದುಕಿರುವ ಜೀವಿಗಳೊಂದಿಗಿನ ಸಂಬಂಧದ ಬಗೆಗೆ ಸ್ಪಷ್ಟವಿಲ್ಲ. ಒಮೊಮಿಡ್‌ಗಳು ೩೦ ದವಹಿಂನವರೆಗೂ ಬದುಕಿದ್ದರೆ[೨೭] ಅಡಪಿಪೊರ್ಮ್‌ಗಳು ೧೦ ದವಹಿಂನವರೆಗೂ ಬದುಕಿದ್ದವು.[೨೯]
ಅನುವಂಶಿಕ ಅಧ್ಯಯನಗಳ ಪ್ರಕಾರ ಮಡಗಾಸ್ಕರನ ಲೆಮುರ್‌ಗಳು ಲೊರಿಸೊಯಿಡ್‌ಗಳಿಂದ ಸುಮಾರು ೭೫ ದವಹಿಂ ಬೇರೆಯಾದವು.[೨೫] ಈ ಅಧ್ಯಯನಗಳು ಮತ್ತು ಅಣ್ವಿಕ ಪುರಾವೆಗಳು ಲೆಮುರ್‌ಗಳ ನಡುವಿನ ಸಂಬಂಧ ಇತರ ಸ್ಟ್ರೆಪ್ಸಿರ್ಹಿನಿಗಳ ನಡುವಿನ ಸಂಬಂಧಕ್ಕಿತ ಹೆಚ್ಚು ಹತ್ತಿರ ಎಂದು ಸೂಚಿಸುತ್ತವೆ.[೨೫][೩೦] ಆದರೆ ಮಡಗಾಸ್ಕರ್ ಆಫ್ರಿಕಾದಿಂದ ೧೬೦ ದವಹಿಂ ಮತ್ತು ಭಾರತದಿಂದ ೯೦ ದವಹಿಂ ಬೇರ್ಪಟ್ಟಿತು.[೩೧] ಇದನ್ನು ಪರಿಗಣಿಸಿ ಕೆಲವು ಲೆಮುರ್‌ಗಳು ೫೦ ರಿಂದ ೮೦ ದವಹಿಂ ಒಂದೇ ತೆಪ್ಪಹಾಯು (ತೇಲುವ ವಸ್ತುವಿನ ಸಹಾಯದಿಂದ ದಾಟು) ಘಟನೆಯ ಮೂಲಕ ಆಫ್ರಿಕಾಕ್ಕೆ ಬಂದವೆಂದು ಭಾವಿಸಲಾಗಿದೆ.[೨೫][೩೦][೩೧] ಹಲವು ಸಲ ಆಫ್ರಿಕಾ ಮತ್ತು ಭಾರತದಿಂದ ಬಂದಿರ ಬಹುದಾದಂತ ಇತರ ರೀತಿಯಲ್ಲಿ ಬಂದಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗಿದೆ, ಆದರೆ ಯಾವುದಕ್ಕೂ ಅನುವಂಶಿಕ ಮತ್ತು ಅಣ್ವಿಕ ಪುರಾವೆಗಳು ಬೆಂಬಲಿಸುವುದಿಲ್ಲ.[೨೬]
ಇತ್ತೀಚಿನವರೆಗೂ ಅಯೆ-ಅಯೆಯನ್ನು ಸ್ಟ್ರೆಪ್ಸಿರ್ಹಿನಿಯಲ್ಲಿ ಸೇರಿಸುವುದು ಕಷ್ಟದ ಕೆಲಸವಾಗಿತ್ತು.[೧] ಅದರ ಕುಟುಂಬ ಡಾಬೆಂಟೊನಿಡೆನ ಪೂರ್ವಜರ ವಂಶ ಲೆಮುರ್ ಕವಲಿನಿಂದ ಲೆಮುರ್ ಮತ್ತು ಲೊರಿಸ್‌ಗಳಿಗಿಂತ ಈಚೆಗೆ ಕವಲೊಡೆಯಿತು ಅಥವಾ ಇತರ ಎಲ್ಲಾ ಸ್ಟ್ರೆಪ್ಸಿರ್ಹಿನಿಯ ಸೋದರ ಕವಲು ಎಂಬ ಸಿದ್ಧಾಂತಗಳನ್ನು ಮುಂದು ಮಾಡಲಾಗಿತ್ತು. ಆದರೆ ೨೦೦೮ರಲ್ಲಿ ಅಯೆ-ಅಯೆ ಕುಟುಂಬವು ಮಲಗೆಸಿ ಲೆಮುರ್‌ನ ಹತ್ತಿರ ಸಂಬಂಧಿ ಎಂದು ಖಚಿತ ಪಡಿಸಲಾಯಿತು ಮತ್ತು ಆ ದ್ವೀಪವನ್ನು ಆಕ್ರಮಿಸಿದ ಜೀವಿಗಳಿಂದಲೇ ಕವಲೊಡೆದಿರು ಸಾಧ್ಯತೆ ಇದೆ ಎನ್ನಲಾಯಿತು.[೨೫]
ಉಪಗಣ ಹಾಪ್ಲೊರ್ಹಿನಿ ಸರಳ ಮೂಗಿನ ಅಥವಾ “ಒಣ ಮೂಗಿನ” ಪ್ರೈಮೇಟ್ ಎರಡು ಸಹೋದರ ಮೂಲವಂಶಗಳನ್ನು ಹೊಂದಿದೆ.[೧] ಪ್ರೊಸಿಮಿಯನ್, ಟಾರ್ಸಿಯರ್ ಮೂಲಕ್ಕೆ ಹತ್ತಿರವಾದ ವಿಭಜನೆ ಮತ್ತು ಇದರ ಹುಟ್ಟು ಸುಮಾರು ೫೮ ದವಹಿಂ.[೩೨][೩೩] ತೀರ ಪುರಾತನ ಹಾಪ್ಲೊರ್ಹೀನಿ ಅಸ್ತಿಪಂಜರ ಕೇಂದ್ರ ಚೀನದಲ್ಲಿ ದೊರೆತ ೫೫ ದವಹಿಂನ ಟಾರ್ಸಿಯರ್‌ನ್ನು ಹೋಲುವ ಅರ್ಕಿಸೆಬಸ್‌ನದು.[೩೪] ಈ ಗುಂಪಿನ ಹುಟ್ಟು ಏಶಿಯದಲ್ಲಿ ಆಯಿತು ಎಂಬ ಅನುಮಾನವನ್ನು ಇದು ಬೆಂಬಲಿಸುತ್ತದೆ.[೩೫] ಇಂಪ್ರಾಗಣ ಸಿಮಿಫೊರ್ಮೆ (ಕೋತಿ ಮತ್ತು ವಾನರಗಳು ಇರುವ ಸಿಮಿಯನ್ ಪ್ರೈಮೇಟ್‌ಗಳು) ಸುಮಾರು ೪೦ ದವಹಿಂ ಬಹುಶ ಏಶಿಯದಲ್ಲಿ ಹುಟ್ಟಿತು.[೨೭] ಇದು ನಿಜವಾದಲ್ಲಿ ಈ ಜೀವಿ ನಂತರದಲ್ಲಿ ಟೆಥಿಸ್ ಸಮುದ್ರ ದಾಟಿ ಏಶಿಯದಿಂದ ಆಫ್ರಿಕಾಕ್ಕೆ ವಲಸೆಹೋಯಿತು.[೩೬] ಸಿಮಿಯನ್‌ಗಳಲ್ಲಿ ಎರಡು ಪ್ರಮುಖ ಮೂಲವಂಶಗಳಿವೆ. ಆಫ್ರಿಕಾದಲ್ಲಿ ಅಭಿವೃದ್ಧಿಯಾದ ಕಾಟರ್ಹಿನಿ, ಇದು ಕೋತಿ, ಮಾನವ ಮತ್ತು ಇತರ ವಾನರಗಳನ್ನು ಒಳಗೊಂಡಿದೆ ಮತ್ತು ಪ್ಲಾಟಿರ್ಹಿನಿ- ದಕ್ಷಿಣ ಅಮೆರಿಕದಲ್ಲಿ ಅಭಿವೃದ್ಧಿಯಾದ ಇದು ಹೊಸ ಪ್ರಪಂಚದ ಕೋತಿಗಳನ್ನು ಒಳಗೊಂಡಿದೆ.[೧] ಮೂರನೆಯದು ಏಶಿಯದಲ್ಲಿ ಅಭಿವೃದ್ಧಿಯಾದ ಇಯೊಸಿಮಿಡ್ ಮತ್ತು ಇದು ಹಲವು ದವಹಿಂ ಅಳಿಯಿತು.[೩೭]
ಲೆಮುರ್‌ನಲ್ಲಿ ಇದ್ದಂತೆ ಹೊಸ ಪ್ರಪಂಚದ ಕೋತಿಗಳ ಹುಟ್ಟು ಸ್ಪಷ್ಟವಿಲ್ಲ. ಅಣ್ವಿಕ ಅಧ್ಯಯನಗಳು ಪ್ಲಾಟಿರ್ಹಿನಿ ಮತ್ತು ಕಾಟರ್ಹಿನಿಗಳು ವಿಭಜಿತವಾದ ಕಾಲಮಾನದ ಬಗೆಗೆ ತೀರ ಹೆಚ್ಚಿನ ಕಾಲಮಾನ ವ್ಯಾಪ್ತಿಯನ್ನು ಕೊಡುತ್ತಿದ್ದು ಇದು ೩೩ ರಿಂದ ೭೦ ದವಹಿಂನ ವರೆಗೂ ಇದೆ. ಮೈಟೊಕಾಂಡ್ರಿಯ ಅನುಕ್ರಮದ ಅಧ್ಯಯನಗಳು ತುಸು ಕಡಿಮೆ ವ್ಯಾಪ್ತಿಯ ಕಾಲಮಾನ, ೩೫ ರಿಂದ ೪೩ ದವಹಿಂ, ಕೊಡುತ್ತಿವೆ.[೬][೩೮] ಅಂತ್ರೊಪಾಯ್ಡ್ ಪ್ರೈಮೇಟ್‌ಗಳು ಇಯೋಸಿನ್ ಕಾಲಮಾನದಲ್ಲಿ ಅಂಟ್ಲಾಟಿಕ್ ಸಾಗರದ ದಿಂಡುಗಳು ಮತ್ತು ಅಂದಿನ ಕಡಿಮೆ ಸಮುದ್ರ ಮಟ್ಟದ ಸಹಾಯ ಪಡೆದು ದ್ವೀಪಗಳಿಂದ ದ್ವೀಪಗಳಿಗೆ ಹಾರುತ್ತಾ ಆಫ್ರಿಕಾದಿಂದ ಅಟ್ಲಾಂಟಿಕ್ ದಾಟಿ ದಕ್ಷಿಣ ಅಮೆರಿಕಕ್ಕೆ ಹೋದವು.[೨೬] ಬದಲೀ ವಿವರಣೆಯಾಗಿ ಒಂದು ತೆಪ್ಪಹಾಯು ಘಟನೆಯ ಮೂಲಕ ವಲಸೆ ಹೋಗಿರಬಹುದು. ಖಂಡಗಳ ಅಲೆತ ಕಾರಣಕ್ಕೆ ಅಂದಿನ ಅಟ್ಲಾಂಟಿಕ್ ಸಾಗರದ ಅಗಲ ಇಂದಿಗಿಂತ ಕಡಿಮೆ ಇತ್ತು.[೨೬] ಸಂಶೋಧನೆಗಳು ಒಂದು ಸಣ್ಣ ಒಂದು ಕಿಲೊಗ್ರಾಂ ತೂಕದ ಪ್ರೈಮೇಟ್ ತೆಪ್ಪ ಸಸ್ಯದ ಮೇಲೆ ಹದಿಮೂರು ದಿವಸ ಬದುಕಬಲ್ಲದು.[೩೯] ಪ್ರವಾಹ ಮತ್ತು ಗಾಳಿಯ ವೇಗದ ಅಂದಾಜು ಎರಡು ಖಂಡಗಳ ನಡುವಿನ ದಾಟುವಿಕೆಗೆ ಇದು ಸಾಕಾಗುತ್ತದೆ.
ಕೋತಿಗಳು ಮತ್ತು ವಾನರಗಳು ಆಫ್ರಿಕಾದಿಂದ ಯುರೋಪ್ ಮತ್ತು ಏಶಿಯಕ್ಕೆ ಮಿಯೋಸಿನ್ ಆರಂಭದಿಂದ ಹರಡಿದವು.[೪೦] ತುಸು ನಂತರದಲ್ಲಿ ಲೋರಿಸ್ ಮತ್ತು ಟಾರ್ಸಿಯರ್‌ಗಳು ಇಂತಹುದೇ ಪ್ರಯಾಣ ಬೆಳಸಿದವು. ಉತ್ತರ ಆಫ್ರಿಕಾದಲ್ಲಿ ದೊರೆತ ಮೊದಲ ಹೊಮಿನಿನ್ ಪಳಿಯುಳಿಕೆಯ ಕಾಲಮಾನ ೫-೮ ದವಹಿಂ.[೨೭] ಯುರೋಪಿನಲ್ಲಿನ ಹಳೆಯ ಪ್ರಪಂಚದ ಕೋತಿಗಳು ೧.೮ ದವಹಿಂ ಅಳಿದವು.[೪೧] ಅಣ್ವಿಕ ಮತ್ತು ಪಳಿಯುಳಿಕೆಯ ಅಧ್ಯಯನಗಳು ಆಫ್ರಿಕಾದಲ್ಲಿ ಆಧುನಿಕ ಮಾನವ ೧,೦೦,೦೦೦ – ೨,೦೦,೦೦೦ ವರುಷಗಳ ಹಿಂದೆ ಹುಟ್ಟಿದ ಎಂದು ಸಾಮಾನ್ಯವಾಗಿ ಸೂಚಿಸುತ್ತವೆ.[೪೨]
ಪ್ರೈಮೇಟ್‌ಗಳ ಕಣ್ಣುಗಳು ತಲೆಬುರಡೆಯ ಮುಂದೆ ಕಾಣಬರುತ್ತವೆ. ಇಗ್ಗಣ್ಣಿನ ನೋಟ (ಬೈನಾಕುಲಾರ್ ವಿಶನ್) ದೂರದ ಖಚಿತ ಅಂದಾಜು ನೀಡುತ್ತದೆ ಮತ್ತು ಇದು ಎಲ್ಲಾ ದೊಡ್ಡ ವಾನರಗಳಲ್ಲಿ ಬಾಹುಗಮನಕ್ಕೆ (ಕೊಂಬೆಯಿಂದ ಕೊಂಬೆಗೆ ತೂಗಾಡುತ್ತಾ ಸಾಗುವುದು) ಸಹಾಯಕ.[೪೩] ಅಗಿಯುವ ಸಮಯದಲ್ಲಿ ಇವು ಒತ್ತಡಕ್ಕೆ ಒಳಗಾಗುವ ಕಾರಣಕ್ಕೆ, ಕಣ್ಣಿನ ಮೇಲಿರುವ ಮೂಳೆಯ ದಿಂಡುಗಳು ಬಲಹೀನ ಮುಖದ ಮೂಳೆಗಳಿಗೆ ಬಲ ನೀಡುತ್ತವೆ. ಸ್ಟ್ರೆಪ್ಸಿರ್ಹಿನಿಗಳಲ್ಲಿ ಕಣ್ಣುಗಳನ್ನು ಕಾಪಾಡಲು ಕಣ್ಣಿನ ಗುಳಿಯ ಸುತ್ತ ಮೂಳೆ ಇರುತ್ತದೆ. ಆದರೆ ಹ್ಯಾಪ್ಲೊರ್ಹಿನಿಗಳಲ್ಲಿ ಪೂರ್ಣವಾಗಿ ಸುತ್ತುವರೆದ ಕಣ್ಣಿನ ಗುಳಿಗಳು ಇವೆ.[೪೪]
ಪ್ರೈಮೇಟ್‌ಗಳ ತಲೆಬುರುಡೆಯಲ್ಲಿ ಗುಮ್ಮಟಾಕರದ ಮಸ್ತಕ (ಕ್ರೇನಿಯಂ) ಇರುತ್ತದೆ ಮತ್ತು ಇದು ಆಂತ್ರಪಾಯ್ಡ್‌ಗಳಲ್ಲಿ (ಸಿಮಿಯನ್) ಎದ್ದುಕಾಣುವಂತೆ ಇರುತ್ತದೆ. ಮಸ್ತಕವು ಪ್ರೈಮೇಟ್‌ಗಳ ಲಕ್ಷಣವಾದ ದೊಡ್ಡ ಮೆದುಳನ್ನು ರಕ್ಷಿಸುತ್ತದೆ.[೪೩] ಮಾನವರ ಒಳಮಸ್ತಕದ ಘನ ಅಳತೆಯು ಇತರ ಮಾನವೇತರ ಪ್ರೈಮೇಟ್‌ಗಳ ಅತಿಹೆಚ್ಚು ಗಾತ್ರದ ಮೆದುಳಿಗಿಂತ ಮೂರರಷ್ಟು ದೊಡ್ಡದಿದ್ದು, ಇದು ಮಾನವರ ದೊಡ್ಡ ಗಾತ್ರದ ಮೆದುಳನ್ನು ಸೂಚಿಸುತ್ತದೆ.[೪೫] ಮಾನವರ ಸರಾಸರಿ ಮಸ್ತಕದ ಘನ ಅಳತೆ ೧,೨೦೧ ಕ್ಯೂಬಿಕ್ ಸೆಂಮೀ, ಗೊರಿಲ್ಲ ಘನ ಅಳತೆ ೪೬೯ ಕ್ಯೂಬಿಕ್ ಸೆಂಮೀ, ಚಿಂಪಾಜಿಗಳದು ೪೦೦ ಕ್ಯೂಬಿಕ್ ಸೆಂಮೀ ಮತ್ತು ಒರಗುಂಟಾನ್‌ಗಳದು ೩೯೭ ಕ್ಯೂಬಿಕ್ ಸೆಂಮೀ.[೪೫] ಪ್ರೈಮೇಟ್ ವಿಕಸನದ ಪ್ರಮುಖ ಪ್ರವೃತ್ತಿ ಮೆದುಳಿನ ಹಿಗ್ಗುವಿಕೆ; ಅದರಲ್ಲೂ ವಿಶೇಷವಾಗಿ ಸಂವೇದನೆಯ ಗ್ರಹಿಕೆ, ಚಲನೆಯ ಆದೇಶಗಳ ಉತ್ಪನ್ನ, ಸ್ಥಳಕ್ಕೆ ಸಂಬಂಧಿಸಿದ ತರ್ಕ, ಪ್ರಜ್ಞಾಪೂರ್ವಕ ಚಿಂತನೆ ಮತ್ತು ಮಾನವರಲ್ಲಿ ಭಾಷೆಗೆ ಸಂಬಂಧಿಸಿದ ನವಕಾರ್ಟೆಕ್ಸ್ ಹಿಗ್ಗುವಿಕೆ.[೪] ಇತರ ಸಸ್ತನಿಗಳು ಹೆಚ್ಚಾಗಿ ವಾಸನೆಯ ಗ್ರಹಿಕೆಯ ಮೇಲೆ ಆಧಾರ ಪಟ್ಟರೆ ಪ್ರೈಮೇಟ್‌ಗಳಲ್ಲಿ ಇದು ಕುಗ್ಗುತ್ತದೆ. ಮರವಾಸವು ಪ್ರೈಮೇಟ್‌ಗಳಲ್ಲಿ ಸ್ಪರ್ಶ ಮತ್ತು ನೋಟದ ಇಂದ್ರಿಯ ವ್ಯವಸ್ಥೆ ಬೆಳೆಯುವಂತೆ ಮಾಡುತ್ತದೆ[೪] ಮತ್ತು ಮೆದುಳಿನ ವಾಸನೆ ಗ್ರಹಿಸುವ ಪ್ರದೇಶ ಕುಗ್ಗುತ್ತದೆ ಹಾಗೂ ಸಂಕೀರ್ಣ ಸಾಮಾಜಿಕ ವರ್ತನೆ ಹೆಚ್ಚುತ್ತದೆ.[೪೬]
ಪ್ರೈಮೇಟ್‌ಗಳಲ್ಲಿ ಪ್ರತಿಯೊಂದು ಕೈಕಾಲುಗಳ ಮೇಲೂ ಐದು ಬೆರಳುಗಳು ಇದ್ದು, ಪ್ರತಿಯೊಂದು ಬೆರಳಿಗೂ ಕೆರಟಿನ್ ಉಗುರುಗಳಿರುತ್ತವೆ. ಕೈಕಾಲುಗಳ ಕೆಳಗೆ ಮತ್ತು ಬೆರಳ ತುದಿಯಲ್ಲಿ ಮುಟ್ಟುಮೆತ್ತೆಗಳಿರುತ್ತವೆ (ಈ ಭಾಗದಲ್ಲಿ ಒತ್ತಡ, ಬಿಸುಪು ಮತ್ತು ನೋವಿಗೆ ಹೆಚ್ಚು ಸಂವೇದನೆ ಇರುತ್ತದೆ). ಬಹಳಷ್ಟು ಪ್ರೈಮೇಟ್‌ಗಳಲ್ಲಿನ ಹೆಬ್ಬೆರಳು ವಿರುದ್ಧ ದಿಕ್ಕಿಗೆ ಇದ್ದು ಈ ಲಕ್ಷಣವು ಈ ಗಣಕ್ಕೆ ಅಷ್ಟೇ ಸೀಮಿತವಾಗಿಲ್ಲ (ಉದಾಹರಣೆಗೆ ಹೊಟ್ಟೆಚೀಲ ಸಸ್ತನಿ ಒಪೊಸ್ಸಮ್ ಮತ್ತು ಕೊಯಲ ಕರಡಿಗಳಲ್ಲಿ ಸಹ ಹೆಬ್ಬರಳ ದಿಕ್ಕು ವಿರುದ್ಧವಾಗಿರುತ್ತದೆ).[೪೩] ಈ ರೀತಿಯ ಹೆಬ್ಬರಳು ಕೆಲವು ಪ್ರಭೇದಗಳಲ್ಲಿ ಪರಿಕರ ಬಳಕೆಗೆ ಅವಕಾಶ ಮಾಡಿಕೊಡುತ್ತವೆ. ಪ್ರೈಮೇಟ್‌ಗಳಲ್ಲಿನ ವಿರುದ್ಧ ದಿಕ್ಕಿನ ಹೆಬ್ಬೆರಳು ಮತ್ತು ಸಣ್ಣ ಉಗುರಗಳ (ದೊಡ್ಡ ಮೊನೆಯುಗುರು ಇಲ್ಲದ್ದು) ಗುಣಗಳ ಜೋಡಿ ಕೊಂಬೆಗಳನ್ನು ಹಿಡಿದುಕೊಳ್ಳುವ ಪ್ರವೃತ್ತಿಯ ಉಳಿಕೆ. ಇದು ಭಾಗಶ ಕೆಲವೊಂದು ಪ್ರಭೇದಗಳಲ್ಲಿ ಪ್ರಮುಖ ಚಲನೆಯಾಗಿ ಬಾಹುಗಮನ ಅಭಿವೃದ್ಧಿಯಾಗಲು ಸಹಾಯ ಮಾಡಿದೆ. ಪ್ರೊಸಿಮಿಯನ್‌ಗಳ ಪ್ರತಿ ಕಾಲಿನ ಎರಡನೆಯ ಬೆರಳು ಉಗರು ಮೊನೆಯುಗುರಾಗಿದೆ. ಇದನ್ನು ಟಾಯಲೆಟ್-ಮೊನೆಯುಗುರು ಎಂದು ಕರೆಯುತ್ತಿದ್ದು ಇದನ್ನು ಶುಚಿಮಾಡಲು ಬಳಸಲಾಗುತ್ತದೆ.[೪೩]
ಪ್ರೈಮೇಟ್‌ಗಳ ಕೊರಳುಪಟ್ಟಿ ಎಲುಬು ಬುಜಾಸ್ಥಿ ಚಕ್ರದ ಪ್ರಮುಖ ಅಂಶವಾಗಿದ್ದು ಇದು ಭುಜ ಕೀಲಿನ ಅಗಲ ಚಲನೆಗೆ ಅವಕಾಶ ಮಾಡಿಕೊಡುತ್ತದೆ.[೪೭] ವಾನರಗಳಲ್ಲಿ ಬೆನ್ನೆಲುಬು ಬೆನ್ನಿಗೆ ಹತ್ತಿರ ಇರುವುದು, ಪಕ್ಕೆಲುಬುಗಳ ಗೂಡು ಹಿಂದು –ಮುಂದು ಹೆಚ್ಚು ಮಟ್ಟಸವಾಗಿರುವುದು ಮತ್ತು ಸಣ್ಣ ಹಾಗೂ ಹೆಚ್ಚು ಚಲನಶೀಲ ಬೆನ್ನೆಲುಬಗಳ ಕಾರಣಕ್ಕೆ ಅವುಗಳ ಬುಜಗಳ ಕೀಲು ಮತ್ತು ಕೈಕಾಲುಗಳಿಗೆ ಹಳೆಯ ಪ್ರಪಂಚದ ಕೋತಿಗಳಿಗಿಂತ ಹೆಚ್ಚು ಚಲನೆ ಇರುತ್ತದೆ (ಇದರೊಂದಿಗೆ ಕೆಳ ಬೆನ್ನೆಲುಬು ಸಣ್ಣದಾಗುತ್ತದೆ ಮತ್ತು ಕೆಲವು ಪ್ರಭೇದಗಳಲ್ಲಿ ಇದು ಬಾಲವು ಇಲ್ಲವಾಗುವುದಕ್ಕೆ ಕಾರಣವಾಗುತ್ತದೆ). ಬಹಳಷ್ಟು ಹಳೆಯ ಪ್ರಪಂಚದ ಕೋತಿಗಳು ವಾನರಗಳಂತೆ ಅಲ್ಲದೆ ಬಾಲವನ್ನು ಹೊಂದಿರುತ್ತವೆ. ಹೊಸ ಪ್ರಪಂಚದ ಕೋತಿಗಳಲ್ಲಿ ಊಳು ಕಪಿ, ಜೇಡ ಕೋತಿ, ಉಣ್ಣೆ ಜೇಡ ಕೋತಿ, ಉಣ್ಣೆಕೋತಿ ಮತ್ತು ಕಾಪುಚಿನ್‌ಗಳಿಗೆ ಗ್ರಾಹಕ (ಪ್ರಿಹೆನ್‌ಸೈಲ್) ಬಾಲ ಇರುತ್ತದೆ.[೪೮][೪೯] ಗಂಡು ಪ್ರೈಮೇಟ್‌ಗಳಿಗೆ ತೂಗುಬಿದ್ದ ಲೈಂಗಿಕ ಅಂಗವಿರುತ್ತದೆ ಮತ್ತು ವೃಷಣಕೋಶದಲ್ಲಿ ತರಡುಬೀಜ ಇರುತ್ತದೆ.[೫೦][೫೧]
ಪ್ರೈಮೇಟ್‌ಗಳು ಮೂತಿ ಕಿರಿದಾಗುವ ವಿಕಸನ ಪ್ರವೃತ್ತಿ ತೋರುತ್ತವೆ.[೪೭] ತಾಂತ್ರಿಕವಾಗಿ ಹಳೆಯ ಪ್ರಪಂಚದ ಕೋತಿಗಳು ಹೊಸ ಪ್ರಪಂಚದ ಕೋತಿಗಳಿಂದ ಮೂಗಿನ ರಚನೆ ಮತ್ತು ವಾನರಗಳಿಂದ ಹಲ್ಲಿನ ವ್ಯವಸ್ಥೆಯಲ್ಲಿ ಭಿನ್ನವಾಗುತ್ತವೆ.[೪೬] ಹೊಸ ಪ್ರಪಂಚದ ಕೋತಿಗಳಲ್ಲಿ ಮೂಗಿನ ಹೊಳ್ಳೆಗಳು ಪಕ್ಕಕ್ಕೆ ಮುಖ ಮಾಡಿರುತ್ತವೆ ಮತ್ತು ಹಳೆಯ ಪ್ರಪಂಚದ ಕೋತಿಗಳಲ್ಲಿ ಇವು ಕೆಳಗೆ ಮುಖ ಮಾಡಿರುತ್ತವೆ.[೪೬] ಹಲ್ಲಿನ ವಿನ್ಯಾಸವು ಹಲವು ಪ್ರೈಮೇಟ್‌ಗಳಲ್ಲಿ ಭಿನ್ನವಾಗಿದೆ. ಆದರೆ ಕೆಲವು ತಮ್ಮ ಎಲ್ಲಾ ಬಾಚಿಹಲ್ಲುಗಳನ್ನೂ ಕಳೆದುಕೊಂಡಾಗಲೂ ಕನಿಷ್ಠ ಒಂದು ಕೆಳ ಬಾಚಿಹಲ್ಲನ್ನು ಉಳಿಸಿಕೊಂಡಿವೆ.[೪೬] ಸ್ಟ್ರೆಪ್ಸಿರ್ಹಿನಿಗಳಲ್ಲಿ ಕೆಳ ಬಾಚಿಹಲ್ಲು ಮತ್ತು ಕೋರೆಹಲ್ಲುಗಳು ಹಲ್ಲುಬಾಚಣಿಗೆಯಾಗಿವೆ ಮತ್ತು ಇದು ಶುಚಿಗೊಳಿಸಲು ಮತ್ತು ಕೆಲವೊಮ್ಮೆ ಮೇವು ತಿನ್ನಲು ಸಹಾಯಕ.[೪೬][೫೧] ಅಲ್ಲದೆ ಇವುಗಳಲ್ಲಿನ ಮೊದಲ ಕೆಳ ಪ್ರಿಮೊಲಾರ್ (ಪೂರ್ವಅರೆಯುವ) ಹಲ್ಲುಗಳು ಕೋರೆಹಲ್ಲಿನ ಆಕಾರ ಪಡೆದಿವೆ. ಹಳೆಯ ಪ್ರಪಂಚದ ಕೋತಿಗಳಲ್ಲಿ ಪ್ರಿಮೊಲಾರ್‌ಗಳು ಎಂಟು ಇದ್ದರೆ ಹೊಸ ಪ್ರಪಂಚದ ಕೋತಿಗಳಲ್ಲಿ ಅವುಗಳ ಸಂಖ್ಯೆ ಹನ್ನೆರಡು.[೪೬] ಹಳೆಯ ಪ್ರಪಂಚದ ಪ್ರಭೇದಗಳನ್ನು ವಾನರಗಳು ಮತ್ತು ಕೋತಿಗಳಾಗಿ ಅವುಗಳ ಮೊಲಾರ್‌ಗಳ (ಅರೆಯುವ ಹಲ್ಲು) ಮೇಲಿರುವ ಚಾಚುಮೊನೆಗಳ ಆಧಾರದ ಮೇಲೆ ವಿಭಜಿಸಲಾಗಿದೆ. ವಾನರಗಳಲ್ಲಿ ಈ ಚಾಚುಮೊನೆಗಳು ಐದು ಇದ್ದರೆ , ಹಳೆಯ ಪ್ರಪಂಚದ ಕೋತಿಗಳಲ್ಲಿ ಈ ಚಾಚುಮೊನೆಯ ಸಂಖ್ಯೆ ನಾಲ್ಕು.[೪೬] ಮಾನವರಲ್ಲಿ ಈ ಚಾಚುಮೊನೆಗಳು ನಾಲ್ಕು ಅಥವಾ ಐದು ಇರಬಹುದು.[೫೨] ಪ್ರಮುಖ ಹೊಮಿನಿಡ್ ಮೊಲಾರ್ ಚಾಚುಮೊನೆ ಆರಂಭಕ ಪ್ರೈಮೇಟ್ ಇತಿಹಾಸದಲ್ಲಿ ವಿಕಾಸವಾಯಿತು ಮತ್ತು ಸಂಬಂಧಿತ ಪ್ರಾಚೀನ ಪ್ರೈಮೇಟ್‌ನ ಕೆಳ ಮೊಲಾರ್ ಚಾಚುಮೊನೆ ಕಳೆದು ಹೋಯಿತು. ಪ್ರೊಸಿಮಿಯಾನ್‌ಗಳು ಚಲನೆಯಿಲ್ಲದ ಮೇಲ್ತುಟಿ, ಮೂಗಿನ ತೇವಾಂಶದ ಕೊನೆ ಮತ್ತು ಮುಂಚಾಚಿದ ಕೆಳ ಹಲ್ಲುಗಳಿಂದ ಭಿನ್ನವಾಗುತ್ತವೆ.
ಬಹಳಷ್ಟು ಸಸ್ತನಿಗಳಲ್ಲಿನ ಬಣ್ಣದ ನೋಟದ ವಿಕಾಸವು ಪ್ರೈಮೇಟ್‌ಗಳಲ್ಲಿ ವಿಶೇಷವಾದುದು. ಪ್ರೈಮೇಟ್‌ಗಳ ಪೂರ್ವಜ ಕಶೇರುಕಗಳಲ್ಲಿ ಮೂರು ಬಣ್ಣಗಳ ನೋಟವು ನಿಶಾಚರ ಇತ್ತು. ಬಿಸಿ ರಕ್ತದ ಸಸ್ತನಿ ಪೂರ್ವಜರಲ್ಲಿ ಮೆಸೊಜೋಯಿಕ್ ಯುಗದಲ್ಲಿ ರೆಟಿನಾದಲ್ಲಿದ್ದ ಮೂರು ಕೋನುಗಳಲ್ಲಿ ಒಂದು ಕಳೆದು ಹೋಯಿತು. ಮೀನು, ಸರೀಸೃಪ ಮತ್ತು ಹಕ್ಕಿಗಳು ತ್ರಿವರ್ಣಿ ಅಥವಾ ಚತುರ್ವರ್ಣಿಗಳಾಗಿದ್ದಾಗ್ಯೂ ಕೆಲವು ಪ್ರೈಮೇಟ್ ಮತ್ತು ಹೊಟ್ಟೆಚೀಲ ಸಸ್ತನಿಗಳನ್ನು ಹೊರತು ಪಡಿಸಿ[೫೩] ಎಲ್ಲಾ ಸಸ್ತನಿಗಳು ದ್ವಿವರ್ಣಿ ಅಥವಾ ಏಕವರ್ಣಿ (ಪೂರ್ಣವಾಗಿ ಬಣ್ಣಗುರುಡು).[೫೧] ರಾತ್ರಿ ಕೋತಿಗಳು ಮತ್ತು ಬುಶ್ ಬೇಬಿಗಳಂತಹ ನಿಶಾಚರ ಪ್ರೈಮೇಟ್‌ಗಳು ಬಹಳಷ್ಟು ಸಲ ಏಕವರ್ಣಿಗಳು. ಕಾಟರ್ಹಿನಿಗಳು ಆರಂಭದಲ್ಲಿಯೇ, ೩೦ ರಿಂದ ೪೦ ದವಹಿಂ, ಕೆಂಪು-ಹಸಿರು ಆಪ್ಸಿನ್ ವಂಶವಾಹಿ ನಕಲಾಗುವಿಕೆಯ ಕಾರಣಕ್ಕೆ ಸಾಮಾನ್ಯವಾಗಿ ತ್ರಿವರ್ಣಿಗಳು.[೫೧][೫೪] ಇದಕ್ಕೆ ಭಿನ್ನವಾಗಿ ಪ್ಲಾಟಿರ್ಹಿನಿಗಳು ಕೆಲವು ಸಂದಂರ್ಭಗಳಲ್ಲಿ ಮಾತ್ರ ತ್ರಿವರ್ಣಿ.[೫೫] ನಿರ್ದಿಷ್ಟವಾಗಿ ಹೆಣ್ಣು ಎಕ್ಸ್ ವರ್ಣತಂತು ಮೇಲಿರುವ ಆಪ್ಸಿನ್ ವಂಶವಾಹಿಗಳಿಗೆ ಭಿನ್ನಯುಗ್ಮಜ (ಹೆಟರೊಜೈಗೋಟ್) ಆಗಿರ ಬೇಕು.[೫೧] ಹೀಗಾಗಿ ಗಂಡುಗಳು ದ್ವಿವರ್ಣಿಗಳು ಮತ್ತು ಹೆಣ್ಣುಗಳು ದ್ವಿ ಅಥವಾ ತ್ರಿವರ್ಣಿಗಳು ಆಗಿರ ಬಲ್ಲವು. ಸ್ಟ್ರೆಪ್ರಿರ್ಹಿನಿಯ ಬಣ್ಣದ ನೋಟದ ಬಗೆಗೆ ಹೆಚ್ಚಿನ ವಿವರಗಳು ಅರ್ಥವಾಗಿಲ್ಲ. ಆದರೆ ಸಂಶೋಧಕರು ಅವುಗಳಲ್ಲಿನ ಬಣ್ಣದ ನೋಟದ ವ್ಯವಸ್ಥೆ ಸಹ ಪ್ಲಾಟಿರ್ಹಿನಿಗಳನ್ನು ಹೋಲುತ್ತದೆ ಎಂದಿದ್ದಾರೆ.[೫೧]
ಕಾಟರ್ಹಿನಿಗಳಲ್ಲಿದ್ದಂತೆ ಊಳುಕಪಿ (ಹೌಲರ್ ಕೋತಿ-ಪ್ಲಾಟರ್ಹಿನಿಯ ಒಂದು ಕುಟುಂಬ) ಸಾಮಾನ್ಯವಾಗಿ ತ್ರಿವರ್ಣಿ ಮತ್ತು ಇದು ಇತ್ತೀಚಿನ ವಂಶವಾಹಿ ನಕಲಾಗುವಿಕೆಯ ಕಾರಣಕ್ಕೆ ಉಂಟಾಗಿದೆ.[೫೬] ಊಳುಕಪಿ ಹೊಸ ಪ್ರಪಂಚದ ಕೋತಿಗಳಲ್ಲಿ ವಿಶೇಷವಾಗಿ ಎಲೆ ತಿನ್ನುವು ಕೋತಿ, ಹಣ್ಣುಗಳು ಇದರ ಆಹಾರದ ಪ್ರಮುಖ ಭಾಗವಲ್ಲ.[೫೭] ಹೀಗಾಗಿ ಅದು ತಿನ್ನುವ (ಎಳೆಯ, ಪೋಷಕಾಂಶಗಳ ಮತ್ತು ಜೀರ್ಣವಾಗಬಲ್ಲ) ಎಲೆಯನ್ನು ಗುರುತಿಸುವುದು ಕೆಂಪು-ಹಸಿರು ಗುರುತಿಸುವಾಗ ಮಾತ್ರ ಸಾಧ್ಯ. ಊಳಕಪಿಯ ಆಹಾರ ಆಯ್ದುಕೊಳ್ಳುವಿಕೆಯ ಕ್ಷೇತ್ರ ಅಧ್ಯಯನವು ಸಾಮಾನ್ಯ ತ್ರಿವರ್ಣಿ ಗುಣವು ಪರಿಸರದ ಆಯ್ಕೆಯಾಗಿದೆ ಎನ್ನುತ್ತದೆ.[೫೫]
ಸಿಮಿಯನ್‌ಗಳು ಕೆಲವೊಮ್ಮೆ ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುತ್ತವೆ. ಹಳೆಯ ಪ್ರಪಂಚದ ಪ್ರಭೇದಗಳಲ್ಲಿ (ವಾನರಗಳು ಮತ್ತು ಕೆಲವು ಕೋತಿಗಳಲ್ಲಿ) ಹೊಸ ಪ್ರಪಂಚದ ಪ್ರಭೇದಗಳಿಗಿಂತ ಇದು ಹೆಚ್ಚು. ಇತ್ತೀಚಿನ ಅಧ್ಯಯನಗಳು ದ್ವಿರೂಪದಲ್ಲಿನ ವ್ಯತ್ಯಾಸಗಳ ಅಭಿವ್ಯಕ್ತಿ ಮತ್ತು ಅದಕ್ಕೆ ಮೂಲ ಕಾರಣ ಪರಿಶೀಲಿಸಲು ಡಿಎನ್‌ಎ ಹೋಲಿಕೆಯನ್ನು ಮಾಡಲಾಗುತ್ತಿವೆ. ಪ್ರೈಮೇಟ್‌ಗಳಲ್ಲಿ ದ್ವಿರೂಪವು ಸಾಮಾನ್ಯವಾಗಿ ದೇಹದ ಗಾತ್ರ[೫೮][೫೯] ಮತ್ತು ಕೋರೆಹಲ್ಲಿನ ಗಾತ್ರ[೬೦][೬೧] ಜೊತೆಗೆ ತುಪ್ಪಳ ಮತ್ತು ಚರ್ಮದ ಬಣ್ಣವನ್ನೂ ಒಳಗೊಳ್ಳುತ್ತದೆ.[೬೨] ದ್ವಿರೂಪಕ್ಕೆ ಕಾರಣವಾಗುವ ಹಲವು ಅಂಶಗಳಿದ್ದು ಅವುಗಳಲ್ಲಿ ಲೈಂಗಿಕ ವ್ಯವಸ್ಥೆ,[೬೩] ಗಾತ್ರ,[೬೩] ವಾಸಸ್ಥಾನ ಮತ್ತು ಆಹಾರಗಳೂ ಇವೆ.[೬೪]
ಹೋಲಿಕೆಯ ವಿಶ್ಲೇಷಣೆ ಲೈಂಗಿಕ ಆಯ್ಕೆ, ನೈಸರ್ಗಿಕ ಆಯ್ಕೆ ಮತ್ತು ಪ್ರೈಮೇಟ್‌ಗಳ ಲೈಂಗಿಕ ವ್ಯವಸ್ಥೆಯ ನಡುವಿನ ಸಂಬಂಧವನ್ನು ಹೆಚ್ಚು ಪೂರ್ಣವಾಗಿ ಅರ್ಥೈಸಲು ಅವಕಾಶ ಮಾಡಿಕೊಟ್ಟಿದೆ. ಅಧ್ಯಯನಗಳು ದ್ವಿರೂಪವು ಗಂಡು ಮತ್ತು ಹೆಣ್ಣಿನ ಗುಣಗಳಲ್ಲಿನ ಬದಲಾವಣೆಯ ಕಾರಣಕ್ಕೆ ಉಂಟಾಗಿದೆ ಎನ್ನುತ್ತವೆ.[೬೫] ಪಳಿಯುಳಿಕೆಗಳ ಕೆಲವು ಪುರಾವೆಗಳು ದ್ವಿರೂಪದ ಒಮ್ಮುಖ ವಿಕಾಸವಾದ (ಕಾನ್ವರ್ಜೆಂಟ್ ಎವುಲ್ಯೂಶನ್- ಒಂದೇ ಗುಣ ಸ್ವತಂತ್ರವಾಗಿ ವಿಕಾಸವಾಗುವುದು) ಸೂಚನೆ ನೀಡುತ್ತವೆ ಮತ್ತು ಕೆಲವು ಅಳಿದ ಹೊಮಿನಿಡ್‌ಗಳಲ್ಲಿ ಬಹುಶ ದ್ವಿರೂಪ ಬದುಕಿರುವ ಪ್ರೈಮೇಟ್‌ಗಳಿಗಿಂತ ಹೆಚ್ಚು ಇತ್ತು.[೬೫]
ಪ್ರೈಮೇಟ್ ಪ್ರಭೇದಗಳು ಬಾಹುಗಮನ, ದ್ವಿಪಾದಿ, ಹಾರುವುದು, ಮರಗಳ ಮೇಲೆ ಮತ್ತು ಭೂಮಿಯ ಮೇಲೆ ನಾಲ್ಕುಕಾಲ ನಡಿಗೆ, ಹತ್ತುವುದು, ಗೆಣ್ಣುನಡಿಗೆ (ಗೊರಿಲ್ಲಗಳಲ್ಲಿ ಇದ್ದಂತೆ) ಅಥವಾ ಈ ಯಾವುದೇ ಪದ್ಧತಿಗಳ ಕೆಲವು ರೀತಿಯ ಚಲನೆಯನ್ನು ಪಡೆದಿವೆ. ಹಲವು ಪ್ರೊಸಿಮಿಯನ್‌ಗಳು ಮೂಲಭೂತವಾಗಿ ಲಂಬವಾಗಿ ಜೋತಾಡ ಬಲ್ಲವು ಮತ್ತು ಹಾರಬಲ್ಲವು. ಇದು ಬುಶ್‌ಬೇಬಿ, ಎಲ್ಲಾ ಇಂದ್ರಿಡ್ (ಸಿಫಾಕ, ಅವ್ಹಿ ಮತ್ತು ಇಂದ್ರಿ), ಕ್ರೀಡಾ ಲೆಮುರ್ ಮತ್ತು ಎಲ್ಲಾ ಟಾರ್ಸಿಯರ್‌ಗಳನ್ನು ಒಳಗೊಂಡಿದೆ.[೬೬] ಇತರ ಪ್ರೊಸಿಮಿಯನ್‌ಗಳು ಮರಗಳಲ್ಲಿ ನಾಲ್ಕುಕಾಲುಗಳಲ್ಲಿ ಚಲಿಸುತ್ತವೆ ಮತ್ತು ಹತ್ತಬಲ್ಲವು. ಗಿಬ್ಬಾನ್, ಮುರಿಕ್ವಿ ಮತ್ತು ಜೇಡ ಕೋತಿ ಬಾಹುಗಮನ ಮಾಡಬಲ್ಲವು (ಕೊಂಬೆಯಿಂದ ಕೊಂಬೆಗೆ ಹಾರಬಲ್ಲವು)[೪೧] ಮತ್ತು ಗಿಬ್ಬಾನ್‌ನಲ್ಲಿ ಬಾಹುಗಮನ ತೀರ ಸಾಹಸಮಯವಾಗಿರುತ್ತದೆ. ಉಣ್ಣೆ ಕೋತಿಗಳು ಸಹ ಕೆಲವೊಮ್ಮೆ ಬಾಹುಗಮನವಾಗಿ ಚಲಿಸ ಬಲ್ಲವು.[೫೭] ಒರಂಗುಟಾನ್‌ಗಳು ನಾಲ್ಕುಕಾಲ ಹತ್ತುವಿಕೆಯ ಮೂಲಕ ತಮ್ಮ ದೊಡ್ಡ ದೇಹವನ್ನು ಮರಗಳ ಮೂಲಕ ಸಾಗಿಸುತ್ತವೆ.[೪೧] ಚಿಂಪಾಜಿ ಮತ್ತು ಗೊರಿಲ್ಲಗಳು ಗೆಣ್ಣು ನಡಿಗೆಯಲ್ಲಿ ಚಲಿಸುತ್ತವೆ ಮತ್ತು ಕೆಲವೊಮ್ಮೆ ಎರಡುಕಾಲಗಳ ಮೇಲೆಯೂ ತುಸು ದೂರ ನಡೆಯ ಬಲ್ಲವು. ಅಸ್ಟ್ರಲೊಪಿತೆಕಸ್ ಮತ್ತು ಆರಂಭಿಕ ಹೊಮಿನಿಡ್ ಗಳಂತಹ ಬಹಳಷ್ಟು ಪ್ರಭೇದಗಳು ದ್ವಿಪಾದಿಗಳಾಗಿದ್ದವಾದರೂ ಈಗ ಉಳಿದುಕೊಂಡಿರುವ ಒಂದೇ ದ್ವಿಪಾದಿ ಅಥವಾ ಪೂರ್ಣವಾಗಿ ಎರಡು ಕಾಲಮೇಲೆ ನಡೆಯುವ ಪ್ರಭೇದ ಮಾನವರು ಮಾತ್ರ.[೬೭]
ಪ್ರೈಮೇಟ್‌ಗಳು ತೀರ ಹೆಚ್ಚು ಸಾಮಾಜಿಕ ಜೀವಿಗಳು, ಜೋಡಿಗಳಾಗಿ, ಕುಟುಂಬ ಗುಂಪುಗಳಾಗಿ, ಒಂದೇ ಗಂಡಿರುವ ಗುಂಪು ಮತ್ತು ಬಹು ಗಂಡು/ಬಹು ಹೆಣ್ಣುಗಳಿರುವ ಗುಂಪುಗಳಾಗಿ ಅವು ಬದುಕುತ್ತವೆ.[೬೮] ರಿಚರ್ಡ್ ವ್ರಾಂಗ್‌ಹಾಮ್ ಪ್ರಕಾರ ಮಾನವೇತರ ಪ್ರೈಮೇಟ್‌ಗಳ ಸಾಮಾಜಿಕ ವ್ಯವಸ್ಥೆಯನ್ನು ಹೆಣ್ಣುಗಳು ಗುಂಪುಗಳ ನಡುವೆ ವರ್ಗಾವಣೆಯಾಗುವದ ಆಧಾರದ ಮೇಲೆ ವರ್ಗೀಕರಿಸ ಬಹುದು. ಅವರು ನಾಲ್ಕು ವರ್ಗಗಳನ್ನು ಪ್ರಸ್ತಾಪಿಸುತ್ತಾರೆ.[೬೯]
ಇತರ ವ್ಯವಸ್ಥೆಗಳೂ ಇವೆ, ಉದಾಹರಣೆಗೆ ಊಳುಕಪಿಯಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ ಲೈಂಗಿಕವಾಗಿ ಬೆಳೆದ ನಂತರ ಮೂಲ ಗುಂಪನ್ನು ತೊರೆಯುತ್ತವೆ ಮತ್ತು ಇದು ಸಂಬಂಧಿಸದ ಗಂಡು ಮತ್ತು ಹೆಣ್ಣುಗಳ ಗುಂಪನಲ್ಲಿ ಕೊನೆಗೊಳ್ಳುತ್ತದೆ.[೫೭] ಕೆಲವು ಪ್ರೊಸಿಮಿಯನ್‌ಗಳು, ಕೊಲೊಬೈನ್ ಕೋತಿ ಮತ್ತು ಕಾಲಿಟ್ರಿಚಿಡ್ ಕೋತಿಗಳಲ್ಲಿ ಈ ವ್ಯವಸ್ಥೆ ಇದೆ.[೪೧] ಹೆಣ್ಣು ಮತ್ತು ಗಂಡುಗಳ ಮೂಲ ಗುಂಪಿನಿಂದ ಸಿಡಿದು ಹೋಗುವುದು ಅಂತಸ್ಸಂಬಂಧ (ಇನ್‌ಬ್ರೀಡಿಂಗ್) ಮಾಡದಿರಲು ಇರುವ ಹೊಂದಾಣಿಕೆ ಯಾಗಿರಲು ಸಾಧ್ಯ.[೭೩] ಒಂದು ವಿಶ್ಲೇಷಣೆಯಲ್ಲಿ ಬಂಧನದಲ್ಲಿರುವ ಪ್ರೈಮೇಟ್ ಕಾಲನಿಗಳ ಹಲವು ಪ್ರಭೇದಗಳಲ್ಲಿ ಅಂತಸ್ಸಂಬಂಧ ಮರಿಯ ಸಾಯುವಿಕೆಯು ಅಂತಸ್ಸಂಬಂಧವಲ್ಲದ ಮರಿಗಳ ಸಾಯುವಿಕೆಗಿಂತ ಹೆಚ್ಚು ಎಂದು ಹೇಳುತ್ತದೆ.[೭೩][೭೪] ಈ ಅಂತಸ್ಸಂಬಂಧದ ಮರಿಗಳ ಸಾವು ಹಾನಿಕಾರಕ ಅಪ್ರಭಾವಿ ಅಲೆಲ್‌ಗಳ ಹೆಚ್ಚಳದಿಂದ ಆಗಿರ ಬಹುದು.
ಗೊಂಬೆ ಸ್ಟ್ರೀಮ್ ನ್ಯಾಶನಲ್ ಪಾರ್ಕ್‌ನಲ್ಲಿ ಅಧ್ಯಯನ ಮಾಡಿದ ಪ್ರೈಮೇಟ್ ವಿದ್ವಾಂಸರಾದ ಜೇನ್ ಗುಡಾಲ್ ಚಿಂಪಾಜಿಗಳದು ವಿದಳನ-ಬೆಸುಗೆ ಸಮಾಜವೆಂದು ಟಿಪ್ಪಣಿ ಮಾಡಿದರು.[೭೫] ಹಗಲಿನಲ್ಲಿ ಮೇಯುವುದಕ್ಕಾಗಿ ಅವು ವಿದಳನಗೊಳ್ಳುತ್ತವೆ ಮತ್ತು ರಾತ್ರಿ ಮಲಗಲು ಬೆಸುಗೆಯಾಗುತ್ತವೆ ಎನ್ನುತ್ತಾರೆ ಅವರು. ಈ ಸಾಮಾಜಿಕ ರಚನೆ ಹಮಡ್ರೈಯಾಸ್ ಬಬೂನ್[೭೬], ಜೇಡ ಕೋತಿ[೫೭] ಮತ್ತು ಬೊನೊಬೊಗಳಲ್ಲಿ[೭೬] ಸಹ ಕಂಡುಬರುತ್ತದೆ. ಗಲೆಡ ಸಾಮಾಜಿಕ ರಚನೆಯೂ ಸಹ ಇದನ್ನೇ ಹೋಲುತ್ತಿದ್ದು ಹಲವು ಸಣ್ಣ ಗುಂಪುಗಳು ೬೦೦ ಕೋತಿಗಳಷ್ಟು ದೊಡ್ಡ ತಾತ್ಕಾಲಿಕ ಮಂದೆಯಾಗಿ ಸೇರ ಬಹುದು.[೭೬]
ಸಾಮಾಜಿಕ ವ್ಯವಸ್ಥೆಯು ಮೂರು ಪ್ರಮುಖ ಪರಿಸರದ ಅಂಶಗಳಿಂದ ಪ್ರಭಾವಿತವಾಗ ಬಹುದು. ಸಂಪನ್ಮೂಲಗಳ ಹಂಚಿಕೆ, ಗುಂಪಿನ ಗಾತ್ರ ಮತ್ತು ಪರಭಕ್ಷಕ.[೭೭] ಸಾಮಾಜಿಕ ಗುಂಪಿನ ಒಳಗೆ ಸ್ಪರ್ಧೆ ಮತ್ತು ಸಹಕಾರದ ಸಮತೋಲನ ಇರುತ್ತದೆ. ಸಾಮಾಜಿಕ ವರ್ತನೆ ಸಾಮಾಜಿಕ ಶುಚಿಗೊಳಿಸುವಿಕೆ (ಪರಜೀವಿಗಳ ತೆಗೆದು ಹಾಕುವಿಕೆ ಮತ್ತು ಗಾಯಗಳ ಆರೈಕೆ), ಆಹಾರ ಹಂಚಿಕೊಳ್ಳುವಿಕೆ , ಪರಭಕ್ಷಕಗಳಿಂದ ಮತ್ತು ಗಡಿಯ ಸಾಮೂಹಿಕ ರಕ್ಷಣೆ ಒಳಗೊಳ್ಳುತ್ತದೆ. ಆಕ್ರಮಣಕಾರಿ ಪ್ರವೃತ್ತಿಯು ಆಹಾರ, ಮಲುಗುವಿಕೆ ಸ್ಥಳ ಮತ್ತು ಲೈಂಗಿಕ ಜೋಡಿಗಾಗಿ ಸ್ಪರ್ಧೆಯಲ್ಲಿ ಕಂಡುಬರುತ್ತದೆ. ಆಕ್ರಮಣವನ್ನು ಪ್ರಭಾವ ಶ್ರೇಣಿ ವ್ಯವಸ್ಥೆಯನ್ನು ರೂಪಿಸಲು ಬಳಸಲಾಗುತ್ತದೆ.[೭೭][೭೮]
ಪ್ರೈಮೇಟ್ ಸಸ್ತನಿ ವರ್ಗದ ಪ್ರಾಣಿಗಳ ಒಂದು ಗಣ (ಆರ್ಡರ್). ಈ ಗಣದ ಟ್ಯಾಕ್ಸಾನಮಿಯಲ್ಲಿ (ಜೀವ ವರ್ಗೀಕರಣಶಾಸ್ತ್ರ) ಎರಡು ವಿಭಿನ್ನ ವಂಶಾವಳಿಗಳಿದ್ದು ಅವು ಸ್ಟ್ರೆಪ್ಸಿರ್ಹಿನಿ ಮತ್ತು ಹಾಪ್ಲೊರ್ಹಿನಿ. ಪ್ರೈಮೇಟ್‌ಗಳು ಉಷ್ಣವಲಯದ ಕಾಡುಗಳಲ್ಲಿ ಬದುಕುತ್ತಿದ್ದ ಜೀವಿಗಳಿಂದ ವಿಕಾಸವಾದವು ಮತ್ತು ಹಲವು ಪ್ರೈಮೇಟ್‌ಗಳ ಗುಣಗಳು ಇಲ್ಲಿಯ ಮೂರು ಆಯಾಮಗಳ ಸವಾಲಾದ ಪರಿಸರಕ್ಕೆ ಹೊಂದಿಕೊಂಡ ಗುಣಗಳನ್ನು ಪ್ರತಿನಿಧಿಸುತ್ತವೆ. ಪ್ರೈಮೇಟ್‌ಗಳಲ್ಲಿ ಬಹಳಷ್ಟು ಮರವಾಸಿಗಳು.
ಅಂಟಾರ್ಕಿಟಿಕ ಹೊರತು ಪಡಿಸಿ ಎಲ್ಲಾ ಖಂಡಗಳಲ್ಲಿ ವಾಸಿಸುವ ಮಾನವರನ್ನು ಹೊರತು ಪಡಿಸಿದರೆ ಇತರ ಬಹಳಷ್ಟು ಪ್ರೈಮೇಟ್‌ಗಳು ಎರಡು ಅಮೆರಿಕ, ಆಫ್ರಿಕಾ ಮತ್ತು ಏಶಿಯದ ಉಷ್ಣವಲಯ ಮತ್ತು ಅರೆಉಷ್ಣವಲಯದ ಕಾಡುಗಳಲ್ಲಿ ವಾಸಿಸುತ್ತವೆ. ಅವುಗಳ ಗಾತ್ರದ ವ್ಯಾಪ್ತಿ ೩೦ ಗ್ರಾಂ ತೂಗುವ ಮೇಡಂ ಬರ್ತೆಯ ಇಲಿ ಲೆಮುರ್‌ನಿಂದ ೨೦೦ ಕಿಲೊಗ್ರಾಂ ತೂಗುವ ಪೂರ್ವ ಗೊರಿಲ್ಲಗಳವರೆಗೂ ಇದೆ. ಪಳಿಯುಳಿಕೆಗಳ ಪುರಾವೆಗಳ ಆಧಾರದ ಮೇಲೆ ಹೇಳುವುದಾದರೆ ಮೊದಲ ನಿಜ ಪ್ರೈಮೇಟ್ ಟೆಯಿಲ್‌ಹಾರ್ಡಿನ ಕುಲದ ಕಾಲಮಾನ ೫೫.೮ ದಶಲಕ್ಷ ವರುಷಗಳ ಹಿಂದೆ (ದವಹಿಂ). ತಡವಾದ ಪಾಲಿಯೋಸಿನ್, ೫೫-೫೮ ದವಹಿಂನ ಕಾಲಮಾನದಲ್ಲಿ ಬಹಳ ಹೆಚ್ಚಾಗಿ ಕಂಡುಬರುವ ಪ್ರೈಮೇಟ್‌ನ ಹತ್ತಿರದ ಸಂಬಂಧಿ ಪ್ಲೆಸಿಯಡಪಿಸ್. ಅಣ್ವಿಕ ಗಡಿಯಾರದ ಅಧ್ಯಯನಗಳು ಪ್ರೈಮೇಟ್ ಕವಲು ಇನ್ನೂ ಹಳೆಯದು ಕ್ರೆಟೇಶಿಯಸ್ ಪಾಲಿಯೊಜೀನ್ ಗಡಿ ಅಥವಾ ೬೩ ರಿಂದ ೭೪ ದವಹಿಂನದು ಎಂದು ಸೂಚಿಸುತ್ತವೆ.
ಗಣ ಪ್ರೈಮೇಟನ್ನು ಸಂಪ್ರದಾಯಿಕವಾಗಿ ಪ್ರೊಸಿಮಿಯನ್ ಮತ್ತು ಅಂತ್ರೊಪಾಯ್ಡ್ (ಸಿಮಿಯನ್) ಎಂದು ವಿಭಜಿಸಲಾಗುತ್ತಿತ್ತು. ಪ್ರೊಸಿಮಿಯನ್‌ಗಳು ಪ್ರಾಚೀನ ಪ್ರೈಮೇಟ್‌ಗಳನ್ನು ಹೋಲುತ್ತಿದ್ದು ಮಡಗಾಸ್ಕರನ ಲೆಮುರ್‌ಗಳನ್ನು, ಲೊರಿಸೊಯ್ಡ್ ಮತ್ತು ಟಾರ್ಸಿಯರ್‌ಗಳನ್ನು ಒಳಗೊಳ್ಳುತ್ತಿದ್ದವು. ಸಿಮಿಯನ್‌ಗಳು ಕೋತಿ, ವಾನರ ಮತ್ತು ಹೊಮಿನಿನ್‌ಗಳನ್ನು ಒಳಗೊಳ್ಳುತ್ತಿದ್ದವು. ಆದರೆ ಇತ್ತೀಚೆಗೆ ಟಾಕ್ಸಾನಮಿ ತಜ್ಞರು ತೇವಾಂಶದ ಮೂಗಿನ ಗುಂಪಾದ ಉಪಗಣ ಸ್ಟ್ರೆಪ್ಸಿರ್ಹಿನಿ (ಟಾರ್ಸಿಯರ್ ಅಲ್ಲದ ಪ್ರೊಸಿಮಿಯನ್‌ಗಳನ್ನು ಈ ಗುಂಪು ಒಳಗೊಳ್ಳುತ್ತದೆ) ಮತ್ತು ಒಣ ಮೂಗಿನ ಟಾರ್ಸಿಯರ್ ಹಾಗೂ ಸಿಮಿಯನ್‌ಗಳಿರುವ ಉಪಗಣ ಹಾಪ್ಲೊರ್ಹಿನಿಯಾಗಿ ವಿಭಜಿಸಲು ಬಯಸುತ್ತಾರೆ.
ಸಿಮಿಯನ್‌ಗಳನ್ನು ಮುಂದೆ ಕಿರಿಮೂಗಿನ ಕೋತಿಗಳು (ಹಳೆಯ ಪ್ರಪಂಚದ ಕೋತಿಗಳು), ಆಫ್ರಿಕಾ ಮತ್ತು ಆಗ್ನೇಯದ (ದಕ್ಷಿಣ-ಪೂರ್ವ) ವಾನರಗಳನ್ನು ಒಳಗೊಳ್ಳುವ ಕಾಟರ್ಹಿನಿ ಮತ್ತು ದಕ್ಷಿಣ ಹಾಗೂ ಮಧ್ಯ ಅಮೆರಿಕದಲ್ಲಿರುವ ಚಪ್ಪಟೆಮೂಗಿನ ಕೋತಿಗಳನ್ನು (ಹೊಸ ಪ್ರಪಂಚದ ಕೋತಿಗಳು) ಒಳಗೊಳ್ಳುವ ಪ್ಲಾಟಿರ್ಹಿನಿಯಾಗಿ ವಿಭಜಿಸಿದ್ದಾರೆ. ಕಾಟರ್ಹಿನಿ ಹಳೆಯ ಪ್ರಪಂಚದ ಕೋತಿ, ಗಿಬ್ಬಾನ್ ಮತ್ತು ದೊಡ್ಡ ವಾನರಗಳನ್ನೂ ಒಳಗೊಳ್ಳುತ್ತವೆ. ಹೊಸ ಪ್ರಪಂಚದ ಕೋತಿಗಳು ಕಾಪುಚಿನ್, ಊಳು ಕಪಿ ಮತ್ತು ಅಳಿಲು ಕೋತಿಯನ್ನು ಒಳಗೊಳ್ಳುತ್ತದೆ. ಆಫ್ರಿಕಾ, ದಕ್ಷಿಣ ಏಶಿಯ ಮತ್ತು ಪೂರ್ವ ಏಶಿಯದ ಹೊರಗಡೆ ಬದುಕಿರುವ ಏಕೈಕ ಕಾಟರ್ಹಿನಿ ಮಾನವ. ಆದರೆ ಹಿಂದೆ ಯುರೂಪಿನಲ್ಲಿಯೂ ಕಾಟರ್ಹಿನಿಗಳು ಇದ್ದವು ಎಂದು ಪಳಿಯುಳಿಕೆಯು ನಮಗೆ ಸುಳಿವು ನೀಡುತ್ತದೆ. ಹೊಸ ಪ್ರೈಮೇಟ್‌ಗಳನ್ನು ಇನ್ನೂ ಗುರುತಿಸಲಾಗುತ್ತಿದೆ. ೨೦೦೦ದ ದಶಕದಲ್ಲಿ ೨೫ ಪ್ರಭೇದಗಳ ಜೀವ ವರ್ಗೀಕರಣ ಮಾಡಲಾಯಿತು ಮತ್ತು ೨೦೧೦ ರಿಂದ ಇಲ್ಲಿಯವರೆಗೆ ೧೧ ಪ್ರೈಮೇಟ್‌ಗಳನ್ನು ವಿವರಿಸಲಾಗಿದೆ.
ಸೀಮಿತವಲ್ಲದ ಸಸ್ತನಿಗಳು ಎಂದು ಪರಿಗಣಿಸಲಾದ ಪ್ರೈಮೇಟ್‌ಗಳು ವ್ಯಾಪಕ ಗುಣ ವ್ಯತ್ಯಾಸಗಳನ್ನು ಪ್ರತಿನಿಧಿಸುತ್ತವೆ. ಮಾನವ ಮತ್ತು ಬಬೂನ್‌ಗಳಂತೆ ಕೆಲವು ಮೂಲತಹ ಭೂವಾಸಿಗಳಾದರೆ ಎಲ್ಲ ಪ್ರೈಮೇಟ್‌ಗಳು ಮರ ಹತ್ತಲು ಹೊಂದಾಣಿಕೆ ಪಡೆದಿವೆ. ಇವುಗಳ ಚಲನೆಯ ಸ್ವರೂಪ- ಮರದಿಂದ ಮರಕ್ಕೆ ಹಾರುವುದು, ಎರಡು ಅಥವಾ ನಾಲ್ಕು ಕಾಲುಗಳ ಮೇಲೆ ನಡೆಯುವುದು, ಗೆಣ್ಣುಗಳ ಮೇಲೆ ನಡಿಗೆ ಮತ್ತು ಬಾಹುಗಮನ (ಕೊಂಬೆಯಿಂದ ಕೊಂಬೆಗೆ ತೂಗಾಡುತ್ತಾ ಸಾಗುವುದು).
ಪ್ರೈಮೇಟ್‌ಗಳ ಮಿದುಳು ಇತರ ಸಸ್ತನಿಗಳಿಗೆ ಹೋಲಿಸಿದರೆ ದೊಡ್ಡದು. ಅವುಗಳಲ್ಲಿ ಇತರ ಸಸ್ತನಿಗಳಲ್ಲಿ ಪ್ರಮುಖವಾದ ವಾಸನೆ ಶಕ್ತಿ ಕುಗ್ಗುತ್ತದೆ ಮತ್ತು ಮೂರು ಆಯಾಮಗಳ ನೋಟದ ಮಹತ್ವ ಹೆಚ್ಚಾಗುತ್ತದೆ. ಈ ಲಕ್ಷಣ ಲೋರಿಸ್ ಮತ್ತು ಲೆಮುರ್‌ಗಳಿಗಿಂತ ಕೋತಿಗಳು ಮತ್ತು ವಾನರಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಮೂರು ಬಣ್ಣಗಳ ನೋಟ ಕೆಲವು ಪ್ರೈಮೇಟ್‌ಗಳಲ್ಲಿ ವಿಕಾಸವಾಗಿದೆ. ಬಹಳಷ್ಟು ಪ್ರೈಮೇಟ್‌ಗಳಲ್ಲಿ ಕೈಯ ಹೆಬ್ಬರಳು ವಿರುದ್ಧ ದಿಕ್ಕಿನಲ್ಲಿದೆ ಮತ್ತು ಕೆಲವದರಲ್ಲಿ ಗ್ರಾಹಕ ಬಾಲ ಇದೆ. ಇವುಗಳಲ್ಲಿ ಲೈಂಗಿಕ ದ್ವಿರೂಪತೆ (ಹೆಣ್ಣು ಮತ್ತು ಗಂಡುಗಳಲ್ಲಿನ ವ್ಯತ್ಯಾಸ) ಇದ್ದು ಅದು ದೇಹದ ಗಾತ್ರ, ಕೋರೆಹಲ್ಲಿನ ಗಾತ್ರ ಮತ್ತು ಬಣ್ಣಗಳಲ್ಲಿನ ವ್ಯತ್ಯಾಸವನ್ನು ಒಳಗೊಂಡಿದೆ. ವಯಸ್ಕ ಜೀವಿಗಳು ಒಂದೇ ಬದುಕ ಬಹುದು, ಲೈಂಗಿಕ ಜೋಡಿಗಳಲ್ಲಿ ಬದುಕ ಬಹುದು ಅಥವಾ ನೂರರವರೆಗಿನ ಸಂಖ್ಯೆಯ ಗುಂಪುಗಳಲ್ಲಿಯೂ ಬದುಕ ಬಹುದು. ಇದು ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರ ಬಹುದು.