dcsimg

ಗೋಡಂಬಿ ( Kannada )

tarjonnut wikipedia emerging languages

ಗೋಡಂಬಿ ಯು ಅನಾಕಾರ್ಡಿಯೇಸಿ ಎಂಬ ಹೂಬಿಡುವ ಸಸ್ಯ ವಂಶದಲ್ಲಿನ ಒಂದು ದ್ವಿದಳ ಧಾನ್ಯ ಸಸ್ಯದ ಬೀಜಕೋಶವಾಗಿದೆ. ಇದರ ಸಸ್ಯವು ಈಶಾನ್ಯ ಬ್ರೆಜಿಲ್‌‌‌ಗೆ ಸ್ಥಳೀಕವಾಗಿದೆ. ಗೋಡಂಬಿ ಮರದ ಹಣ್ಣಿಗಾಗಿರುವ ಪೋರ್ಚುಗೀಸ್‌ ಹೆಸರಾಗಿರುವ ಕಾಜು ಎಂಬುದರಿಂದ ಇದರ ಇಂಗ್ಲಿಷ್‌ ಹೆಸರು ಜನ್ಯವಾಗಿದೆ; ಕಾಜು ಎಂಬ ಹೆಸರು ಸ್ಥಳೀಯ ಟೂಪಿ ಭಾಷೆಯಲ್ಲಿನ ಹೆಸರಾದ ಅಕಾಜು ಎಂಬುದರಿಂದ ಹುಟ್ಟಿಕೊಂಡಿದೆ. ಈ ಸಸ್ಯದ ಗೋಡಂಬಿ ಬೀಜಗಳು (ಕೆಳಗೆ ನೋಡಿ) ಮತ್ತು ಗೇರುಹಣ್ಣುಗಳಿಗಾಗಿ ಇದನ್ನು ಉಷ್ಣವಲಯದ ಹವಾಮಾನಗಳಲ್ಲಿ ಈಗ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

ಶಬ್ದ ವ್ಯುತ್ಪತ್ತಿ

ಅನಾಕಾರ್ಡಿಯಂ ಎಂಬ ಹೆಸರು ಹಣ್ಣಿನ ಆಕಾರವನ್ನು ಉಲ್ಲೇಖಿಸುತ್ತದೆ; ಸದರಿ ಹಣ್ಣು ಒಂದು ತಲೆಕೆಳಗಾದ ಹೃದಯದಂತೆ (ಕಾರ್ಡಿಯಂ ಎಂದರೆ ಹೃದಯ ಎಂದರ್ಥ) ಕಾಣುತ್ತದೆ. ಸ್ಥಾನಿಕ ಭಾಷೆಯಲ್ಲಿ ಅಕಾಜು ಎಂದರೆ "ಹಳದಿ ತಲೆ" ಎಂದರ್ಥ.

ಆವಾಸಸ್ಥಾನ ಮತ್ತು ಬೆಳವಣಿಗೆ

 src=
ಕೋಹ್ಲರ್‌ನ 'ಮೆಡಿಸಿನಲ್‌-ಪ್ಲಾಂಟ್ಸ್‌' (1887) ಕೃತಿಯಿಂದ ಪಡೆಯಲಾದ 'ಅನಾಕಾರ್ಡಿಯಂ ಆಕ್ಸಿಡೆಂಟೇಲ್‌'.
 src=
ವಿಶ್ವವ್ಯಾಪಿ ಗೋಡಂಬಿ ಇಳುವರಿ
 src=
ಗೋಡಂಬಿ ಮರ

ಇದರ ಮರವು ಚಿಕ್ಕದಾಗಿರುತ್ತದೆ ಮತ್ತು ನಿತ್ಯ ಹರಿದ್ವರ್ಣವಾಗಿರುತ್ತದೆ; ೧೦-೧೨ ಮೀ (~೩೨ ಅಡಿ) ಎತ್ತರದವರೆಗೆ ಬೆಳೆಯುವ ಇದು ಒಂದು ಕುಳ್ಳಗಿನ, ಅನೇಕವೇಳೆ ಅಡ್ಡಾದಿಡ್ಡಿ ಆಕಾರದಲ್ಲಿರುವ ಕಾಂಡವನ್ನು ಹೊಂದಿರುತ್ತದೆ. ಎಲೆಗಳು ಸುರುಳಿಯಾಕಾರದಲ್ಲಿ ಜೋಡಿಸಲ್ಪಟ್ಟಿದ್ದು ತೊಗಲಿನಂತಿರುವ ವಿನ್ಯಾಸವನ್ನು ಅವುಹೊಂದಿರುತ್ತವೆ. ಅಂಡಾಕಾರದದಿಂದ ಮೊದಲ್ಗೊಂಡು ತಳಭಾಗದ ತುದಿ ಚೂಪಾಗಿದ್ದು ಅಂಡಾಕಾರದಲ್ಲಿರುವ ವಿಶಿಷ್ಟತೆಯವರೆಗೆ ಇವುಗಳ ಆಕಾರವಿರುತ್ತದೆ. ೪ ರಿಂದ ೨೨ ಸೆಂ.ಮೀ.ವರೆಗಿನ ಉದ್ದ, ೨ ರಿಂದ ೧೫ ಸೆಂ.ಮೀ.ವರೆಗಿನ ಅಗಲವನ್ನು ಹೊಂದಿರುವ ಇವುಗಳ ಎಲೆಗಳು, ಒಂದು ನವಿರಾದ ಅಂಚನ್ನು ಹೊಂದಿರುತ್ತವೆ. ೨೬ ಸೆಂ.ಮೀ.ವರೆಗೆ ಉದ್ದವಿರುವ ಒಂದು ಸಂಕೀರ್ಣ ಪುಷ್ಪಗುಚ್ಛ ಅಥವಾ ಸಮಗುಚ್ಛದಲ್ಲಿ ಹೂವುಗಳು ರೂಪುಗೊಳ್ಳುತ್ತವೆ; ಪ್ರತಿ ಹೂವೂ ಸಹ ಚಿಕ್ಕದಾಗಿದ್ದು, ಪ್ರಾರಂಭದಲ್ಲಿ ನಸು ಹಸಿರು ಬಣ್ಣದಲ್ಲಿರುತ್ತದೆ ಮತ್ತು ನಂತರದಲ್ಲಿ ಕೆಂಪುಛಾಯೆಗೆ ತಿರುಗುತ್ತದೆ ಹಾಗೂ ೭ ರಿಂದ ೧೫ ಮಿ.ಮೀ.ವರೆಗೆ ಉದ್ದವಿರುವ ಸಣಕಲಾಗಿರುವ, ಮೊನಚಾದ ಐದು ದಳಗಳನ್ನು ಅದು ಹೊಂದಿರುತ್ತದೆ.

ಗೋಡಂಬಿ ಮರದ ಹಣ್ಣಿನ ರೀತಿಯಲ್ಲಿ ಕಾಣಿಸಿಕೊಳ್ಳುವ ರಚನೆಯು ಒಂದು ಅಂಡಾಕಾರದ ಅಥವಾ ಪೇರುಹಣ್ಣಿನ-ಆಕಾರದ ಅಪ್ರಧಾನ ಹಣ್ಣು ಆಗಿದ್ದು (ಕೆಲವೊಮ್ಮೆ ಇದನ್ನು ಒಂದು ಮಿಥ್ಯಾಫಲ ಅಥವಾ ಹುಸಿ ಹಣ್ಣು ಎಂದು ಕರೆಯಲಾಗುತ್ತದೆ), ಗೋಡಂಬಿ ಹೂವಿನ ಪುಷ್ಪಪಾತ್ರೆಯಿಂದ ಅದು ಬೆಳೆಯುತ್ತದೆ. ಮಧ್ಯ ಅಮೆರಿಕಾದಲ್ಲಿ "ಮ್ಯಾರನಾನ್‌‌ " ಎಂದು ಚಿರಪರಿಚಿತವಾಗಿರುವ ಹಾಗೂ ಗೇರುಹಣ್ಣು ಎಂದು ಕರೆಯಲ್ಪಡುವ ಇದು ಪಕ್ವವಾಗಿ ಸುಮಾರು ೫-೧೧ ಸೆಂ.ಮೀ. ಉದ್ದದ ಒಂದು ಹಳದಿ ಮತ್ತು/ಅಥವಾ ಕೆಂಪು ರಚನೆಯ ಸ್ವರೂಪವನ್ನು ತಳೆಯುತ್ತದೆ. ಇದು ತಿನ್ನಲು ಯೋಗ್ಯವಾದ ಹಣ್ಣಾಗಿದ್ದು, ಒಂದು ಗಾಢವಾದ "ಸಿಹಿ" ವಾಸನೆ ಮತ್ತು ಒಂದು ಸಿಹಿ ರುಚಿಯನ್ನು ಹೊಂದಿರುತ್ತದೆ. ಗೇರು ಹಣ್ಣಿನ ತಿರುಳು ಅತ್ಯಂತ ರಸಭರಿತವಾಗಿರುತ್ತದೆಯಾದರೂ, ಅದರ ಸಿಪ್ಪೆಯು ನವಿರಾಗಿರುತ್ತದೆ; ಆದ್ದರಿಂದ ಇದು ಸಾಗಣೆಗಾಗಿ ಯೋಗ್ಯವಲ್ಲದ ಒಂದು ಹಣ್ಣೆನಿಸಿದೆ.

ಗೋಡಂಬಿ ಮರದ ನಿಜವಾದ ಹಣ್ಣೆಂಬುದು ಒಂದು ಮೂತ್ರಪಿಂಡದ ಅಥವಾ ಮುಷ್ಟಿಯುದ್ಧದ-ಕೈಗವುಸಿನ ಆಕಾರದ ಓಟೆಯ ಹಣ್ಣು ಆಗಿದ್ದು, ಅಪ್ರಧಾನ ಹಣ್ಣಿನ ತುದಿಯಲ್ಲಿ ಅದು ಬೆಳೆಯುತ್ತದೆ. ಓಟೆಯ ಹಣ್ಣು ಮರದ ಮೇಲೆ ಮೊದಲು ಬೆಳೆಯುತ್ತದೆ ಮತ್ತು ನಂತರದಲ್ಲಿ ಮುಖ್ಯ ದಂಟು ಗೇರುಹಣ್ಣಾಗಿ ವಿಸ್ತರಿಸಲ್ಪಡುತ್ತದೆ. ನಿಜವಾದ ಹಣ್ಣಿನ ಒಳಗಡೆ ಒಂದು ಏಕೈಕ ಬೀಜವಿದ್ದು, ಅದೇ ಗೋಡಂಬಿ ಬೀಜ ವೆನಿಸಿಕೊಳ್ಳುತ್ತದೆ. ಪಾಕಶಾಲೆಯ ಅರ್ಥದಲ್ಲಿ ಇದೊಂದು ಕರಟಕಾಯಿಯಾಗಿದ್ದರೂ, ಸಸ್ಯಶಾಸ್ತ್ರೀಯ ಅರ್ಥದಲ್ಲಿ ಗೋಡಂಬಿಯ ಕರಟಕಾಯಿಯು ಒಂದು ಬೀಜವಾಗಿದೆ. ಬೀಜವು ಒಂದು ಜೋಡಿ ಚಿಪ್ಪಿನಿಂದ ಸುತ್ತುವರೆಯಲ್ಪಟ್ಟಿದ್ದು, ಅದು ಅಹಿತ ಪ್ರತಿಕ್ರಿಯೆಯನ್ನುಂಟುಮಾಡುವ ಒಂದು ಫೀನಾಲ್‌ ರಾಸಾಯನಿಕ ಸ್ವರೂಪದ ರಾಳವಾಗಿರುವ ಅನಾಕಾರ್ಡಿಕ್‌ ಆಮ್ಲವನ್ನು ಒಳಗೊಂಡಿದೆ; ಈ ಆಮ್ಲವು ಒಂದು ಪ್ರಬಲವಾದ ಚರ್ಮ ಉದ್ರೇಕಕಾರಿಯಾಗಿದ್ದು, ಹೆಚ್ಚಿನ ರೀತಿಯಲ್ಲಿ ಅಹಿತ ಪ್ರತಿಕ್ರಿಯೆಯನ್ನುಂಟುಮಾಡುತ್ತದೆ ಎಂಬುದಾಗಿ ಚಿರಪರಿಚಿತವಾಗಿರುವ ಉರುಷಿಯೋಲ್‌‌ ತೈಲದೊಂದಿಗೆ ರಾಸಾಯನಿಕವಾಗಿ ಸಂಬಂಧವನ್ನು ಹೊಂದಿದೆ; ಉರುಷಿಯೋಲ್‌‌ ತೈಲವೂ ಸಹ ಒಂದು ವಿಷವಾಗಿದ್ದು, ಸಂಬಂಧಿಸಿದ ನಂಜು ಐವಿಯಲ್ಲಿ ಅದು ಕಂಡುಬರುತ್ತದೆ. ಕೆಲವೊಂದು ಜನರು ಗೋಡಂಬಿ ಬೀಜಗಳೊಂದಿಗೆ ಅಸಹಿಷ್ಣುತೆಯನ್ನು ಹೊಂದಿದ್ದಾರೆ, ಆದರೆ ಕರಟಕಾಯಿಗಳು ಅಥವಾ ಕಡಲೆಕಾಯಿಗಳಿಗಿಂತ ಅಪರೂಪವಾಗಿ ಅಹಿತ ಪ್ರತಿಕ್ರಿಯೆಯನ್ನು ಉಂಟುಮಾಡುವ ಗುಣವನ್ನು ಗೋಡಂಬಿಗಳು ಹೊಂದಿವೆ.

ಪ್ರಸರಣ

ಗೋಡಂಬಿ ಸಸ್ಯವು ಬ್ರೆಜಿಲ್‌‌ ವಲಯಕ್ಕೆ ಸ್ಥಳೀಕವಾಗಿದ್ದ ಸಂದರ್ಭದಲ್ಲೇ, ಪೋರ್ಚುಗೀಸರು ೧೫೬೦ ಮತ್ತು ೧೫೬೫ರ ವರ್ಷಗಳ ನಡುವಿನ ಅವಧಿಯಲ್ಲಿ ಭಾರತದ ಗೋವಾಕ್ಕೆ ಅದನ್ನು ತೆಗೆದುಕೊಂಡು ಬಂದರು. ಅಲ್ಲಿಂದ ಅದು ಆಗ್ನೇಯ ಏಷ್ಯಾದ ಉದ್ದಗಲಕ್ಕೂ ಹರಡಿತು ಮತ್ತು ಅಂತಿಮವಾಗಿ ಆಫ್ರಿಕಾವನ್ನೂ ತಲುಪಿತು. ೧೯೦೫ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನವು ಭಾರತದಿಂದ ಗೋಡಂಬಿ ಬೀಜಗಳನ್ನು ಆಮದು ಮಾಡಿಕೊಂಡ ಮೊಟ್ಟಮೊದಲ ದೇಶವೆನಿಸಿಕೊಂಡಿತು.[೧]

ಉಪಯೋಗಗಳು

ಔಷಧಿ ಮತ್ತು ಉದ್ಯಮ

 src=
ಉಪ್ಪುಹಚ್ಚಿದ ಗೋಡಂಬಿ ಬೀಜಗಳು

ಗೋಡಂಬಿ ಕಾಯಿಚಿಪ್ಪಿನ ದ್ರವವು (ಕ್ಯಾಶ್ಯೂ ನಟ್‌ಶೆಲ್‌ ಲಿಕ್ವಿಡ್‌-CNSL ) ಗೋಡಂಬಿಯ ಸಂಸ್ಕರಣದ ಒಂದು ಉಪ-ಉತ್ಪನ್ನವಾಗಿದ್ದು, ಅದರ ಬಹುತೇಕ ಭಾಗವು ಅನಾಕಾರ್ಡಿಕ್‌ ಆಮ್ಲಗಳಿಂದ ತುಂಬಿಕೊಂಡಿದೆ.[೨] ಈ ಆಮ್ಲಗಳು ಗ್ರಾಂ-ಪಾಸಿಟಿವ್‌ ಬ್ಯಾಕ್ಟೀರಿಯಾಕ್ಕೆ ಮಾರಕವಾಗಿ ಪರಿಣಮಿಸುವುದರಿಂದ, ಹಲ್ಲು ಬಾವುಗಳ ವಿರುದ್ಧ ಅವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬರಲಾಗಿದೆ. ಇತರ ಗ್ರಾಂ-ಪಾಸಿಟಿವ್‌ ಬ್ಯಾಕ್ಟೀರಿಯಾದ ಒಂದು ವ್ಯಾಪಕ ಶ್ರೇಣಿಯ ವಿರುದ್ಧವೂ ಅವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಸಸ್ಯದ ಅನೇಕ ಭಾಗಗಳನ್ನು ಗಯಾನಾದ ಪಟಮೋನಾ ಜನರು ಔಷಧೀಯವಾಗಿ ಬಳಸುತ್ತಾರೆ. ತೊಗಟೆಯನ್ನು ಹೆರೆಯಲಾಗುತ್ತದೆ ಮತ್ತು ಒಂದು ರಾತ್ರಿಯ ಅವಧಿಗೆ ನೆನೆಹಾಕಲಾಗುತ್ತದೆ ಅಥವಾ ಕುದಿಸಲಾಗುತ್ತದೆ. ಇದರ ಫಲವಾಗಿ ರೂಪುಗೊಳ್ಳುವ ಕಷಾಯವು ಒಂದು ಅತಿಸಾರ-ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ವಾರ್ನಿಷ್‌ನಲ್ಲಿ ಬಳಸಲ್ಪಡುವ ಒಂದು ಅಂಟನ್ನೂ ಸಹ ಇದು ನೀಡುತ್ತದೆ. ಬೀಜಗಳನ್ನು ಬೀಸಿ ಪುಡಿಮಾಡಿ ಹಾವಿನ ಕಡಿತಗಳಿಗೆ ಸಂಬಂಧಿಸಿದಂತೆ ನಂಜು-ನಿರೋಧಕವಾಗಿ ಬಳಸಲಾಗುತ್ತದೆ. ಕರಟಕಾಯಿಯ ತೈಲವನ್ನು ಶರೀರದ ಒಂದು ಭಾಗಕ್ಕೆ ಸಂಬಂಧಿಸಿದಂತೆ ಒಂದು ಶಿಲೀಂಧ್ರ-ನಿರೋಧಕವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಬಿರುಕುಬಿಟ್ಟ ಹಿಮ್ಮಡಿಗಳನ್ನು ವಾಸಿಮಾಡಲೂ ಸಹ ಇದು ಬಳಸಲ್ಪಡುತ್ತದೆ.

ಅನಾಕಾರ್ಡಿಕ್‌ ಆಮ್ಲವು ಕಾರ್ಡನಾಲ್‌‌ ಉತ್ಪಾದನೆಗೆ ಸಂಬಂಧಿಸಿದಂತೆ ರಾಸಾಯನಿಕ ಉದ್ಯಮದಲ್ಲಿಯೂ ಬಳಸಲ್ಪಡುತ್ತದೆ; ರಾಳಗಳು, ಲೇಪನಗಳು, ಮತ್ತು ಮರ್ದನದ ಸಾಮಗ್ರಿಗಳಿಗಾಗಿ ಸದರಿ ಕಾರ್ಡನಾಲ್ ಬಳಸಲ್ಪಡುತ್ತದೆ.[೨]

ಪಾಕಶಾಲೆಯ ಉಪಯೋಗಗಳು

 src=
ಹುರಿದ ಮತ್ತು ಉಪ್ಪುಹಚ್ಚಿದ ಗೋಡಂಬಿ ಬೀಜಗಳು

ಗೋಡಂಬಿ ಬೀಜವು ಒಂದು ಜನಪ್ರಿಯ ಕುರುಕಲು ತಿಂಡಿಯಾಗಿದೆ, ಮತ್ತು ಇದರ ಸಮೃದ್ಧ ಪರಿಮಳದ ಕಾರಣದಿಂದಾಗಿ ಇದನ್ನು ಹಾಗೆಯೇ ಇಡಿಯಾಗಿ ತಿನ್ನಬಹುದಾಗಿದೆ. ಲಘುವಾಗಿ ಉಪ್ಪುಹಚ್ಚಿದ ಅಥವಾ ಸಕ್ಕರೆ ಲೇಪಿಸಿದ ಗೋಡಂಬಿ ಬೀಜವು ಎಲ್ಲರಿಗೂ ಪ್ರಿಯವಾದ ಕುರುಕಲು ತಿಂಡಿ ಎಂಬುದಿಲ್ಲಿ ಗಮನಾರ್ಹ. ಚಾಕೊಲೇಟ್‌‌‌ನಲ್ಲಿ ಹುದುಗಿಸಿದ ರೂಪದಲ್ಲಿ ಗೋಡಂಬಿ ಬೀಜಗಳು ಮಾರಲ್ಪಡುತ್ತವೆಯಾದರೂ, ಅಗ್ಗದ ಕಡಲೆಕಾಯಿಗಳು ಮತ್ತು ಬಾದಾಮಿಗಳಿಗೆ ಹೋಲಿಸಿದಾಗ ಇದು ಅಪರೂಪವೆಂದೇ ಹೇಳಬೇಕು.

ಗೋಡಂಬಿ ಬೀಜಗಳು ಥಾಯ್‌‌ ಪಾಕಪದ್ಧತಿ ಮತ್ತು ಚೀನಿಯರ ಪಾಕಪದ್ಧತಿಯ ಭಾಗವಾಗಿಯೂ ಪಾತ್ರವನ್ನು ವಹಿಸುತ್ತವೆ ಮತ್ತು ಸಾಮಾನ್ಯವಾಗಿ ಇದು ಇಡಿದಾದ ಸ್ವರೂಪದಲ್ಲಿರುತ್ತದೆ. ಭಾರತೀಯ ಪಾಕಪದ್ಧತಿಯಲ್ಲಿ ಅನೇಕ ವೇಳೆ ಇದನ್ನು ಶಾಹಿ ಕೂರ್ಮದಂಥ ಮಸಾಲೆಗಳ ರೂಪಕ್ಕೆ ರುಬ್ಬಲಾಗುತ್ತದೆ ಮತ್ತು ಭಾರತೀಯ ಸಿಹಿತಿನಿಸುಗಳು ಹಾಗೂ ಹಣ್ಣು-ಐಸ್‌ಕ್ರೀಂ ಮಿಶ್ರಣಗಳಲ್ಲಿ ಅಲಂಕರಣದ ಸಾಮಗ್ರಿಗಳಾಗಿ ಗೋಡಂಬಿ ಬೀಜವಗಳು ಬಳಸಲ್ಪಡುತ್ತವೆ.

ಗೋಡಂಬಿ ಬೀಜವು ತನ್ನ ಎಳಸು ಸ್ವರೂಪದಲ್ಲಿದ್ದಾಗ ಅದನ್ನು ಬಳಸುವ ವಿಧಾನವು ಅಷ್ಟಾಗಿ-ಪರಿಚಯವಿಲ್ಲದಿದ್ದರೂ ಸಹ ಅದು ಸ್ವಾದಿಷ್ಟಕರವಾಗಿದೆ. ಈ ಹಂತದಲ್ಲಿ ಗೋಡಂಬಿ ಬೀಜದ ಚಿಪ್ಪು ಇನ್ನೂ ಗಡುಸಾಗಿರುವುದಿಲ್ಲ ಮತ್ತು ಅದರ ಬಣ್ಣವು ಹಸಿರಾಗಿರುತ್ತದೆ. ಈ ಹಂತದಲ್ಲಿ ಚಿಪ್ಪು ಮೃದುವಾಗಿರುತ್ತದೆ, ಮತ್ತು ಒಂದು ಚಾಕುವನ್ನು ಬಳಸಿ ಅದನ್ನು ಎರಡು ತುಂಡುಗಳಾಗಿ ಕತ್ತರಿಸಬಹುದಾಗಿರುತ್ತದೆ. ತಿರುಳಿನ ಸಾರತೆಗೆಯಲಾಗುತ್ತದೆ (ಈ ಹಂತದಲ್ಲಿ ಅದಿನ್ನೂ ನಾಶಕಾರಿಯಾಗಿರುತ್ತದೆ, ಆದ್ದರಿಂದ ಕೈ-ಗವುಸುಗಳ ಅಗತ್ಯವು ಕಂಡುಬರಬಹುದು) ಮತ್ತು ಬಳಕೆಗೆ ಮುಂಚಿತವಾಗಿ ಅದರಲ್ಲಿನ ನಾಶಕಾರಿ ಸಾಮಗ್ರಿಯನ್ನು ತೆಗೆದುಹಾಕಲು ಅದನ್ನು ಅರಿಶಿನದ ನೀರಿನಲ್ಲಿ ನೆನೆಹಾಕಲಾಗುತ್ತದೆ. ಕೇರಳ ಪಾಕಪದ್ಧತಿಯಲ್ಲಿ, ಅದರಲ್ಲೂ ವಿಶಿಷ್ಟವೆಂಬಂತೆ ಅವಿಯಲ್‌ ಭಕ್ಷ್ಯದಲ್ಲಿ ಇದು ಬಹುತೇಕವಾಗಿ ಕಂಡುಬರುತ್ತದೆ. ಅವಿಯಲ್ ಎಂಬುದು ಒಂದು ವಿಶಿಷ್ಟವಾದ ಆಹಾರಭಕ್ಷ್ಯವಾಗಿದ್ದು, ಅದು ಹಲವಾರು ತರಕಾರಿಗಳು, ತುರಿದ ತೆಂಗಿನಕಾಯಿ, ಅರಿಶಿನ ಮತ್ತು ಹಸಿರು ಮೆಣಸಿನಕಾಯಿಗಳನ್ನು ಒಳಗೊಂಡಿರುತ್ತದೆ.

ಮಲೇಷಿಯಾದಲ್ಲಿ, ಎಳೆಯ ಎಲೆಗಳನ್ನು ಪಚ್ಚಡಿಯಾಗಿ ಅಥವಾ ಸಾಂಬಾಲ್‌‌ ಬೆಲಾಕಾನ್‌ ಜೊತೆಯಲ್ಲಿ (ಒಣ ಮೆಣಸಿನಕಾಯಿ ಮತ್ತು ನಿಂಬೆಯೊಂದಿಗೆ ಮಿಶ್ರಣ ಮಾಡಲಾದ ಸೀಗಡಿಯ ಪೇಸ್ಟ್‌) ಕಚ್ಚಾಸ್ವರೂಪದಲ್ಲಿ ಅನೇಕವೇಳೆ ತಿನ್ನಲಾಗುತ್ತದೆ.

ಬ್ರೆಜಿಲ್‌‌ನಲ್ಲಿ, ಗೋಡಂಬಿ ಹಣ್ಣಿನ ರಸವು ದೇಶದಾದ್ಯಂತ ಜನಪ್ರಿಯವಾಗಿದೆ. ಮೇಲಾಗಿ, ಕಚ್ಚಾ ಗೋಡಂಬಿ ಬೀಜಗಳ ಖರೀದಿಯ ನಂತರ ಅವಕ್ಕೆ ಉಪ್ಪುಹಚ್ಚಿ ಪ್ಲಾಸ್ಟಿಕ್‌‌ ಚೀಲವೊಂದರಲ್ಲಿ ತುಂಬಿಸಿ ಕಡಿಮೆ ಬೆಲೆಗೆ ಬೀಜಗಳನ್ನು ಮಾರಾಟ ಮಾಡುವ ಗೋಡಂಬಿ ಬೀಜದ ಮಾರಾಟಗಾರರನ್ನು ಫೋರ್ಟಲೆಜಾದಂಥ ಈಶಾನ್ಯ ಪ್ರದೇಶಗಳಿಗೆ ಭೇಟಿನೀಡುವ ಸಂದರ್ಶಕರು ಅನೇಕವೇಳೆ ಕಾಣಲು ಸಾಧ್ಯವಿದೆ.

ಫಿಲಿಪ್ಪೀನ್ಸ್‌ನಲ್ಲಿ, ಗೋಡಂಬಿಯು ಆಂಟಿಪೊಲೊದ ಒಂದು ಚಿರಪರಿಚಿತ ಉತ್ಪನ್ನವಾಗಿದೆ ಮತ್ತು ಅದನ್ನು ಸುಮಾನ್‌‌ ಜೊತೆಯಲ್ಲಿ ತಿನ್ನಲಾಗುತ್ತದೆ. ಪಾಂಪಂಗಾದಲ್ಲಿಯೂ ಸಹ ಟರ್ರೋನ್ಸ್‌ ಡೆ ಕ್ಯಾಸುಯ್‌ ಎಂದು ಕರೆಯಲ್ಪಡುವ ಒಂದು ಸಿಹಿ ಹಣ್ಣು-ಐಸ್‌ಕ್ರೀಂ ಮಿಶ್ರಣವು ಜನಪ್ರಿಯವಾಗಿದ್ದು, ಇದು ಬಿಳಿ ವೇಫರ್‌ ಬಿಸ್ಕತ್ತಿನಲ್ಲಿ ಸುತ್ತಲಾದ ಗೋಡಂಬಿ ಮಿಠಾಯಿಯಾಗಿದೆ.

ಮದ್ಯಸಾರ

ಭಾರತದ ಗೋವಾದಲ್ಲಿ, ಗೇರುಹಣ್ಣನ್ನು (ಅಪ್ರಧಾನ ಹಣ್ಣನ್ನು) ಅರೆದು ರಸವನ್ನು ತೆಗೆಯಲಾಗುತ್ತದೆ ಮತ್ತು ಹುದುಗುವಿಕೆಗಾಗಿ ೨–೩ ದಿನಗಳವರೆಗೆ ಹಾಗೆಯೇ ಇಡಲಾಗುತ್ತದೆ. ಹುದುಗುಬಂದ ರಸವನ್ನು ನಂತರದಲ್ಲಿ ಒಂದು ಜೋಡಿ ಬಟ್ಟಿ ಇಳಿಸುವಿಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇದರಿಂದ ಹೊರಹೊಮ್ಮುವ ಪಾನೀಯವನ್ನು ಫೆನಿ ಎಂದು ಕರೆಯಲಾಗುತ್ತದೆ. ಟಾಂಜಾನಿಯಾದ ತ್ವಾರಾದ ದಕ್ಷಿಣದ ಪ್ರದೇಶದಲ್ಲಿ, ಗೇರುಹಣ್ಣನ್ನು (ಸ್ವಾಹಿಲಿ ಭಾಷೆಯಲ್ಲಿ ಇದಕ್ಕೆ ಬಿಬೋ ಎನ್ನುತ್ತಾರೆ) ಒಣಗಿಸಲಾಗುತ್ತದೆ ಮತ್ತು ರಕ್ಷಿಸಿಡಲಾಗುತ್ತದೆ. ನಂತರದಲ್ಲಿ ಅದಕ್ಕೆ ನೀರನ್ನು ಬೆರೆಸಿ ಪೂರ್ವಸ್ಥಿತಿಗೆ ತರಲಾಗುತ್ತದೆ ಮತ್ತು ಹುದುಗುಬರಿಸಲಾಗುತ್ತದೆ; ನಂತರ ಬಟ್ಟಿ ಇಳಿಸಿ ಒಂದು ತೀಕ್ಷ್ಣವಾದ ಮಾದಕ ಪಾನೀಯವನ್ನು ತಯಾರಿಸಲಾಗುತ್ತದೆ. ಈ ಪಾನೀಯವನ್ನು ಗೊಂಗೋ ಎಂಬ ಸಾರ್ವತ್ರಿಕ ಹೆಸರಿನಿಂದ ಉಲ್ಲೇಖಿಸಲಾಗುತ್ತದೆ.

ಮೊಝಾಂಬಿಕ್‌ನಲ್ಲಿ, ಗೇರುಹಣ್ಣಿನಿಂದ ಒಂದು ತೀಕ್ಷ್ಣವಾದ ಮಾದಕ ಪಾನೀಯವನ್ನು ತಯಾರಿಸುವುದು ಅಲ್ಲಿನ ಗೋಡಂಬಿ ರೈತರಲ್ಲಿ ಕಂಡುಬರುವ ಒಂದು ಅತ್ಯಂತ ಸಾಮಾನ್ಯವಾದ ಪರಿಪಾಠವಾಗಿದೆ. ಈ ಪಾನೀಯಕ್ಕೆ "ಅಗುವಾ ಆರ್ಡೆಂಟೆ" (ಸುಡುವ ನೀರು) ಎಂದು ಅವರು ಕರೆಯುತ್ತಾರೆ.

ರಾಬರ್ಟ್‌ ಪರ್ಸಿವಲ್‌‌[೩] ಎಂಬಾತನಿಂದ ಬರೆಯಲ್ಪಟ್ಟ ಆನ್‌ ಅಕೌಂಟ್‌ ಆಫ್‌ ದಿ ಐಲಂಡ್‌ ಆಫ್‌ ಸಿಲೋನ್‌‌ ಎಂಬ ಕೃತಿಯ ಅನುಸಾರ, ಇಪ್ಪತ್ತನೇ ಶತಮಾನದ ಆರಂಭದ ಅವಧಿಯಲ್ಲಿ ಗೋಡಂಬಿ ಹಣ್ಣಿನ ರಸದಿಂದ ಒಂದು ಮದ್ಯಸಾರವನ್ನು ಬಟ್ಟಿ ಇಳಿಸಲಾಗುತ್ತಿತ್ತು, ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ಇದು ತಯಾರಿಸಲ್ಪಡುತ್ತಿತ್ತು. ಸ್ಪಷ್ಟವಾಗಿ ತೋರುವಂತೆ, ಡಚ್ಚರು ಇದನ್ನು ಒಂದು "ತೀಕ್ಷ್ಣವಾದ ಸಿಹಿಮದ್ಯ"ದ ಸ್ವರೂಪದಲ್ಲಿ ಸ್ವೀಕರಿಸಿ, ಬ್ರಾಂಡಿ ಮಾದಕ ಪಾನೀಯಕ್ಕಿಂತ ಮೇಲ್ಮಟ್ಟದ ಒಂದು ಮಾದಕ ಪಾನೀಯವಾಗಿ ಪರಿಗಣಿಸಿದ್ದರು.

ಪೋಷಕಾಂಶಗಳು

  • ಗೋಡಂಬಿ ಬೀಜಗಳಲ್ಲಿರುವ ಕೊಬ್ಬುಗಳು ಮತ್ತು ತೈಲಗಳ ಪ್ರಮಾಣ ಹೀಗಿದೆ: ೫೪%ನಷ್ಟು ಏಕ-ಅಪರ್ಯಾಪ್ತ ಕೊಬ್ಬು (೧೮:೧), ೧೮%ನಷ್ಟು ಬಹು-ಅಪರ್ಯಾಪ್ತ ಕೊಬ್ಬು (೧೮:೨), ಮತ್ತು ೧೬%ನಷ್ಟು ಪರ್ಯಾಪ್ತ ಕೊಬ್ಬು [9%ನಷ್ಟು ಪಾಮಿಟಿಕ್‌‌ ಆಮ್ಲ (16:0) ಮತ್ತು 7%ನಷ್ಟು ಸ್ಟಿಯರಿಕ್‌ ಆಮ್ಲ (18:0)].[೪]

ಇವನ್ನೂ ನೋಡಿ

  • ಕಾಡು ಗೋಡಂಬಿ - ಅನಾಕಾರ್ಡಿಯಂ ಎಕ್ಸ್‌ಸೆಲ್ಸಮ್‌ ಜಾತಿ.
  • ಸೆಮೆಕಾರ್ಪಸ್ ಅನಾಕಾರ್ಡಿಯಂ (ಪೌರಸ್ತ್ಯ ಗೋಡಂಬಿಮರ) ಎಂಬುದು ಭಾರತದ ಸ್ಥಳೀಕ ಪ್ರಭೇದವಾಗಿದೆ ಮತ್ತು ಗೋಡಂಬಿಗೆ ಇದು ನಿಟಕವಾಗಿ ಸಂಬಂಧಿಸಿದೆ.
  • ಪಾಕಶಾಲೆಯ ಕರಟಕಾಯಿಗಳ ಪಟ್ಟಿ
  • ಕಾರ್ನಿಟಿನ್‌

ಚಿತ್ರ ಸಂಪುಟ

ಗೋಡಂಬಿ ಹಣ್ಣು- ಬೆಳವಣಿಗೆಯ ಹಂತಗಳು

ಹೆಚ್ಚಿನ ಓದಿಗಾಗಿ

  • ‌‌ಮೋರ್ಟಾನ್, ಜೂಲಿಯಾ F. ಫ್ರೂಟ್ಸ್‌ ಆಫ್‌ ವಾರ್ಮ್‌ ಟೆಂಪರೇಚರ್ಸ್‌ . ISBN ೯೭೮-೦-೯೬೧೦೧೮೪-೧-೨
  • ಪಿಳ್ಳೈ, ರಾಜ್‌ಮೋಹನ್‌‌ ಮತ್ತು ಶಾಂತಾ, P. ದಿ ವರ್ಲ್ಡ್‌ ಆಫ್‌ ಕ್ಯಾಷ್ಯೂ ಇಂಡಸ್ಟ್ರಿ (ರಾಜನ್‌‌ ಪಿಳ್ಳೈ ಫೌಂಡೇಷನ್‌, ಕೊಲ್ಲಮ್‌, ೨೦೦೮).nm,.

ಉಲ್ಲೇಖಗಳು

  1. "Cajucultura". Retrieved February 2, 2010.
  2. ೨.೦ ೨.೧ Alexander H. Tullo (September 8, 2008). "A Nutty Chemical". Chemical and Engineering News. 86 (36): 26–27.
  3. Full text of "Ceylon; a general description of the island, historical, physical, statistical. Containing the most recent information"
  4. [೧] USDA, ಸರ್ಚ್‌ ಫಾರ್‌ "ನಟ್ಸ್‌, ಕ್ಯಾಷ್ಯೂ ನಟ್ಸ್‌, ರಾ"

lisenssi
cc-by-sa-3.0
tekijänoikeus
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
alkuperäinen
käy lähteessä
kumppanisivusto
wikipedia emerging languages

ಗೋಡಂಬಿ: Brief Summary ( Kannada )

tarjonnut wikipedia emerging languages

ಗೋಡಂಬಿ ಯು ಅನಾಕಾರ್ಡಿಯೇಸಿ ಎಂಬ ಹೂಬಿಡುವ ಸಸ್ಯ ವಂಶದಲ್ಲಿನ ಒಂದು ದ್ವಿದಳ ಧಾನ್ಯ ಸಸ್ಯದ ಬೀಜಕೋಶವಾಗಿದೆ. ಇದರ ಸಸ್ಯವು ಈಶಾನ್ಯ ಬ್ರೆಜಿಲ್‌‌‌ಗೆ ಸ್ಥಳೀಕವಾಗಿದೆ. ಗೋಡಂಬಿ ಮರದ ಹಣ್ಣಿಗಾಗಿರುವ ಪೋರ್ಚುಗೀಸ್‌ ಹೆಸರಾಗಿರುವ ಕಾಜು ಎಂಬುದರಿಂದ ಇದರ ಇಂಗ್ಲಿಷ್‌ ಹೆಸರು ಜನ್ಯವಾಗಿದೆ; ಕಾಜು ಎಂಬ ಹೆಸರು ಸ್ಥಳೀಯ ಟೂಪಿ ಭಾಷೆಯಲ್ಲಿನ ಹೆಸರಾದ ಅಕಾಜು ಎಂಬುದರಿಂದ ಹುಟ್ಟಿಕೊಂಡಿದೆ. ಈ ಸಸ್ಯದ ಗೋಡಂಬಿ ಬೀಜಗಳು (ಕೆಳಗೆ ನೋಡಿ) ಮತ್ತು ಗೇರುಹಣ್ಣುಗಳಿಗಾಗಿ ಇದನ್ನು ಉಷ್ಣವಲಯದ ಹವಾಮಾನಗಳಲ್ಲಿ ಈಗ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

lisenssi
cc-by-sa-3.0
tekijänoikeus
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
alkuperäinen
käy lähteessä
kumppanisivusto
wikipedia emerging languages