ಸಿಂಹ ಭಾರತದಲ್ಲಿ ಉತ್ತರ ಭಾರತ,ಮಧ್ಯಭಾರತದಲ್ಲಿ ವ್ಯಾಪನೆಯಿದ್ದು, ಈಗ ಗುಜರಾತ್ ನ ಗಿರ್ ಅರಣ್ಯಪ್ರದೇಶಕ್ಕೆ ಸೀಮಿತವಾಗಿದೆ.ಸಿಂಹಗಳು ಬೆಕ್ಕಿನ ಕುಟುಂಬಕ್ಕೆ ಸೇರಿದ ಪ್ರಾಣಿ.ಪ್ರಪಂಚದಲ್ಲಿ ಸಿಂಹಗಳು ಮುಖ್ಯವಾಗಿ ಆಫ್ರೀಕಾದ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ,ಏಷಿಯಾದ ಕೆಲವು ಭಾಗಗಳಲ್ಲಷ್ಟೇ ಕಂಡುಬರುತ್ತದೆ.
ಸಿಂಹವು ಪಂಥೇರ (panthera)ಕುಟುಂಬಕ್ಕೆ ಸೇರಿದ್ದು,ಪಂಥೇರ ಲಿಯೋ (panthera leo)ಇದರ ಪ್ರಾಣಿಶಾಸ್ತ್ರೀಯ ಹೆಸರು.
ಸಿಂಹವು ಸಾಧಾರಣವಾಗಿ ೧.೫ ರಿಂದ ೨.೫ ಮೀ.ಉದ್ದವಿದ್ದು,ತೂಕ ಸಾದಾರಣ ೨೦೦ ಕೆ.ಜಿ ಗಳಿಗೂ ಮೇಲ್ಪಟ್ಟು ಇರುತ್ತದೆ.ಸಿಂಹದ ಅತ್ಯಂತ ವೈಶಿಷ್ಟ್ಯವೆಂದರೆ ಅದರ ಕೇಸರ.ಗಂಡು ಸಿಂಹಕ್ಕೆ ಕುತ್ತಿಗೆಯ ಮೇಲೆ ಉದ್ದವಾದ ಕೇಸರ,ಬಾಲದ ತುದಿಯಲ್ಲಿ ಕಪ್ಪನೆಯ ದಪ್ಪ ಕೇಶಗುಚ್ಛವಿರುತ್ತದೆ.ಗರ್ಭ ಧರಿಸಿರುವ ಕಾಲ ಸುಮಾರು ೧೦೫-೧೧೬ದಿನಗಳು. ಒಮ್ಮೆಗೆ ೨ ರಿಂದ ೫ ರವರೇಗೆ ಮರಿಗಳು ಹುಟ್ಟುವುದಿದೆ.ಆಯು:ಪ್ರಮಾಣ ಸುಮಾರು ೨೨ ವರ್ಷಗಳೆಂದು ಅಂದಾಜು ಮಾಡಲಾಗಿದೆ.
ಜಗತ್ತಿನ ಎಲ್ಲಾ ಮಾರ್ಜಾಲಗಳಲ್ಲಿ ಸಿಂಹವೀ ಸಹವಾಸಪ್ರಿಯ. ಇದು ಮಾಂಸಹಾರಿ ಪ್ರಾಣಿ. ಆದರೆ ಸಿಮ್ಹಿಣಿಗಳೇ ಬೇತೆಯಾಡುವುದು, ಸಿಮ್ಹವಲ್ಲ. ವಯಸ್ಕ ಸಿಂಹಗಳು ದಿನಕ್ಕೆ ಹದಿನಳಕ್ಕು ಘಂಟೆಯವರೆಗೆ ನಿದ್ದೆಯನ್ನು ಮಾಡಲು ಸಾಮಾನ್ಯ. ಸಿಂಹಗಳ ಗುಂಪಿಗೆ ಹೊಸ ಪುರುಷ ಸಿಂಹ ನಾಯಕರಾದರೆ ಅದರ ಹಿಂದಿನ ನಾಯಕನ ಮರಿಗಳನ್ನೆಲ್ಲ ಸಾಯಿಸುವುದು ಸಹಜ ಸ್ಥಿತಿ. ಇಂತಹ ಶಿಶು ಹತ್ಯೆ ಪ್ರಾಣಿ ಸಾಮ್ರಾಜ್ಯದಲ್ಲಿ ವಿಲಕ್ಷಣವಾದ ಸಂಭವ ಎಂದು ಶೀಳಶಸ್ತ್ರಗ್ನ್ಯರ ಅಭಿಪ್ರಾಯವಾಗಿತ್ತು.
ಸಿಂಹಗಳು ಹುಲಿಯೊಡನೆ ಉತ್ಪನ್ನ ಮಾದುವುದಕ್ಕೆ ಸಾಧ್ಯ. ಇಂತಹ ಜಾತಿಯ ಹೊರಗೆ ಉತ್ಪನ್ನವನ್ನು "ಹೈಬ್ರಿದೈಜೆಶನ್" ಎಂದು ಕರೆಯುತ್ತಾರೆ. ಹೀಗೆ ಜನಿಸುವ ಮರಿಗಳನ್ನು "ಲೈಗರ್" ಎಂದು ಕರೆಯುತ್ತಾರೆ. ಇವು ಕಾಡುಗಳಲ್ಲಿ ಜನಿಸುವುದು ಅಸಾಮಾನ್ಯವಾಗಿದರೂ ಪ್ರಾಣಿ ಸಂಗ್ರಾಲಯಗಲ್ಳಲ್ಲಿ ಉತ್ಪನ್ನ ಮಾಡುವುದು ಅಸಾಮಾನ್ಯವಿಲ್ಲ.
ಲೈಗರ್ಗಳ ತೂಕ ಅದರ ತದೆತಾಯರಕ್ಕಿನ್ತಾ ಬಹಳ ಹೆಚ್ಚು. ಇವು ೩೦೦ ಕೆ.ಜಿ. ಯವರೆಗೆ ಮತ್ತು ಮೂರು ಮೀಟರ್ ವರೆಗೆ ಉದ್ಧವಾಗಿ ಬೆಳೆಯುತ್ತವೆ. ಇದರಿಂದ ಇವು ಜಗತ್ತಿನ ಅತ್ಯಂತ ದೊಡ್ಡ ಬೆಕ್ಕುಗಳು, ಸೈಬೀರಿಯನ್ ಹುಲಿಗಳಿಗಿಂತಲೋ. ಇಂತಹ ದೊಡ್ಡ ಗಾತ್ರಕ್ಕೆ ಕಾರಣ "ಇಮ್ಪ್ರಿನ್ಟಡ್ ಅನುವಂಶಿಕ ಧಾತುಗಳು". ಅದರ ಸಿಂಹ ತಂದೆಯ ಅನುವಂಶಿಕ ಧಾತುಗಳು ಅದರ ಗಾತ್ರವನ್ನು ಹೆಚ್ಚಿಸುತ್ತದೆ, ಆದರೆ ಅದಕ್ಕೆ ಸಿಂಹಿಣಿ ತಾಯಿ ಇಲ್ಲದಿರುವ ಕಾರಣದಿಂದ ಅದರ ಬೆಳವಣಿಗೆಯನ್ನು ತಡೆಯಲು ಅನುವಂಶಿಕ ಧಾತುಗಳಿಲ್ಲ.
೧೯೯೪ ರಲ್ಲಿ ದಿಸ್ನಿ ಸ್ಟುದಿಯೂಸ್ ರಚಿಸಿದ "ದ ಲೈಯನ್ ಕಿನ್ಗ್" ಚಲನ ಚಿತ್ರದಲ್ಲಿ ಸಿಂಹಗಳು ಪ್ರಮುಖ ಪಾತ್ರಗಳು. ಇದು ಷೇಕ್ಸ್ಪಿಯರ್ ಮಹೋದಯರ ಹ್ಯಾಮ್ಲೆಟ್ ಕಥೆಯಿಂದ ಆಧಾರಿತವಾಗಿದೆ.
ಸಿಂಹ ಭಾರತದಲ್ಲಿ ಉತ್ತರ ಭಾರತ,ಮಧ್ಯಭಾರತದಲ್ಲಿ ವ್ಯಾಪನೆಯಿದ್ದು, ಈಗ ಗುಜರಾತ್ ನ ಗಿರ್ ಅರಣ್ಯಪ್ರದೇಶಕ್ಕೆ ಸೀಮಿತವಾಗಿದೆ.ಸಿಂಹಗಳು ಬೆಕ್ಕಿನ ಕುಟುಂಬಕ್ಕೆ ಸೇರಿದ ಪ್ರಾಣಿ.ಪ್ರಪಂಚದಲ್ಲಿ ಸಿಂಹಗಳು ಮುಖ್ಯವಾಗಿ ಆಫ್ರೀಕಾದ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ,ಏಷಿಯಾದ ಕೆಲವು ಭಾಗಗಳಲ್ಲಷ್ಟೇ ಕಂಡುಬರುತ್ತದೆ.