dcsimg

ಪೌದೆಮುಳ್ಳು ( Kannada dili )

wikipedia emerging languages tarafından sağlandı

ಸಸ್ಯವು ಪಾಲಿಕಾರ್ಪಿಯ ಕೊರಿಂಬೋಸ (Caryophyllaceae Polycarpea corymbosa (L.) Lam.) ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದ್ದು, ಕ್ಯಾರಿಯೊಫಿಲ್ಲೇಸಿ (Caryophyllaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.

ಇತರ ಹೆಸರುಗಳು

ಅರಿಶಿನಸಾಸಿವೆ

ಇತರ ಭಾಷೆಯ ಹೆಸರುಗಳು

ಸಂಸ್ಕೃತ: ಭಿಸಾಟ್ಟ

ತಮಿಳ್: ನಿಲೈಸೇಡಚಿ

ತೆಲುಗು: ಬೊಮ್ಮಸರಿ, ರಜುಮ

ಸಸ್ಯವರ್ಣನೆ

ಈ ಗಿಡವು ಕೆಂಪು ಭೂಮಿಯಲ್ಲಿ, ನದಿಯ ದಡೆಯಲ್ಲಿ ಮತ್ತು ಬೀಳು ಭೂಮಿಯಲ್ಲಿ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ೧೫ ರಿಂದ ೨೫ ಸೆ. ಮೀ. ಎತ್ತರ ಬೆಳೆಯುತ್ತದೆ. ಸಸ್ಯದ ಎಲ್ಲಾ ಭಾಗಗಳ ಮೇಲೆ ರೋಮಗಳಿರುತ್ತವೆ. ಸಾಸಿವೆ ಗಿಡವು ನದಿತೀರ ಮತ್ತು ತೇವಭರಿತ ಪ್ರದೇಶಗಳಲ್ಲಿ ಕಾಣಸಿಗುತ್ತದೆ.

ಪ್ರಯೋಜನಗಳು

  1. ವಿಷಜಂತುಗಳು ಕಡಿದ ಜಾಗದ ಮೇಲೆ ಈ ಗಿಡದ ಎಲೆಗಳನ್ನು ಹಾಕಿಟ್ಟರೆ, ವಿಷವು ದೇಹಕ್ಕೆ ಪಸರಿಸದಂತೆ ಮಾಡುತ್ತದೆ.[೧]
  2. ಈ ಎಲೆಯ ಚೂರ್ಣ ಸೇವನೆ ಕಾಮಾಲೆರೋಗಕ್ಕೆ ಉತ್ತಮ ಔಷಧವಾಗಿದೆ.
  3. ಹೂವಿನ ಮೊಗ್ಗು ಅರೆದು ಸೇವನೆ ಮಾಡಿದರೆ ವಾತ ಶಮನವಾಗುತ್ತದೆ.[೨]

ಉಲ್ಲೇಖಗಳು

  1. https://kannadavesatya.wordpress.com/2012/05/03/ravikolar-3/
  2. http://vanaspathi.blogspot.in/2008/10/blog-post_21.html
lisans
cc-by-sa-3.0
telif hakkı
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಪೌದೆಮುಳ್ಳು: Brief Summary ( Kannada dili )