dcsimg

ಆಂಟಿರೈನಮ್ ( Kannada )

provided by wikipedia emerging languages

ಆಂಟಿರೈನಮ್ ಸ್ಕ್ರಾಫ್ಯುಲೇರಿಯೇಸೀ ಕುಟುಂಬಕ್ಕೆ ಸೇಇದೆ. ಮಡಿಗಳಲ್ಲಿ, ಕುಂಡಗಳಲ್ಲಿ, ಕುಂಡಗಳ ಅಂಚುಗಳಲ್ಲಿ ಬೆಳೆಸಲು ಯೋಗ್ಯವಾದ ಆಲಂಕಾರಿಕ ವಾರ್ಷಿಕ ಸಸ್ಯ. ಸ್ವಾಭಾವಿಕವಾಗಿ ಬಹುವಾರ್ಷಿಕವಾದರೂ ವಾರ್ಷಿಕ ಸಸ್ಯವೆಂದೇ ಪರಿಗಣಿಸಲ್ಪಟ್ಟಿದೆ[೧]ಬೀಜಗಳಿಂದ ಮಾತ್ರ ಸಸ್ಯ ವೃದ್ಧಿ[೨]. ಹೂಗಳು ಬಹು ಆಕರ್ಷಣೀಯವಾಗಿದ್ದು ಬಿಳಿ, ಕೆಂಪು, ಕಿತ್ತಳೆ, ಕಗ್ಗೆಂಪು, ಕಾರ್‍ಮೈನ್, ಪಿಂಕ್ ಮುಂತಾದ ಬಣ್ಣಗಳಲ್ಲಿರುತ್ತವೆ.

ಈ ಸಸ್ಯಗಳನ್ನು ಎತ್ತರದವು (75-90 ಸೆಂ.ಮೀ.) ಮಧ್ಯಮ (30-45 ಸೆಂ.ಮೀ.) ತುಂಡು (15-20 ಸೆಂ.ಮೀ.)[೩]ಎಂದು ವಿಂಗಡಿಸಬಹುದು. ತುಂಡುಜಾತಿ ರಾಕರಿಗಳಲ್ಲಿ ಬೆಳೆಸಲು ಉಪಯುಕ್ತವಾಗಿವೆಯಾದುದರಿಂದ ಇವುಗಳನ್ನು ರಾಕ್ ಹೈಬ್ರಿಡ್ ಅಥವಾ ಮ್ಯಾಜಿಕ್ ಕಾರ್ಪೆಟ್‍ಗಳೆಂದೂ ಕರೆಯುವುದುಂಟು. ಹಗುರವಾದ ಸಣ್ಣ ಮರಳು ಮಿಶ್ರಿತ ಮಣ್ಣಿನಲ್ಲಿ ಇವನ್ನು ಬಹು ಸುಲಭವಾಗಿ ಬೆಳೆಯಬಹುದು. ಬೀಜಗಳು ಬಹು ಸೂಕ್ಷ್ಮವಾದ್ದರಿಂದ 1 ಭಾಗ ಬೀಜವನ್ನು 6 ಭಾಗ ಮರಳಿನ ಜೊತೆಯಲ್ಲಿ ಮಿಶ್ರಮಾಡಿ ಎಲ್ಲ ಕಡೆಗೂ ಹರಡುವಂತೆ ಬಿತ್ತನೆ ಮಾಡಬೇಕು. ಎರಡು ಎಲೆಯ ಸಸ್ಯಗಳನ್ನು ಬೀಜ ತಟ್ಟೆಗಳಲ್ಲಿ ಹರಡುವಂತೆ 5 ಸೆಂ.ಮೀ. ಅಂತರಕೊಟ್ಟು ನಾಟಿ ಮಾಡಿ ಪಳಗಿಸಬೇಕು. ಹೀಗೆ ಬೆಳೆದ 7.5 ಸೆಂ.ಮೀ. ಉದ್ದ ಸಸ್ಯಗಳನ್ನು ಮಡಿಗಳಲ್ಲಿ 30-45 ಸೆಂ.ಮೀ. ಅಂತರ ಕೊಟ್ಟು ನೆಡಬೇಕು. ಕುಂಡಗಳಲ್ಲಿ ಬೆಳೆಸುವುದಾದರೆ ಒಂದೊಂದೇ ಸಸಿಯನ್ನು ಮೊದಲು 15 ಸೆಂ.ಮೀ. ಅಳತೆಯ ಕುಂಡಗಳಲ್ಲಿ ಮೊಳೆಯಿಸಿ ಅನಂತರ 20 ಸೆಂ.ಮೀ. ಕುಂಡಕ್ಕೆ ಬದಲಾಯಿಸಿ ಬೆಳೆಸಬೇಕು. ಹೆಚ್ಚಿಗೆ ಗೊಬ್ಬರ ಹಾಕಿದರೆ ಗಿಡ ಎತ್ತರವಾಗಿ ಬೆಳೆದು ಹೂಗಳು ಕಡಿಮೆಯಾಗುತ್ತವೆ; ಹೆಚ್ಚಿಗೆ ನೀರು ಹಾಕಿದರೆ ಗಿಡ ಕೊಳೆತು ಸಾಯುತ್ತದೆ. ಬೇರಿನ ಹತ್ತಿರ ಒಣ ವಾತಾವರಣವಿರಬೇಕಾದ್ದರಿಂದ ಮಳೆಗಾಲದ ಅನಂತರ ಬೆಳೆಸುವುದು ಒಳ್ಳೆಯದು. ಕುಡಿ ಜಿಗುಟುತ್ತಿದ್ದರೆ ಕವಲುಗಳು ಹುಲುಸಾಗಿ ಬಂದು ಗಿಡ ಪೊದೆರೂಪ ತಳೆಯುತ್ತದೆ. 4 ತಿಂಗಳಲ್ಲಿ ಹೂ ಬಿಡುತ್ತದೆ. ಬಾಡಿಹೋದ ಹೂವಿನ ಗುಚ್ಛಗಳನ್ನು ಕತ್ತರಿಸಿ ತೆಗೆದುಹಾಕಿದರೆ ಎರಡನೆಯ ಸಲ ಕೂಡ ಹೂ ಬಿಡುತ್ತದೆ.

ಉಲ್ಲೇಖನಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಆಂಟಿರೈನಮ್: Brief Summary ( Kannada )

provided by wikipedia emerging languages

ಆಂಟಿರೈನಮ್ ಸ್ಕ್ರಾಫ್ಯುಲೇರಿಯೇಸೀ ಕುಟುಂಬಕ್ಕೆ ಸೇಇದೆ. ಮಡಿಗಳಲ್ಲಿ, ಕುಂಡಗಳಲ್ಲಿ, ಕುಂಡಗಳ ಅಂಚುಗಳಲ್ಲಿ ಬೆಳೆಸಲು ಯೋಗ್ಯವಾದ ಆಲಂಕಾರಿಕ ವಾರ್ಷಿಕ ಸಸ್ಯ. ಸ್ವಾಭಾವಿಕವಾಗಿ ಬಹುವಾರ್ಷಿಕವಾದರೂ ವಾರ್ಷಿಕ ಸಸ್ಯವೆಂದೇ ಪರಿಗಣಿಸಲ್ಪಟ್ಟಿದೆಬೀಜಗಳಿಂದ ಮಾತ್ರ ಸಸ್ಯ ವೃದ್ಧಿ. ಹೂಗಳು ಬಹು ಆಕರ್ಷಣೀಯವಾಗಿದ್ದು ಬಿಳಿ, ಕೆಂಪು, ಕಿತ್ತಳೆ, ಕಗ್ಗೆಂಪು, ಕಾರ್‍ಮೈನ್, ಪಿಂಕ್ ಮುಂತಾದ ಬಣ್ಣಗಳಲ್ಲಿರುತ್ತವೆ.

ಈ ಸಸ್ಯಗಳನ್ನು ಎತ್ತರದವು (75-90 ಸೆಂ.ಮೀ.) ಮಧ್ಯಮ (30-45 ಸೆಂ.ಮೀ.) ತುಂಡು (15-20 ಸೆಂ.ಮೀ.)ಎಂದು ವಿಂಗಡಿಸಬಹುದು. ತುಂಡುಜಾತಿ ರಾಕರಿಗಳಲ್ಲಿ ಬೆಳೆಸಲು ಉಪಯುಕ್ತವಾಗಿವೆಯಾದುದರಿಂದ ಇವುಗಳನ್ನು ರಾಕ್ ಹೈಬ್ರಿಡ್ ಅಥವಾ ಮ್ಯಾಜಿಕ್ ಕಾರ್ಪೆಟ್‍ಗಳೆಂದೂ ಕರೆಯುವುದುಂಟು. ಹಗುರವಾದ ಸಣ್ಣ ಮರಳು ಮಿಶ್ರಿತ ಮಣ್ಣಿನಲ್ಲಿ ಇವನ್ನು ಬಹು ಸುಲಭವಾಗಿ ಬೆಳೆಯಬಹುದು. ಬೀಜಗಳು ಬಹು ಸೂಕ್ಷ್ಮವಾದ್ದರಿಂದ 1 ಭಾಗ ಬೀಜವನ್ನು 6 ಭಾಗ ಮರಳಿನ ಜೊತೆಯಲ್ಲಿ ಮಿಶ್ರಮಾಡಿ ಎಲ್ಲ ಕಡೆಗೂ ಹರಡುವಂತೆ ಬಿತ್ತನೆ ಮಾಡಬೇಕು. ಎರಡು ಎಲೆಯ ಸಸ್ಯಗಳನ್ನು ಬೀಜ ತಟ್ಟೆಗಳಲ್ಲಿ ಹರಡುವಂತೆ 5 ಸೆಂ.ಮೀ. ಅಂತರಕೊಟ್ಟು ನಾಟಿ ಮಾಡಿ ಪಳಗಿಸಬೇಕು. ಹೀಗೆ ಬೆಳೆದ 7.5 ಸೆಂ.ಮೀ. ಉದ್ದ ಸಸ್ಯಗಳನ್ನು ಮಡಿಗಳಲ್ಲಿ 30-45 ಸೆಂ.ಮೀ. ಅಂತರ ಕೊಟ್ಟು ನೆಡಬೇಕು. ಕುಂಡಗಳಲ್ಲಿ ಬೆಳೆಸುವುದಾದರೆ ಒಂದೊಂದೇ ಸಸಿಯನ್ನು ಮೊದಲು 15 ಸೆಂ.ಮೀ. ಅಳತೆಯ ಕುಂಡಗಳಲ್ಲಿ ಮೊಳೆಯಿಸಿ ಅನಂತರ 20 ಸೆಂ.ಮೀ. ಕುಂಡಕ್ಕೆ ಬದಲಾಯಿಸಿ ಬೆಳೆಸಬೇಕು. ಹೆಚ್ಚಿಗೆ ಗೊಬ್ಬರ ಹಾಕಿದರೆ ಗಿಡ ಎತ್ತರವಾಗಿ ಬೆಳೆದು ಹೂಗಳು ಕಡಿಮೆಯಾಗುತ್ತವೆ; ಹೆಚ್ಚಿಗೆ ನೀರು ಹಾಕಿದರೆ ಗಿಡ ಕೊಳೆತು ಸಾಯುತ್ತದೆ. ಬೇರಿನ ಹತ್ತಿರ ಒಣ ವಾತಾವರಣವಿರಬೇಕಾದ್ದರಿಂದ ಮಳೆಗಾಲದ ಅನಂತರ ಬೆಳೆಸುವುದು ಒಳ್ಳೆಯದು. ಕುಡಿ ಜಿಗುಟುತ್ತಿದ್ದರೆ ಕವಲುಗಳು ಹುಲುಸಾಗಿ ಬಂದು ಗಿಡ ಪೊದೆರೂಪ ತಳೆಯುತ್ತದೆ. 4 ತಿಂಗಳಲ್ಲಿ ಹೂ ಬಿಡುತ್ತದೆ. ಬಾಡಿಹೋದ ಹೂವಿನ ಗುಚ್ಛಗಳನ್ನು ಕತ್ತರಿಸಿ ತೆಗೆದುಹಾಕಿದರೆ ಎರಡನೆಯ ಸಲ ಕೂಡ ಹೂ ಬಿಡುತ್ತದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು