dcsimg

ಅರ್ಕ ( الكانادا )

المقدمة من wikipedia emerging languages
ಸೂರ್ಯ ಲೇಖನಕ್ಕಾಗಿ ಇಲ್ಲಿ ನೋಡಿ.

ಎಕ್ಕ(ಮಂದಾರ)

ಸಂ: ಅರ್ಕ, ಮಂದಾರ

ಹಿಂ: ಮದಾರ್, ಆಕ್

ಮ: ರೂಯೀ

ಗು: ಅಕಾಡೋ

ತೆ: ಜಿಲ್ಲೇಡು

ತ: ಏರ್ಕಂ

ಅರ್ಕ ಅಥವಾ ಎಕ್ಕ ಒಂದು ಔಷಧೀಯ ಸಸ್ಯ.

ಸಸ್ಯ ಶಾಸ್ತ್ರೀಯ ವರ್ಗೀಕರಣ

ಕಾಲೋಟ್ರೋಪಿಸ್ ಜೈಜಾಂಟಿಯ ಎಂಬುದು ಇದರ ಸಸ್ಯ ಶಾಸ್ತ್ರೀಯ ನಾಮ.ಸಂಸ್ಕೃತದಲ್ಲಿ : 'ಅಲರ್ಕ', 'ವಿಕರಣ', 'ಆಸ್ಫೋಟ,';ಇಂಗ್ಲೀಷ್‍ನಲ್ಲಿ : 'ಸೊಡೊಮ್ ಅಪಲ್';ಹಿಂದಿಯಲ್ಲಿ : 'ಮೊದರ್';ತಮಿಳು ಭಾಷೆಯಲ್ಲಿ : 'ವೆಳೇರುಕ್ಕು'

ಎಕ್ಕದ ಗಿಡದ ಸೂಕ್ಷ್ಮ-ಪರಿಚಯ

'ಅರ್ಕ,' ಎಂದರೆ, ಪೂಜನೀಯವೆಂದರ್ಥ. 'ತೈತ್ತರೀಯ ಸಂಹಿತೆ,' ಯಲ್ಲಿ ಅರ್ಕ, ಉಷ್ಣ ಮತ್ತು ತೀಕ್ಶ್ಣ ಗುಣಗಳನ್ನು ಹೊಂದಿದೆಯೆಂದು ಹೇಳಲಾಗಿದೆ. 'ಅಥರ್ವ ಶೌನಕೇಯ ಸಂಹಿತೆ,' ಯಲ್ಲಿ 'ಅರ್ಕಮಣಿ' 'ವಾಜೀಕರಣ,' (ಸಂತಾನ ಸಾಮರ್ಥ್ಯ ಸಂವರ್ಧನೆ) ದಂತೆ ಕಾರ್ಯ ನಿರ್ವಹಿಸುತ್ತದಯೆಂದು ತಿಳಿಸಲಾಗಿದೆ. ಎಕ್ಕ ಬುಡದಲ್ಲಿ ಕವಲೊಡೆದು, ಪೊದೆಯಂತೆ ಬೆಳೆಯುತ್ತದೆ. ಕೆಲವುಬಾರಿ ಇದು ಚಿಕ್ಕ ಮರವಾಗಿ ಬೆಳೆಯಬಹುದು. ಗಿಡದ ಎಲ್ಲಾ ಭಾಗಗಳ ಮೇಲೆ, ಚಿಕ್ಕ ಚಿಕ್ಕ ರೋಮಗಳಿರುತ್ತವೆ. ಕಾಂಡ, ಎಲೆ, ಮತ್ತು ಹೂವಿನ ತೊಟ್ಟಿನೊಳಗೆ, ಬಿಳಿಯ ಸಸ್ಯ ಕ್ಷೀರವಿರುತ್ತದೆ. ಕಾಂಡದ ತುದಿಯಲ್ಲಿ ಮತ್ತು ಎಲೆಯ ಕಂಕುಳಿನಲ್ಲಿ ಬಿಳಿಯ ಹೂಗಳು ಗೊಂಚಲಾಗಿ ಬಿಡುತ್ತವೆ. ಒಂದೇ ಹೂವಿನ ತೊಟ್ಟಿನಮೇಲೆ, ಜೋಡಿಕಾಯಿಗಳಿರುತ್ತವೆ. ಬೀಜದ ತುದಿಯಲ್ಲಿ ರೇಷ್ಮೆಯಂತೆ ನುಣುಪಾದ ರೋಮಗಳಿರುತ್ತವೆ. ಇದರಿಂದ 'ಬೀಜಪ್ರಸಾರ,' ಗಾಳಿಯಸಹಾಯದಿಂದ ಆಗಲು ನೆರವಾಗುತ್ತದೆ.

ವರ್ಣನೆ

ಇದರಲ್ಲಿ ಬಿಳಿ ಮತ್ತು ಕೆಂಪು ಬೇದಗಳಿವೆ. ಬಿಳಿಎಕ್ಕ ಮೂಲಿಕಾ ಚಿಕಿತ್ಸೆಯಲ್ಲಿ ಉತ್ತಮವಾದುದು.ಅಗಲವಾದ ಎಲೆಗಳು ಗೊಂಚಲು ಹೂಗಳಿರುವುವು. ಕಾಂಡದ ಮೇಲೆ ಬೂದು ಬಣ್ಣವಿರುವುದು ಹೆಚ್ಚು ಕಂಟಿಗಳಿರುವ ಪೊದೆ. ಬಲಿತಾಗ ಪುಟ್ಟ ಗಿಡವಾಗುವುದು. ಕಾಂಡ ಹಸಿರಾಗಿರುವುದು, ಕಾಯಿ ಬೀಜವಾದಾಗ ಬಿರಿಯುವುದು.ಬೀಜಗಳಿಗೆ ಪುಕ್ಕಗಳಿಂದ ಬೀಜಗಳು ಗಾಳಿಯಲ್ಲಿ ತೇಲಿ ಬೀಜ ಪ್ರಸಾರಣೆ ಮಾಡುವುವು.ಇದರ ಎಲೆ ಅಥವಾ ದಂಟನ್ನು ಮುರಿದಾಗ ಬಿಳಿ ಹಾಲು ಬರುವುದು. ರಥಸಪ್ತಮಿ ದಿವಸ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ.

ಪ್ರಭೇದಗಳು

೧. 'ಬಿಳಿಹೂವು ಬಿಡುವ ಎಕ್ಕ,' ೨. 'ತಿಳಿನೇರಳೆಹೂವು ಬಿಡುವ ಎಕ್ಕ,' ('ಕರಿ ಎಕ್ಕ') ಔಷಧಿಗುಣಗಳು ಈ ಎರಡೂ ಜಾತಿಗಳಲ್ಲಿ ಒಂದೇ ತರಹವಿರುತ್ತದೆ.

 src=
ಬಿಳಿ ಎಕ್ಕದ ಹೂವು

ಉಪಯುಕ್ತ ಭಾಗಗಳು

ಬೇರು, ಬೇರಿನ ತೊಗಟೆ, ಎಲೆ, ಹಾಲಿನಂತಹ ದ್ರವ ಮತ್ತು ಹೂಗಳು

ರಾಸಾಯನಿಕ ಘಟಕಗಳು

ಆಲ್ಫಾ ಮತ್ತು ಬೀಟಾ, ಅಮಿರಾನ್, ಪ್ರೊಸೆಸ್ಟರಾಲ್ ಬೀಟಾ ಸಿಟೋಸ್ಪಿರಾಲ್, ಕಾಲಾಕ್ವಿನ್, ಕಾಲೊಟಾಕ್ಸಿನ್, ಕಾಲೊಬ್ರೊಪಿನ್, ಪ್ರೊಸೆರೊಸೈಡ್

 src=
ಮೊಗ್ಗು
 src=
ಅರ್ದ ಬಿಡಿಸಲ್ಪಟ್ಟ ಕಾಯಿ

ಔಷಧೀಯ ಗುಣಗಳು

  • ಎಕ್ಕದ ಯಾವುದೇ ಭಾಗವನ್ನಾಗಲಿ ಔಷಧರೂಪದಲ್ಲಿ ಸೇವನೆಗೆ ನೀಡಬೇಕಾದಲ್ಲಿ, ಆ ಭಾಗವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ೭ ಸಾರಿ ಹಸುವಿನ-ಹಾಲಿನಲ್ಲಿ ಭಾವನೆ ಕೊಟ್ಟು ಅನಂತರ ೭ ಬಾರಿ ಎಣ್ಣೆ-ಹಾಲಿನಲ್ಲಿ ಭಾವನೆಕೊಟ್ಟು ಉಪಯೋಗಿಸಬೇಕು.
  • ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ-ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ.
  • ಚೇಳುಕಡಿದಲ್ಲಿ ಎಕ್ಕದ ಬೇರನ್ನು ತಣ್ಣೀರಿನಲ್ಲಿ ಅರೆದು ಕುಡಿಯಬೇಕು.
  • ಕಫದಿಂದ ಕೂಡಿದ ಕೆಮ್ಮಿದ್ದರೆ,ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ೫ ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.
  • ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.
  • ಅಂಗಾಲಿನಲ್ಲಿ ಮುಳ್ಳು ಸೇರಿಕೊಂಡಿದ್ದರೆ, ಮುಳ್ಳನ್ನು ನಿಧಾನವಾಗಿ ತೆಗೆದು ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ನಿವಾರಣೆಯಾಗುತ್ತದೆ.
  • 'ಮೂಲವ್ಯಾಧಿ,' ಯಿಂದ ಬಳಲುವವರಿಗೆ ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೊಳಕೆಗಳಿಗೆ ಲೇಪಿಸುವುದರಿಂದ ಬೇಗ ಗುಣವಾಗುತ್ತದೆ.
  • ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಬಹುದು. 'ಹಲ್ಲುನೋವಿಗೆ,' ಇದು ಬಹಳ ಒಳ್ಳೆಯದು.
  • 'ಮೂತ್ರಕಟ್ಟಿದ್ದಲ್ಲಿ,' ಎಕ್ಕದ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿಟ್ಟುಕೊಂಡು ೧೦ ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರಸಿ ಕುಡಿಸುವುದರಿಂದ 'ಮೂತ್ರವಿಸರ್ಜನೆ,' ಸುಗಮವಾಗುತ್ತದೆ.
  • ಮೇಲಿಂದ-ಮೇಲೆ 'ಅಜೀರ್ಣ,' ದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ,ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.
  • 'ಗಾಯ,' ಗಳಿಗೆ ಮತ್ತು 'ವೃಣ,' ಗಳಿಗೆ ಒಣಗಿಸಿದ ಎಲೆಯನ್ನು ಪುಡಿಮಾಡಿಟ್ಟುಕೊಂಡು ಸಿಂಪಡಿಸಬೇಕು.
  • ಮಹಿಳೆಯರಿಗೆ 'ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ,'ಎಕ್ಕದ ಹೂವು, ಬೆಲ್ಲ ಸೇರಿಸಿ,ಅರೆದು ಗುಳಿಗೆಮಾಡಿಕೊಂಡು, ದಿನಕ್ಕೆ ೩-೪ ಮಾತ್ರೆಯಂತೆ ಸೇವಿಸುವುದು ಉತ್ತಮ.
  • 'ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು',ಎಕ್ಕದ ಹೂವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ ೧೫ ದಿನಗಳ ವರೆಗೆ ಸೇವಿಸತಕ್ಕದ್ದು.
  • ಅಜೀರ್ಣವಿದ್ದರೆ, ಎಕ್ಕದ ೧೦ ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.
  • ಕ್ರಿಮಿಕೀಟಗಳು, ಕಜ್ಜಿ,ಊತ, ಉರಿ ಬಾಧಿಸುತ್ತಿದ್ದರೆ, ಎಕ್ಕದ ಹಾಲನ್ನು ಅದರಮೇಲೆ ಲೇಪಿಸಿದರೆ, ಉಪಶಮನ ದೊರೆಯುತ್ತದೆ.

ಬಿಳಿ ತೊನ್ನುರೋಗಕ್ಕೆ

ಬಲಿತ ಅರಿಶಿನ ಕೊಂಬು ಮತ್ತು ಬಲಿತ ಎಕ್ಕದ ಬೇರನ್ನು ತಣ್ಣೀರಿನಲ್ಲಿ ತೇದು ತೊನ್ನಿರುವ ಸ್ಥಳದಲ್ಲಿ ಹಚ್ಚುವುದು. ಶರೀರದ ಸ್ವಲ್ಪ ಭಾಗದಲ್ಲಿ ಪ್ರಥಮವಾಗಿ ಲೇಪಿಸುವುದು. ಗುಣಕಂಡ ಮೇಲೆ ಚಿಕಿತ್ಸೆಯನ್ನು ಮುಂದುವರಿಸುವುದು.

ಕಾಲಾರಾ ಬೇನೆಯಲ್ಲಿ

ಎಕ್ಕದ ಬೇರಿನತೊಗಟೆ ಮತ್ತುಮೆಣಸಿನ ಕಾಳು ಸಮತೂಕ ನುಣ್ಣಗೆಚೂರ್ಣಮಾಡಿ, ಹಸಿರು ಶುಂಠಿರಸದಲ್ಲಿ ಮರ್ದಿಸಿ ಕಡಲೆಗಾತ್ರ ಗುಳಿಗೆಯನ್ನು ಮಾಡಿ ನೆರಳಲ್ಲಿ ಒಣಗಿಸುವುದು.ಪ್ರತಿಎರಡು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು.

ಚೇಳಿನ ವಿಷಕ್ಕೆ

ಹಿಂಗನ್ನು ಎಕ್ಕದ ಹಾಲಿನಲ್ಲಿ ತೇದು ಚೇಳು ಕುಟುಕಿರುವ ಜಾಗದಲ್ಲಿ ಹಚ್ಚುವುದು.

ಉದರ ಬೇನೆ, ಅಜೀರ್ಣದಲ್ಲಿ

ಇನ್ನೊ ಬಿರಿಯದಿರುವ 20 ಮೊಗ್ಗುಗಳನ್ನು ತಂದು ಶುಂಠಿ ,ಓಮದ ಕಾಳು ಮತ್ತುಕರಿಯ ಲವಣವನ್ನು ಸಮಪ್ರಮಾಣದಲ್ಲಿ ಸೇರಿಸಿ, ಶುದ್ಧ ನೀರಿನಲ್ಲಿಅರೆದುಕಡಲೆಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ದಿವಸಕ್ಕೆ ಎರಡು ಸಾರಿಒಂದೊಂದು ಮಾತ್ರೆಯನ್ನು ಸೇವಿಸಿ ನೀರುಕುಡಿಯುವುದು.

ವಾಯು ನೋವುಗಳಿಗೆ

ಎಕ್ಕದಎಲೆಯರಸ 20 ಗ್ರಾಂ, ಬೊಂತೆ ಕಳ್ಳಿ ರಸ 20ಗ್ರಾಂ, ಲಕ್ಕಿ ಎಲೆ ರಸ, 20 ಗ್ರಾಂ, ಉಮ್ಮತ್ತಿ ಎಲೆ ರಸ 20 ಗ್ರಾಂ, ಹಸುವಿನ ಹಾಲು 60ಮಿ, ಲಿ. ಎಳ್ಳಣ್ಣೆ 120 ಗ್ರಾಂ ಸೇರಿಸಿ ಕಾಯಿಸುವಾಗ, ರಾಸ್ಮಿ, ವಿಳಂಗ, ದೇವದಾರು, ಗಜ್ಜುಗದ ತಿರುಳು ಪುಡಿ ಎರಡೆರಡು ಟೀ ಚಮಚ ಹಾಕಿ ಇಳಿಸುವಾಗ 20 ಗ್ರಾಂ ಆರತಿಕರ್ಪೂರ ಹಾಕುವುದು. ತಣ್ಣಗಾದ ಮೇಲೆ ಕೀಲು, ಕಾಲು ನೋವುಗಳಿಗೆ ಹಚ್ಚುವುದು.

ಛಾಯಾಂಕಣ

ಉಲ್ಲೇಖಗಳು

ಉಲ್ಲೇಖ

  • ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್,ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್.ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು.
ترخيص
cc-by-sa-3.0
حقوق النشر
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
النص الأصلي
زيارة المصدر
موقع الشريك
wikipedia emerging languages

ಅರ್ಕ: Brief Summary ( الكانادا )

المقدمة من wikipedia emerging languages
ಸೂರ್ಯ ಲೇಖನಕ್ಕಾಗಿ ಇಲ್ಲಿ ನೋಡಿ.
ترخيص
cc-by-sa-3.0
حقوق النشر
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
النص الأصلي
زيارة المصدر
موقع الشريك
wikipedia emerging languages