ಕನ್ನಡದಲ್ಲಿ ಗರುಗ, ಗರುಗದ ಸೊಪ್ಪು, ಕಾಡಿಗ್ಗರುಗ ಎಂದು ಕರೆಯಲ್ಪಡುವ ಭೃಂಗರಾಜ ಎಲ್ಲೆಡೆ ಕಳೆಯಂತೆ ಬೆಳೆಯುವ ಸಸ್ಯ[೩]. ಕೂದಲಿಗೆ ಬಣ್ಣ ಕೊಡುವ ಮತ್ತು ತಲೆಗೂದಲನ್ನು ಸೊಂಪಾಗಿ ಬೆಳೆಸುವ ಗುಣವುಳ್ಳವಾದ್ದರಿಂದ ಸಂಸ್ಕೃತದಲ್ಲಿ ಕೇಶರಂಜನ, ಕೇಶರಾಜ ಎಂಬ ಹೆಸರೂ ಇದೆ. ಅರ್ಧ ತಲೆನೋವಿಗೆ ಉತ್ತಮ ಔಷಧಿಯಾಗಿರುವುದರಿಂದ ಸೂರ್ಯಾವರ್ತ ಎಂಬ ಹೆಸರೂ ಇದೆ. ಭೃಂಗರಾಜ ತನ್ನಲ್ಲಿರುವ ಅಮೂಲ್ಯ ಗುಣಗಳಿಂದಾಗಿ ಪ್ರಾಚೀನ ಕಾಲದಿಂದಲೂ ಸೌಂದರ್ಯವರ್ಧಕ ಗಿಡಮೂಲಿಕೆಯಾಗಿ ಬಳಸಲ್ಪಡುತ್ತಿತ್ತೆಂದು ಶೌನಕೇಯ, ಅಥರ್ವ ಮತ್ತು ಕೌಶಿಕ ಸೂತ್ರಗಳಲ್ಲಿ ಉಲ್ಲೇಖ ದೊರೆಯುತ್ತದೆ. ಅಷ್ಟಾಂಗ ಹೃದಯದಲ್ಲಿ ವಾಗ್ಭಟ ಭೃಂಗರಾಜವನ್ನು ದಿನನಿತ್ಯ ಸೇವನೆ ಮಾಡವುದರಿಂದ ರಸಾಯನ (ಬಲದಾಯಕ ಔಷಧಿ)ವಾಗಿ ಕಾರ್ಯ ಮಾಡುತ್ತದೆಂದು ತಿಳಿಸಿದ್ದಾನೆ. ರಾಜನಿಘಂಟುವಿನಲ್ಲಿ ಕೃಷ್ಣವರ್ಣ (ನೀಲಿ) ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆಯೆಂದು ವಿವರಿಸಲಾಗಿದೆ. ಕಹಿರಸ ಹೊಂದಿದ್ದು ಚರ್ಮಕ್ಕೆ ಹಿತಕರವಾಗಿದೆ. ಇದರ ಎಲೆಗಳನ್ನು ಸಂಕಷ್ಟಹರ ಚತುರ್ಥಿ ವ್ರತದಲ್ಲಿ ಗಣಪತಿಗೆ, ನಿತ್ಯ ಸೋಮವಾರ ವ್ರತದಲ್ಲಿ ಶಿವ ಮತ್ತು ಗೌರಿಗೆ, ಶ್ರೀ ನರಸಿಂಹ ಜಯಂತಿ ವ್ರತದಲ್ಲಿ ವಿಷ್ಣುವಿಗೆ ಮತ್ತು ಶ್ರೀ ಉಮಾ-ಮಹೇಶ್ವರರಿಗೆ ಪೂಜಿಸುತ್ತಾರೆ.
ಎಕ್ ಲಿಪ್ಟ ಆಲ್ಬ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಭೃಂಗರಾಜ ಕಾಂಪೋಸಿಟೆ ಕಟುಂಬಕ್ಕೆ ಸೇರಿದೆ. ಇದು ಎರಡು ಅಡಿ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ. ಕಾಂಡವು ತುಂಬಾ ಮೃದುವಾಗಿದ್ದು. ಆಚೆ ಈಚೆ ಕವಲುಗಳು ಆಕ್ರಮಿಸಿ ನೆಲದ ಮೇಲೆ ತೆವಳಿ ಬೆಳೆಯುತ್ತದೆ. ಹೂವು ಬಿಳಿಯದಾಗಿದ್ದು ಚಿಕ್ಕದಾಗಿರುತ್ತದೆ. ಒಣಗಿದಾಗ ಅದರೊಳಗಿರುವ ಕಪ್ಪು ಬಣ್ಣದ ಬೀಜಗಳು ಹೊರಗೆ ಬರುತ್ತವೆ.
ಎಲ್ಲಾ ತರಹದ ಮಣ್ಣಿನಲ್ಲೂ ಬೆಳೆಯಬಹುದಾದಂತಹ ಗಡುತರ ಸಸ್ಯ. ಸ್ವಾಭಾವಿಕವಾಗಿ ಈ ಗಿಡವು ಭತ್ತದ ಗದ್ದೆಗಳಲ್ಲಿ ಮತ್ತು ನೀರು ಹರಿದು ಹೋಗುವ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ಫಲವತ್ತಾದ ಕೆಂಪುಗೋಡು ಮಣ್ಣಿನಲ್ಲಿ ಈ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ.
ಇದು ಉಷ್ಣಶೀತ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಉತ್ತಮವಾಗಿ ಬೆಳೆಯಬಲ್ಲದು. ಉಷ್ಣಾಂಶ ೨೫-೩೦ ಡಿಗ್ರಿ ಸೆ. ಹಾಗೂ ಕಡಿಮೆ ತೇವಾಂಶ ಇರುವ ಪ್ರದೇಶವು ಈ ಬೆಳೆಗೆ ಒಳ್ಳೆಯದು.
ಪುಷ್ಪಗಳ ಬಣ್ಣಗಳಿಗನುಗುಣವಾಗಿ ಬಿಳಿ, ನೀಲಿ, ಹಳದಿ ಬಣ್ಣದ ಮೂರು ವಿಧಗಳಿವೆ. ಕೇರಳದಲ್ಲಿ ವೈದ್ಯರು ಹೆಚ್ಚಾಗಿ ಹಳದಿಬಣ್ಣದ ಬೃಂಗರಾಜವನ್ನು ಔಷಧಿಯಲ್ಲಿ ಉಪಯೋಗಿಸುತ್ತಾರೆ. ನೀಲಿಬಣ್ಣದ ಭೃಂಗರಾಜ ಪಶ್ಚಿಮ ಬಂಗಾಳದಲ್ಲಿ ಭೀಮರಾಜ ಎಂಬ ಹೆಸರಿನಲ್ಲಿ ಪ್ರಸಿದ್ಧವಿದೆ.
ಪಂಚಂಗಗಳು ಅಂದರೆ ಬೇರು, ಕಾಂಡ, ಎಲೆ, ಹೂ, ಬೀಜ ಎಲ್ಲವೂ ಔಷಧೀಯ ಗುಣ ಹೊಂದಿವೆ.
ಕನ್ನಡದಲ್ಲಿ ಗರುಗ, ಗರುಗದ ಸೊಪ್ಪು, ಕಾಡಿಗ್ಗರುಗ ಎಂದು ಕರೆಯಲ್ಪಡುವ ಭೃಂಗರಾಜ ಎಲ್ಲೆಡೆ ಕಳೆಯಂತೆ ಬೆಳೆಯುವ ಸಸ್ಯ. ಕೂದಲಿಗೆ ಬಣ್ಣ ಕೊಡುವ ಮತ್ತು ತಲೆಗೂದಲನ್ನು ಸೊಂಪಾಗಿ ಬೆಳೆಸುವ ಗುಣವುಳ್ಳವಾದ್ದರಿಂದ ಸಂಸ್ಕೃತದಲ್ಲಿ ಕೇಶರಂಜನ, ಕೇಶರಾಜ ಎಂಬ ಹೆಸರೂ ಇದೆ. ಅರ್ಧ ತಲೆನೋವಿಗೆ ಉತ್ತಮ ಔಷಧಿಯಾಗಿರುವುದರಿಂದ ಸೂರ್ಯಾವರ್ತ ಎಂಬ ಹೆಸರೂ ಇದೆ. ಭೃಂಗರಾಜ ತನ್ನಲ್ಲಿರುವ ಅಮೂಲ್ಯ ಗುಣಗಳಿಂದಾಗಿ ಪ್ರಾಚೀನ ಕಾಲದಿಂದಲೂ ಸೌಂದರ್ಯವರ್ಧಕ ಗಿಡಮೂಲಿಕೆಯಾಗಿ ಬಳಸಲ್ಪಡುತ್ತಿತ್ತೆಂದು ಶೌನಕೇಯ, ಅಥರ್ವ ಮತ್ತು ಕೌಶಿಕ ಸೂತ್ರಗಳಲ್ಲಿ ಉಲ್ಲೇಖ ದೊರೆಯುತ್ತದೆ. ಅಷ್ಟಾಂಗ ಹೃದಯದಲ್ಲಿ ವಾಗ್ಭಟ ಭೃಂಗರಾಜವನ್ನು ದಿನನಿತ್ಯ ಸೇವನೆ ಮಾಡವುದರಿಂದ ರಸಾಯನ (ಬಲದಾಯಕ ಔಷಧಿ)ವಾಗಿ ಕಾರ್ಯ ಮಾಡುತ್ತದೆಂದು ತಿಳಿಸಿದ್ದಾನೆ. ರಾಜನಿಘಂಟುವಿನಲ್ಲಿ ಕೃಷ್ಣವರ್ಣ (ನೀಲಿ) ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆಯೆಂದು ವಿವರಿಸಲಾಗಿದೆ. ಕಹಿರಸ ಹೊಂದಿದ್ದು ಚರ್ಮಕ್ಕೆ ಹಿತಕರವಾಗಿದೆ. ಇದರ ಎಲೆಗಳನ್ನು ಸಂಕಷ್ಟಹರ ಚತುರ್ಥಿ ವ್ರತದಲ್ಲಿ ಗಣಪತಿಗೆ, ನಿತ್ಯ ಸೋಮವಾರ ವ್ರತದಲ್ಲಿ ಶಿವ ಮತ್ತು ಗೌರಿಗೆ, ಶ್ರೀ ನರಸಿಂಹ ಜಯಂತಿ ವ್ರತದಲ್ಲಿ ವಿಷ್ಣುವಿಗೆ ಮತ್ತು ಶ್ರೀ ಉಮಾ-ಮಹೇಶ್ವರರಿಗೆ ಪೂಜಿಸುತ್ತಾರೆ.