ಸಂಪಿಗೆ - ಒಂದು ಹೂವಿನ ಹೆಸರು. ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದ ಅಂಗಳದಲ್ಲಿ, ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ.
ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ.
೧೭೩೭ ರಲ್ಲಿ ಅಂದಿನ ಪ್ರಸಿದ್ದ ವಿಜ್ಞಾನಿ ಮೈಕೆಲ್ ಪಿ.ಎ. ಅವರು ಕಂಡುಹಿಡಿದುದರಿಂದ ಈ ಹೆಸರು. ವಿವಿಧ ದೇಶಗಳಲ್ಲಿ ಪ್ರಮುಖವಾಗಿ ಶ್ರೀಲಂಕಾ, ಫಿಲಿಪೈನ್ಸ್, ಜಪಾನ್, ಚೀನಾ, ಇಂಡೋನೇಷ್ಯ, ದಕ್ಷಿಣ ಆಫ್ರೀಕಾದ ದಟ್ಟ ಕಾಡುಗಳಲ್ಲಿ ಸಂಪಿಗೆ ಮರ ಬೇರು ಬಿಟ್ಟಿದೆ.
ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಹೂ ಬಿಡುವುದು. ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ, ಬೂದು,ಕಡುಹಳದಿ,ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಬಿಡುತ್ತದೆ.