ಅಮಟೆ (ಸ್ಪೊಂಡಿಯಾಸ್ ಮಾಂಬಿನ್) ಒಂದು ಮರ, ಆನಕಾರ್ಡಿಯೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಈ ಮರವನ್ನು ಆಫ್ರಿಕಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೊನೇಷ್ಯಾದ ಭಾಗಗಳಲ್ಲಿ ದೇಶೀಕರಿಸಲಾಗಿದೆ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ನು ಹೊಂದಿರುತ್ತದೆ.[೨]ಆಮ್ರಾತಕ ಸಾಮಾನ್ಯ ಹೆಸರು ಅಮಟೆ.ಇದು ಅನಾಕಾರ್ಡಿಯಾಸಿ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯಗಳ ಒಂದುಜಾತಿಯಾಗಿದೆ.ಇದರ ವೈಜ್ಞಾನಿಕ ಹೆಸರು ಸ್ಪಾಂಡಿಯಾಸ್‍ಎಂದುಗುರುತಿಸಲಾಗಿದೆ. ಬಿಸಿ ಉಷ್ಣವಲಯದ ತಗ್ಗು ಪ್ರದೇಶಗಳಲ್ಲಿ ಬೆಳೆಯುವ ಈ ಗಿಡ, ಪೂರ್ಣ ಸೂರ್ಯ ಮತ್ತು ಆಂಶಿಕ ನೆರಳನ ವಾತಾವರಣದಲ್ಲಿ ಹೆಚ್ಚಾಗಿ ಕಂಡುಬರುತ್ತದೆ[೩][೪]
ಭಾರತ, ಬರ್ಮಾ (ಮ್ಯಾನ್ಮರ್), ಇಂಡೋಚೀನಾ, ದಕ್ಷಿಣ ಚೀನಾ, ಥೈಲ್ಯಾಂಡ್, ಮಲೇಷಿಯಾ, ಶ್ರೀಲಂಕಾ. [೭]
ಸುಮಾರು 27ಮೀ ಎತ್ತರ ಮತ್ತು ಕಾಂಡದ ವ್ಯಾಸದಿಂದ 50 ಸೆಂ.ಮೀ ವರೆಗೆ ಈ ಮರ ಬೆಳೆಯುತ್ತವೆ. ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ. ಎಲೆಗಳ ಗಾತ್ರ 5-11 ಸೆಂ.ಮೀ. ವಿಶಾಲವಾದ ಅಂಡ ವೃತ್ತಾಕಾರದಲ್ಲಿರುತ್ತವೆ. 6-10ಸೆಂ.ಮೀ ಉದ್ದ ಹೊಂದಿದ್ದು, ಬುಡ ದುಂಡಾಗಿರುತ್ತವೆ. ತುದಿ ಚೂಪಾಗಿದ್ದು, 20-25 ಜೋಡಿಗಳಷ್ಟು ಹತ್ತಿರವಾದ ಸಮಾನಾಂತರ ರಕ್ತನಾಳಗಳೊಂದಿಗೆ ಎಲ್ಲಾ ಒಳ ಅಂಡಾಕಾರದ ಅಭಿಧಮಿ ಸೇರಿರುತ್ತದೆ.ಅಮಟೆ ಗಿಡದಲ್ಲಿ ಬೆಳೆಯುವ ಹೂವನ್ನು ಪುಪ್ಪಮಂಜರಿ ಎಂದು ಕರೆಯುತ್ತಾರೆ. ಇದರಲ್ಲಿ ಉದ್ದವಾದ ಅಂಡಾವೃತ್ತಾಕಾರದ ಬೀಜಇರುತ್ತವೆ.
ಇದರ ಹಣ್ಣುನ್ನು ರಕ್ತದೊತ್ತಡ ಮತ್ತು ಮೂಲವ್ಯಾಧಿ ರೋಗ ನಿವಾರಣೆಗೆ ಬಳಸುತ್ತಾರೆ. ಹಣ್ಣಿನ ರಸವನ್ನು ಕಿವಿಯ ಸಮಸ್ಯೆಗೆ ಉಪಯೋಗಿಸುತ್ತಾರೆ. ಇದರ ತೊಗಟೆಯನ್ನು ಹೊಟ್ಟೆ ನೋವು ಮತ್ತು ಉರಿಯೂತದ ಚಿಕಿತ್ಸೆಗೆ ಬಳಸುತ್ತಾರೆ. ಸಂಧಿವಾತ ಮತ್ತು ಊದಿಕೊಂಡ ಕೀಲುಗಳ ಚಿಕಿತ್ಸೆಯಲ್ಲಿ ತೊಗಟೆಯ ಪೇಸ್ಟನ್ನು ಬಳಸುತ್ತಾರೆ.ಬೇರನ್ನು ಉಪಯೋಗಿಸುವುದರಿಂದ ಮುಟ್ಟಿನ ನಿಯಂತ್ರಣವನ್ನು ನಿಯಂತ್ರಿಸುವಲ್ಲಿ ಉಪಯುಕ್ತವಾಗಿದೆ.[೧೦][೧೧]
ಅಮಟೆ (ಸ್ಪೊಂಡಿಯಾಸ್ ಮಾಂಬಿನ್) ಒಂದು ಮರ, ಆನಕಾರ್ಡಿಯೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಈ ಮರವನ್ನು ಆಫ್ರಿಕಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೊನೇಷ್ಯಾದ ಭಾಗಗಳಲ್ಲಿ ದೇಶೀಕರಿಸಲಾಗಿದೆ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ನು ಹೊಂದಿರುತ್ತದೆ.ಆಮ್ರಾತಕ ಸಾಮಾನ್ಯ ಹೆಸರು ಅಮಟೆ.ಇದು ಅನಾಕಾರ್ಡಿಯಾಸಿ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯಗಳ ಒಂದುಜಾತಿಯಾಗಿದೆ.ಇದರ ವೈಜ್ಞಾನಿಕ ಹೆಸರು ಸ್ಪಾಂಡಿಯಾಸ್‍ಎಂದುಗುರುತಿಸಲಾಗಿದೆ. ಬಿಸಿ ಉಷ್ಣವಲಯದ ತಗ್ಗು ಪ್ರದೇಶಗಳಲ್ಲಿ ಬೆಳೆಯುವ ಈ ಗಿಡ, ಪೂರ್ಣ ಸೂರ್ಯ ಮತ್ತು ಆಂಶಿಕ ನೆರಳನ ವಾತಾವರಣದಲ್ಲಿ ಹೆಚ್ಚಾಗಿ ಕಂಡುಬರುತ್ತದೆ