ಅರಿಶಿನ ಬುರುಡೆ ಹಕ್ಕಿ , ಒರಿಯಲ್ ಕುಂಡೂ (Oriolus kundoo ಕ-ಅರಿಶಿನ-ಬುರುಡೆ) ಜಾತಿಗೆ ಸೇರಿದ ಗುಬಚ್ಚಿ ಗಾತ್ರದ ಹಕ್ಕಿ. ಇದನ್ನು ಭಾರತ ಉಪಖಂಡ ಹಾಗು ಮಧ್ಯ ಏಷ್ಯದೆಲ್ಲೆಡೆ ಕಾಣಬಹುದು. ಈ ಹಕ್ಕಿ ಕೆಲವೆಡೆ ಮದುವಣಗಿತ್ತಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಮದುವಣಗಿತ್ತಿ (ಮದುಮಗಳು) ಎಂಬ ಹೆಸರಿಗೆ ತಕ್ಕಂತೆ ಮುಖ ಮೈ ಎಲ್ಲವೂ ಅರಿಶಿನ, ಹಣೆಯ ಕುಂಕುಮದಂತೆ ಕೆಂಪು ಕೊಕ್ಕು, ಕಾಡಿಗೆ ತೀಡಿದ ಕಣ್ಣಿನಂತೆ ಕಣ್ಣಿನ ಪಕ್ಕಕ್ಕೆ ಕಪ್ಪು ಬಣ್ಣ ತೀಡಿರುವುದರಿಂದ ಮದುವಣಗಿತ್ತಿ ಎಂಬ ಹೆಸರು ಈ ಹಕ್ಕಿಯ ರೂಪವನ್ನು ಸೂಕ್ತವಾಗಿ ಸೂಚಿಸುತ್ತದೆ . ಆದರೆ ಈ ಹೆಸರು ಸೂಚಿಸುವಂತೆ ಇದು ಹೆಣ್ಣ ಹಕ್ಕಿಯ ರೂಪ ಲಕ್ಷಣಗಳಲ್ಲ - ಇದು ಗಂಡು ಹಕ್ಕಿಯ ರೂಪ ಲಕ್ಷಣಗಳಾಗಿವೆ. ಈ ಹಕ್ಕಿಯನ್ನು ಇನ್ನೂ ಬೇರೆ ಬೇರೆ ಹೆಸರುಗಳಿಂದಲೂ ಕರೆಯುವುದುಂಟು, ಸುವರ್ಣ ಪಕ್ಷಿ, ಹೊನ್ನಕ್ಕಿ, ಮಂಜಲಪಕ್ಕಿ, ಮಂಜಲಕ್ಕಿ (ತುಳು), ಮಂಜಪಕ್ಷಿ (ಕೊಡವ), ಪಿಳಿಕ, ಪಿಪೀಲಾಯ (ಸಂಸ್ಕೃತ). ಹಿಂದೆ ಇವುಗಳನ್ನು ಯುರೇಷ್ಯದ ಹಳದಿ ಓರಿಯಲ್ ಓರಿಯೊಲಸ್ (Eurasian Golden Oriole) ( Oriolus oriolus , ಓ-ಅರಿಶಿನ-ಬುರುಡೆ )ಗಳ ಉಪ್ಪಜಾತಿ ಎಂದು ವಿಂಗಡಿಸಲ್ಪಟ್ಟಿತ್ತು ಆದರೆ ಇವುಗಳ ಬಣ್ಣ ಮಾರ್ಪಾಡು, ಕೂಗುಗಳಲ್ಲಿನ ವ್ಯತ್ಯಾಸದಿಂದಾಗಿ ಇವು ಈಗ ತಮ್ಮದೇ ಆದ ಮೂಲ ಜಾತಿಯ ಸ್ಥಾನ ಪಡೆದಿವೆ[೧]. ಇವು ಯುರೇಷ್ಯದ ಹಳದಿ ಗಂಡು ಒರಿಯಲ್ ಗಳಿಗಿಂತ ವಿಭಿನ್ನ ಎಂಬುದನ್ನು ಅದರ ಕಣ್ಣ ಹಿಂದಕ್ಕೆ ವಿಸ್ತರಿಸುವ ಕಪ್ಪು ಪಟ್ಟಿಯಿಂದ ಗುರುತಿಸಬಹುದು. ಪಾಕಿಸ್ತಾನ, ಉಜ್ಬೇಕಿಸ್ತಾನ , ತುರ್ಕ್ಮೆನಿಸ್ತಾನ್, ಕಝೆಕ್ಸ್ತಾನ್, ತಜಿಕಿಸ್ತಾನ್, ಆಫ್ಗಾನಿಸ್ತಾನ್ ಹಾಗು ನೇಪಾಳ ಹಾಗು ಭಾರತದ ಬಹುತೇಕ ಕಡೆ ಇವು ಕಾಣಿಸಿಕೊಂಡರೂ, ಬೇರೆಡೆಯ ಅರಿಶಿನ-ಬುರುಡೆಗಳು ಭಾರತದ ಪರ್ಯಾಯದ್ವೀಪದಲ್ಲಿನ ಅರಿಶಿನ-ಬುರುಡೆಗಳು ವಲಸೆ ಹೋಗುವುದಿಲ್ಲ. [೧]
ಯುರೇಷ್ಯಾದ ತಮ್ಮ ಬಳಗಕ್ಕಿಂತಲೂ, ಬಾಲದಲ್ಲಿ ಹೆಚ್ಚು ಹಳದಿ ಹೊಂದಿದ್ದು , ಕೊಕ್ಕಿನಲ್ಲಿನ ಹಾಗು ಕಣ್ಣುಗಳಲ್ಲಿನ ಕೆಂಪು ಮಂದವಾಗಿರುವ ಭಾರತದ ಅರಿಶಿನ-ಬುರುಡೆಯ ಗಂಡು ಹಕ್ಕಿಗಳಿಗೆ ಕಾಡಿಗೆ ಹಚ್ಚಿರುವಂತೆ ಕಣ್ಣಿನಿಂದ ಪಕ್ಕಕ್ಕೆ ಕಪ್ಪು ಬಣ್ಣ ತೀಡಿದ್ದು, ಕಪ್ಪು ರೆಕ್ಕೆಯ ಎರಡನೆ ಹಾಗು ಮೂರನೆ ಮಡಿಚಿನಲ್ಲಿರುವ ಪುಕ್ಕಗಳ ತುದಿ ಹಳದಿ ಯಾಗಿರುತ್ತದೆ. ಹೆಣ್ಣು ಹಕ್ಕಿಗಳ ಕೆಳಭಾಗದಲ್ಲಿನ ಭೂದಿಬಣ್ಣದ ಕಿರು ಪಟ್ಟೆಗಳು ಯುರೇಷ್ಯಾದ ಹೆಣ್ಣು ಬಳಗಕ್ಕಿಂತಲೂ ತೀಕ್ಷ್ಣವಾಗಿರುತ್ತದೆ. [೨][೩][೪] ಯುರೇಷ್ಯಾದ ಮದುವಣಗಿತ್ತಿ ಗಂಡು ಹಕ್ಕಿಗಳ ರೆಕ್ಕೆ ೧೪೯-೧೬೨ cm ಆದರೆ ಭಾರತದ ಗಂಡು ಹಕ್ಕಿಗಳ ರೆಕ್ಕೆ ೧೩೬-೧೪೪. ರೆಕ್ಕೆಯ ಪುಕ್ಕಗಳ ಸೂತ್ರದಲ್ಲೂ ವ್ಯತ್ಯಾಸವಿದೆ. ಓ-ಮದುವಣಗಿತ್ತಿಯರ ಮೂಲ ೫ ನೆಯದಕ್ಕಿಂತ ೨ ನೆಯದು ಉದ್ದ, ಕ-ಮದುವಣಗಿತ್ತಿಯರ ಮೂಲ 2 ನೆಯದಕ್ಕಿಂತ 5 ನೆಯದು ಉದ್ದವಿರುತ್ತದೆ.[೫]
ಅರಿಶಿನ-ಬುರುಡೆಗಳ ಸಂತತಿ ಬಲೂಚಿಸ್ತಾನ ಮತ್ತು ಆಫಗಾನಿಸ್ತಾನ, ಹಿಮಾಲಯ ದಿಂದ ನೇಪಾಳದವರೆಗೂ ವ್ಯಾಪಿಸಿದ್ದರೂ ಇಲ್ಲಿನ ಅರಿಶಿನ-ಬುರುಡೆಗಳು ಚಳಿಗಾಲದಲ್ಲಿ ದಕ್ಷಿಣ ಭಾರತ, ಶ್ರೀಲಂಕ, ಮಾಳ್ಡವೀಸ್ ಮತ್ತು ಆಂಡಮಾನಗಳಿಗೆ ವಲಸೆ ಬರುವುದನ್ನು ದಾಖಲಿಸಲಾಗಿದೆ. ಆದರೆ ಭಾರತದ ದಕ್ಷಿಣ ಭಾಗದ ಅರಿಶಿನ-ಬುರುಡೆಗಳು ವಲಸೆ ಹೋಗುವುದಿಲ್ಲ. [೨] ಕ-ಅರಿಶಿನ-ಬುರುಡೆಗಳ ಆವಾಸ ವಿವಿಧ ಬಗೆಯದಾಗಿವೆ. ಕುರಚಲು-ಕಾಡು, ಅಲ್ಪ-ನಿತ್ಯ ಹರಿದ್ವರ್ಣ ಕಾಡು, ಗೋಮಾಳಗಳು, ತೋಪುಗಳು, ಉದ್ಯಾನವನಗಳು, ತೋಟಗಳು, ಜನವಸತಿ ಪ್ರದೇಶ,ಪೇಟೆಗಳ ಉದ್ಯಾನಗಳಲ್ಲೂ ಅರಿಶಿನ-ಬುರುಡೆಗಳನ್ನು ಕಾಣಬಹುದು [೧]
ಹಣ್ಣುಗಳು, ಕೀಟಗಳು, ಹೂವಿನ ಮಕರಂದ [೨] ಅರಿಶಿನ ಬುರುಡೆ ಹಕ್ಕಿಗಳ ಆಹಾರ, ಇವು ಬಯಲು ಸೀಮೆಯ ಸಾಲುಮರಗಳಲ್ಲಿ ಅತ್ತಿ, ಗೋಣಿ, ಆಲ, ಬಸರಿ ಮೊದಲಾದ ಮರಗಳು ಹಣ್ಣು ಬಿಟ್ಟಾಗ ಇತರ ಹಕ್ಕಿಗಳ ಗುಂಪಿನಲ್ಲಿ ಇವೂ ಸೇರಿ ಗಲಾಟೆ ಮಾಡುತ್ತಾ ಹಣ್ಣು ತಿನ್ನುವುದನ್ನು ನೋಡಬಹುದು. ಅವು ಲಂಟ್ರಾಣಿ ( ಲಾಂಟೆನ ) ಹಾಗು ಇತರ ಬಗೆಯ ಕಿರಿ ಹಣ್ಣುಗಳ ಬೀಜಪ್ರಸಾರಕ್ಕೆ ಕಾರಣವಾಗಿವೆ.[೬] ಇವು ಹಾರುವ ಹಲ್ಲಿಯನ್ನು (Draco dussumieri) ಬೇಟೆ ಆಡಿದ ಪುರಾವೆಯೂ ಇದೆ. [೭] ಇವುಗಳ ಹಾರಾಟ ತಗ್ಗು-ಧುಮುಕುವ ಶೈಲಿಯದಾದರೂ, ಇವು ಗಂಟೆಗೆ ೪೦ ಕಿ.ಮಿ ವೇಗ ಮುಟ್ಟಬಲ್ಲವು. ಇವು ಕೆಲವೊಮ್ಮೆ ನಿಂತ ನೀರಿನಲ್ಲಿ ಮತ್ತೆ ಮತ್ತೆ ಮೀಯುವ ಸಡಗರವನ್ನು ಗಮನಿಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಗುರುತಿಸಿದ ಮದುವಣಗಿತ್ತಿಯೊಂದು - ೯ ವರ್ಷಗಳ ನಂತರ ತಜಕಿಸ್ತಾನದಲ್ಲಿ ಕಂಡಿರುವ ದಾಖಲೆ ಇದೆ.[೮] ಏಪ್ರಿಲ್ ನಿಂದ ಆಗಸ್ಟ್ ಮಾಸಗಳಲ್ಲಿ ಸಂತಾನ ಅಭಿವೃದ್ಧಿ ನಡೆಸಿ ಇವು ಜೇಡರ ಬಲೆಯನ್ನೂ , ಹುಲ್ಲು, ನಾರು, ಮತ್ತು ಎಲೆಗಳಿಂದ ಎರಡು ಕೊಂಬೆಗಳ ಮಧ್ಯದಲ್ಲಿ ತೊಟ್ಟಿಲಿನಂತಹ ಗೂಡನ್ನು ಕಟ್ಟುತ್ತವೆ. ಸಾಧಾರಣವಾಗಿ ಇವು ಕಾಜಾಣ/ಕರಿ-ಭುಜಂಗ (Black Drongo) ಹಕ್ಕಿಯ ಗೂಡಿನ ಅಕ್ಕಪಕ್ಕದಲ್ಲಿ ತಮ್ಮ ಗೂಡನ್ನು ಮಾಡುತ್ತವೆ.[೨] ಬಿಳಿಯ ತೊಗಟಿನಮೇಲೆ ಮಣ್ಣು ಹಾಗು ಕಪ್ಪು ಬಣ್ಣದ ಬೊಟ್ಟುಗಳುಳ್ಳ ೨-೩ ಮೊಟ್ಟೆಗಳನ್ನು ಹಾಕಿ, ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಗೂಡು ಹಾಗು ಮರಿಗಳನ್ನು ಪಾಲಿಸುತ್ತವೆ. ಇವುಗಳ ಸಂತತಿಗೆ ಕಾಗೆ, ಗಿಡಗ ಮತ್ತು ಇತರ ಭಕ್ಷಕರಿಂದ ಆತಂಕ ಹೆಚ್ಚು.[೮] ಹೀಮೊಪ್ರೋಟಿಯಸ ಎಂಬ ಪರಾವಲಂಬ ರಕ್ತ ಜೀವಿ ಅರಿಶಿನ-ಬುರುಡೆಗಳಲ್ಲಿ ಸಾಧಾರಣವಾಗಿ ಕಾಣಿಸಿಕೊಳುತ್ತವೆ.[೯]
ಅರಿಶಿನ ಬುರುಡೆ ಹಕ್ಕಿ , ಒರಿಯಲ್ ಕುಂಡೂ (Oriolus kundoo ಕ-ಅರಿಶಿನ-ಬುರುಡೆ) ಜಾತಿಗೆ ಸೇರಿದ ಗುಬಚ್ಚಿ ಗಾತ್ರದ ಹಕ್ಕಿ. ಇದನ್ನು ಭಾರತ ಉಪಖಂಡ ಹಾಗು ಮಧ್ಯ ಏಷ್ಯದೆಲ್ಲೆಡೆ ಕಾಣಬಹುದು. ಈ ಹಕ್ಕಿ ಕೆಲವೆಡೆ ಮದುವಣಗಿತ್ತಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಮದುವಣಗಿತ್ತಿ (ಮದುಮಗಳು) ಎಂಬ ಹೆಸರಿಗೆ ತಕ್ಕಂತೆ ಮುಖ ಮೈ ಎಲ್ಲವೂ ಅರಿಶಿನ, ಹಣೆಯ ಕುಂಕುಮದಂತೆ ಕೆಂಪು ಕೊಕ್ಕು, ಕಾಡಿಗೆ ತೀಡಿದ ಕಣ್ಣಿನಂತೆ ಕಣ್ಣಿನ ಪಕ್ಕಕ್ಕೆ ಕಪ್ಪು ಬಣ್ಣ ತೀಡಿರುವುದರಿಂದ ಮದುವಣಗಿತ್ತಿ ಎಂಬ ಹೆಸರು ಈ ಹಕ್ಕಿಯ ರೂಪವನ್ನು ಸೂಕ್ತವಾಗಿ ಸೂಚಿಸುತ್ತದೆ . ಆದರೆ ಈ ಹೆಸರು ಸೂಚಿಸುವಂತೆ ಇದು ಹೆಣ್ಣ ಹಕ್ಕಿಯ ರೂಪ ಲಕ್ಷಣಗಳಲ್ಲ - ಇದು ಗಂಡು ಹಕ್ಕಿಯ ರೂಪ ಲಕ್ಷಣಗಳಾಗಿವೆ. ಈ ಹಕ್ಕಿಯನ್ನು ಇನ್ನೂ ಬೇರೆ ಬೇರೆ ಹೆಸರುಗಳಿಂದಲೂ ಕರೆಯುವುದುಂಟು, ಸುವರ್ಣ ಪಕ್ಷಿ, ಹೊನ್ನಕ್ಕಿ, ಮಂಜಲಪಕ್ಕಿ, ಮಂಜಲಕ್ಕಿ (ತುಳು), ಮಂಜಪಕ್ಷಿ (ಕೊಡವ), ಪಿಳಿಕ, ಪಿಪೀಲಾಯ (ಸಂಸ್ಕೃತ). ಹಿಂದೆ ಇವುಗಳನ್ನು ಯುರೇಷ್ಯದ ಹಳದಿ ಓರಿಯಲ್ ಓರಿಯೊಲಸ್ (Eurasian Golden Oriole) ( Oriolus oriolus , ಓ-ಅರಿಶಿನ-ಬುರುಡೆ )ಗಳ ಉಪ್ಪಜಾತಿ ಎಂದು ವಿಂಗಡಿಸಲ್ಪಟ್ಟಿತ್ತು ಆದರೆ ಇವುಗಳ ಬಣ್ಣ ಮಾರ್ಪಾಡು, ಕೂಗುಗಳಲ್ಲಿನ ವ್ಯತ್ಯಾಸದಿಂದಾಗಿ ಇವು ಈಗ ತಮ್ಮದೇ ಆದ ಮೂಲ ಜಾತಿಯ ಸ್ಥಾನ ಪಡೆದಿವೆ. ಇವು ಯುರೇಷ್ಯದ ಹಳದಿ ಗಂಡು ಒರಿಯಲ್ ಗಳಿಗಿಂತ ವಿಭಿನ್ನ ಎಂಬುದನ್ನು ಅದರ ಕಣ್ಣ ಹಿಂದಕ್ಕೆ ವಿಸ್ತರಿಸುವ ಕಪ್ಪು ಪಟ್ಟಿಯಿಂದ ಗುರುತಿಸಬಹುದು. ಪಾಕಿಸ್ತಾನ, ಉಜ್ಬೇಕಿಸ್ತಾನ , ತುರ್ಕ್ಮೆನಿಸ್ತಾನ್, ಕಝೆಕ್ಸ್ತಾನ್, ತಜಿಕಿಸ್ತಾನ್, ಆಫ್ಗಾನಿಸ್ತಾನ್ ಹಾಗು ನೇಪಾಳ ಹಾಗು ಭಾರತದ ಬಹುತೇಕ ಕಡೆ ಇವು ಕಾಣಿಸಿಕೊಂಡರೂ, ಬೇರೆಡೆಯ ಅರಿಶಿನ-ಬುರುಡೆಗಳು ಭಾರತದ ಪರ್ಯಾಯದ್ವೀಪದಲ್ಲಿನ ಅರಿಶಿನ-ಬುರುಡೆಗಳು ವಲಸೆ ಹೋಗುವುದಿಲ್ಲ.