dcsimg

ಬರ್ಕ ( 康納達語 )

由wikipedia emerging languages提供
Mouse-deer Singapore Zoo 2012.JPG

ಬರ್ಕಗಳು ಟ್ರ್ಯಾಗ್ಯುಲಿಡೇ ಕುಟುಂಬದ ಸಣ್ಣ ಗಾತ್ರದ ಗೊರಸುಳ್ಳ ಸಸ್ತನಿಗಳು. ಇದರ ೧೦ ಪ್ರಜಾತಿಗಳು ಅಸ್ತಿತ್ವದಲ್ಲಿವೆ. ಅಸ್ತಿತ್ವದಲ್ಲಿರುವ ಪ್ರಜಾತಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಒಂದೇ ಒಂದು ಪ್ರಜಾತಿ ಮಧ್ಯ ಹಾಗೂ ಪಶ್ಚಿಮ ಆಫ಼್ರಿಕಾದ ಮಳೆಕಾಡುಗಳಲ್ಲಿ ಕಂಡುಬರುತ್ತದೆ.[೧] ಇವು ಒಂಟಿಜೀವಿಗಳು ಅಥವಾ ಜೋಡಿಯಾಗಿ ಜೀವಿಸುತ್ತವೆ, ಮತ್ತು ಬಹುತೇಕವಾಗಿ ಕೇವಲ ಸಸ್ಯವಸ್ತುವನ್ನು ತಿನ್ನುತ್ತವೆ. ಬರ್ಕಗಳು ವಿಶ್ವದಲ್ಲಿನ ಅತ್ಯಂತ ಚಿಕ್ಕ ಗೊರಸುಳ್ಳ ಸಸ್ತನಿಗಳಾಗಿವೆ. ಏಷ್ಯಾದ ಪ್ರಜಾತಿಗಳು ೦.೭ ಹಾಗೂ ೮ ಕೆ.ಜಿ. ನಡುವೆ ತೂಕ ಹೊಂದಿದ್ದರೆ, ಆಫ಼್ರಿಕಾದ ಬರ್ಕವು ಗಣನೀಯವಾಗಿ ದೊಡ್ಡದಾಗಿದೆ (೭-೧೬ ಕೆ.ಜಿ.).

ಜೀವಶಾಸ್ತ್ರ

ಇದು ಒಂದು ಪ್ರಾಚೀನ ರೋಮಂಥಕ ರೂಪದ ಉದಾಹರಣೆಯಾಗಿದೆ. ಒರಟಾದ ಸಸ್ಯ ಆಹಾರಗಳನ್ನು ಕಿಣ್ವಿಸಲು ಇವು ನಾಲ್ಕು ಕೋಶಗಳ ಹೊಟ್ಟೆಗಳನ್ನು ಹೊಂದಿವೆ, ಆದರೆ ಮೂರನೇ ಕೋಶವು ಸಾಕಷ್ಟು ವಿಕಸನವಾಗಿಲ್ಲ.

ಉಲ್ಲೇಖಗಳು

  1. Nowak, R. M. (eds) (1999). Walker's Mammals of the World. 6th edition. Johns Hopkins University Press.
許可
cc-by-sa-3.0
版權
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
原始內容
參訪來源
合作夥伴網站
wikipedia emerging languages

ಬರ್ಕ: Brief Summary ( 康納達語 )

由wikipedia emerging languages提供
Mouse-deer Singapore Zoo 2012.JPG

ಬರ್ಕಗಳು ಟ್ರ್ಯಾಗ್ಯುಲಿಡೇ ಕುಟುಂಬದ ಸಣ್ಣ ಗಾತ್ರದ ಗೊರಸುಳ್ಳ ಸಸ್ತನಿಗಳು. ಇದರ ೧೦ ಪ್ರಜಾತಿಗಳು ಅಸ್ತಿತ್ವದಲ್ಲಿವೆ. ಅಸ್ತಿತ್ವದಲ್ಲಿರುವ ಪ್ರಜಾತಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಒಂದೇ ಒಂದು ಪ್ರಜಾತಿ ಮಧ್ಯ ಹಾಗೂ ಪಶ್ಚಿಮ ಆಫ಼್ರಿಕಾದ ಮಳೆಕಾಡುಗಳಲ್ಲಿ ಕಂಡುಬರುತ್ತದೆ. ಇವು ಒಂಟಿಜೀವಿಗಳು ಅಥವಾ ಜೋಡಿಯಾಗಿ ಜೀವಿಸುತ್ತವೆ, ಮತ್ತು ಬಹುತೇಕವಾಗಿ ಕೇವಲ ಸಸ್ಯವಸ್ತುವನ್ನು ತಿನ್ನುತ್ತವೆ. ಬರ್ಕಗಳು ವಿಶ್ವದಲ್ಲಿನ ಅತ್ಯಂತ ಚಿಕ್ಕ ಗೊರಸುಳ್ಳ ಸಸ್ತನಿಗಳಾಗಿವೆ. ಏಷ್ಯಾದ ಪ್ರಜಾತಿಗಳು ೦.೭ ಹಾಗೂ ೮ ಕೆ.ಜಿ. ನಡುವೆ ತೂಕ ಹೊಂದಿದ್ದರೆ, ಆಫ಼್ರಿಕಾದ ಬರ್ಕವು ಗಣನೀಯವಾಗಿ ದೊಡ್ಡದಾಗಿದೆ (೭-೧೬ ಕೆ.ಜಿ.).

許可
cc-by-sa-3.0
版權
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
原始內容
參訪來源
合作夥伴網站
wikipedia emerging languages