ಗಸಗಸೆಪ್ರಾಚೀನ ಕಾಲದಿಂದಲೂ ಬೆಳೆಸಲ್ಪಡುತ್ತಿರುವ ಒಂದು ಸಸ್ಯ. ಕಳೆಯ ಪಟ್ಟದಿಂದ ಬೆಳೆಯ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಬಹಳ ಹಿಂದಿನ ಕಾಲದಿಂದ ಮೆಡಿಟರೇನಿಯನ್ ಪ್ರದೇಶಗಳು, ಮಧ್ಯ ಪ್ರಾಚ್ಯ, ಭಾರತ, ರಷ್ಯಾ ದೇಶಗಳಲ್ಲಿ ಇದರ ವ್ಯವಸಾಯ ಇದೆ.
ಪಶ್ಚಿಮ ಯುರೋಪ್ ದೇಶಗಳಲ್ಲಿ ಇದನ್ನು ಗಸಗಸೆ ಬೀಜಗಳಿಗಾಗಿಯೂ ಪೂರ್ವದೇಶಗಳಲ್ಲಿ ಅದರಲ್ಲೂ ಭಾರತ, ಇರಾನ್, ಟರ್ಕಿಗಳಲ್ಲಿ ಆಫೀಮಿಗಾಗಿಯೂ ಹೆಚ್ಚಾಗಿ ಬೆಳೆಸಲಾಗುತ್ತಿದೆ. ಭಾರತದಲ್ಲಿ ಇದನ್ನು ಬೀಜ ಮತ್ತು ಅಫೀಮಿಗಾಗಿ ಸುಮಾರು 16ನೆಯ ಶತಮಾನ ದಿಂದ ಬೆಳೆಸುತ್ತಿದ್ದಾರೆ. ಅಫೀಮಿನ ಬೇಸಾಯ, ಮಾರಾಟ, ಬಳಕೆಗಳ ಬಗ್ಗೆ ಕಟ್ಟುನಿಟ್ಟಾದ ನಿಬಂಧನೆಗಳಿವೆ. ಸರ್ಕಾರದ ಅನುಮತಿ ಇಲ್ಲದೆ ಗಸಗಸೆ ಗಿಡವನ್ನು ಬೆಳೆಸಲಾಗದು. ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಬಿಹಾರಗಳಲ್ಲಿ ಹೆಚ್ಚಾಗಿಯೂ ಕಾಶ್ಮೀರದಲ್ಲಿ ಅಲ್ಪಸ್ವಲ್ಪವಾಗಿಯೂ ಇದನ್ನು ಬೆಳೆಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಇದರ ವ್ಯವಸಾಯವನ್ನು ನಿಷೇಧಿಸಲಾಗಿದೆ. ಗಸಗಸೆ ಗಿಡದ ಬೇಸಾಯ, ಇದರಿಂದ ಅಫೀಮನ್ನು ತೆಗೆಯುವ ವಿಧಾನ ಮತ್ತು ಅಫೀಮಿನ ಬಳಕೆಗಳನ್ನು ಕುರಿತ ವಿವರಗಳಿಗೆ ಅಫೀಮು.
ಪಾಪವೆರೆಸಿಯೆ ( Papaveraceae)ಕುಟುಂಬಕ್ಕೆ ಸೇರಿರುವ ಈ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಪಾಪವೆರ್ ರೊಯೆಸ್( Papaver rhoeas)ಎಂದಾಗಿದೆ.ಪರ್ಯಾಯ ನಾಮ ಅಫೀಮುಗಿಡ. ಪಪೇವರ್ ಸಾಮ್ನಿಫೆರಂ ವೈಜ್ಞಾನಿಕ ನಾಮ. ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರು ಓಪಿಯಂ ಪಾಪಿ ಅಥವಾ ವೈಟ್ ಪಾಪಿ ಹಿಂದಿಯಲ್ಲಿ 'ಕಸ್‌ಕಸ್',ತೆಲುಗಿನಲ್ಲಿ 'ಗಸಗಸಾಲು'ಎಂದು ಹೆಸರು.
ಬೀಜಗಳಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಬೀಜಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ಶೇ.4.3-ಶೇ.5.2 ತೇವಾಂಶ, ಶೇ.22.3- ಶೇ.24.4 ಪ್ರೋಟೀನು, ಶೇ.1.03- ಶೇ.1.45 ಸುಣ್ಣ, ಶೇ.0.79-ಶೇ.0.89 ರಂಜಕ, ಶೇ.8.5-ಶೇ.11.1 ಕಬ್ಬಿಣ ಮತ್ತು ಥಯಾಮಿನ್, ರೈಬೊಫ್ಲೇವಿನ್, ನಿಕೊಟಿನಿಕ್ ಆಮ್ಲ ಮುಂತಾದ ವಿಟಮಿನ್ನುಗಳೂ ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸತು ಮುಂತಾದ ಖನಿಜಾಂಶಗಳೂ ಲಘು ಪರಿಮಾಣಗಳಲ್ಲಿರುತ್ತವೆ. ಅಲ್ಲದೆ ಲೆಸಿತಿನ್, ಆಕ್ಸ್ಯಾಲಿಕ್ ಆಮ್ಲ, ಪೆಂಟಾಸಾನ್ಸ್ ಎಂಬ ವಸ್ತುಗಳೂ ಡಯಾಸ್ಟೇಸ್, ಎಮಲ್ಸಿನ್, ಲೈಪೇಸ್, ನ್ಯೂಕ್ಲಿಯೇಸ್ ಮುಂತಾದ ಕಿಣ್ವಗಳೂ ಇವೆ. ಮತ್ತುಬರಿಸುವ ಅಂಶವಾದ ನಾರ್ಕೊಟಿನ್ ಅತ್ಯಲ್ಪ ಪರಿಮಾಣದಲ್ಲಿದೆ.
೧.http://sliceoftheday.wordpress.com/2008/06/17/common-poppy-papaver-rhoeas/ ೨. Malta Wild Plants - Papaver rhoeas
ಗಸಗಸೆಪ್ರಾಚೀನ ಕಾಲದಿಂದಲೂ ಬೆಳೆಸಲ್ಪಡುತ್ತಿರುವ ಒಂದು ಸಸ್ಯ. ಕಳೆಯ ಪಟ್ಟದಿಂದ ಬೆಳೆಯ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಬಹಳ ಹಿಂದಿನ ಕಾಲದಿಂದ ಮೆಡಿಟರೇನಿಯನ್ ಪ್ರದೇಶಗಳು, ಮಧ್ಯ ಪ್ರಾಚ್ಯ, ಭಾರತ, ರಷ್ಯಾ ದೇಶಗಳಲ್ಲಿ ಇದರ ವ್ಯವಸಾಯ ಇದೆ.