dcsimg

ಡಯಾಟಮ್ ( Kannada )

tarjonnut wikipedia emerging languages

ಡಯಾಟಮ್ ಒಂದು ಪ್ರಮುಖ ಯುಕಾರ್ಯೊಟ (ಕೋಶಬೀಜ ಇರುವ ಜೀವ) ಶೈವಲ ಹಾಗೂ ಸಾಮಾನ್ಯ ಸಸ್ಯ ಪ್ಲವಕ ದಲ್ಲಿ ಒಂದು ವಿಧ. ಪ್ರಮುಖವಾಗಿ ಎಲ್ಲಾ ಡಯಾಟಮ್‍ಗಳು ಏಕಕೋಶ ಜೀವಿಗಳಾಗಿದ್ದರೂ, ತಾಮ್ಡೆಯಲಲ್ಲಿ ಕಂಡುಬರುತ್ತವೆ. ತಾಮ್ಡಯ ಆಕಾರವು ಎಳೆ ಅಥವಾ ಪಟ್ಟಿ (ಉ.ಹ. Fragillaria), ಬೀಸಣಿಗೆ (Meridion), ವಕ್ರವಾದ (Tabellaria), ಅಥವಾ ನಕ್ಷತ್ರಾಕಾರದಲ್ಲಿ (Asterionella) ಕಂಡುಬರುತ್ತದೆ. ಈ ಸಸ್ಯಗಳು ದ್ಯುತಿ ಸಂಶ್ಲೇಷಣೆಯಿಂದ ಆಹಾರವನ್ನು ತಯಾರಿಸುತ್ತವೆ. ಡಯಾಟಮ್ ಕೋಶಬಿತ್ತಿಯು ಎರಡು ಕವಾಟಗಳಿಂದ ಮಾಡಲ್ಪಟ್ಟಿದೆ. ಕವಾಟಗಳು ಸಿಲಿಕಾದಿಂದ ಕೂಡಿದ್ದು, ಒಂದು ಇನ್ನೊಂದನ್ನು ಮುಚ್ಚಿರುತ್ತದೆ. ಇವು ಡಬ್ಬಿಯಂತೆ ಕಾಣುತ್ತವೆ.ಈ ಕವಾಟಗಳಿಗೆ ಪ್ರೊಸ್ಥುಲ್ ಗಳೆಂದು ಕರೆಯುತ್ತಾರೆ. ಡಯಾಟಮ್ ಗಳು ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಕಂಡುಬರುತ್ತವೆ. ಸಿಹಿನೀರು ಮತ್ತು ಸಾಗರ ವ್ಯೆವಸ್ಥೆಗಳೆರಡರಲ್ಲೂ ಜೀವಿಸುತ್ತವೆ. ಡಯಾಟಮ್ ಗಳು ಜಲ ಆಹಾರ ಸರಪಣಿಯ ಅತಿ ಮುಖ್ಯ ಕೊಂಡಿಗಳು.

 src=
Several species of fresh-water diatoms.

ನೋಡಿ


lisenssi
cc-by-sa-3.0
tekijänoikeus
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
alkuperäinen
käy lähteessä
kumppanisivusto
wikipedia emerging languages