dcsimg
Unresolved name

Bacteria

ಬ್ಯಾಕ್ಟೀರಿಯ ( Kannada )

provided by wikipedia emerging languages
 src=
ಎಸ್ಚೆರೀಶಿಯ ಕೋಲಿ ಬ್ಯಾಕ್ಟೀರಿಯ

ಬ್ಯಾಕ್ಟೀರಿಯ ಕೇಂದ್ರಿಕೆ ಯಿಲ್ಲದ ಒಂದೇ ಜೀವಕೋಶವುಳ್ಳ, ಸೂಕ್ಷ್ಮ ಜೀವಿಗಳ ಒಂದು ವರ್ಗ. ಬ್ಯಾಕ್ಟೀರಿಯಗಳು ವರ್ತುಲಾಕಾರ ಅಥವಾ ದಂಡಾಕಾರದಲ್ಲಿದ್ದು ಸುಮಾರು ೦.೫ - ೫ ಮೈಕ್ರಾನ್ಗಳಷ್ಟು ಉದ್ದವಿರುತ್ತವೆ. ಬ್ಯಾಕ್ಟೀರಿಯಗಳ ಅಧ್ಯಯನಕ್ಕೆ "ಬ್ಯಾಕ್ಟೀರಿಯೋಲಜಿ" ಎನ್ನುತ್ತಾರೆ.

ಪರಿಸರದ ಎಲ್ಲ ವಾತಾವರಣಗಳಲ್ಲಿಯೂ ವಿವಿಧ ರೀತಿಯ ಬ್ಯಾಕ್ಟೀರಿಯಗಳು ಇರುತ್ತವೆ. ನೀರಿನಲ್ಲಿ, ಮಣ್ಣಿನಲ್ಲಿ, ಗಾಳಿಯಲ್ಲಿ - ಅಷ್ಟಲ್ಲದೆ ಸಲ್ಫ್ಯೂರಿಕ್ ಆಮ್ಲ ಮತ್ತು ವಿಕಿರಣಶೀಲ ವಸ್ತುಗಳ ಒಳಗೆಯೂ ಬ್ಯಾಕ್ಟೀರಿಯಗಳು ಕಂಡು ಬರುತ್ತವೆ. ಸಾಧಾರಣವಾಗಿ, ಒಂದು ಗ್ರಾಂ ಮಣ್ಣಿನಲ್ಲಿ ಸುಮಾರು ೧೦೦೦ ಕೋಟಿ, ಹಾಗೂ ಮಿಲೀ ಸಮುದ್ರ ನೀರಿನಲ್ಲಿ ಒಂದು ಲಕ್ಷ ಬ್ಯಾಕ್ಟೀರಿಯಗಳು ಇರುತ್ತವೆ.

ಮಾನವರ ದೇಹದ ಎಲ್ಲ ಭಾಗಗಳಲ್ಲಿಯೂ - ಮುಖ್ಯವಾಗಿ ಬಾಯಿ, ಚರ್ಮ, ಹಾಗೂ ಜೀರ್ಣಾಂಗಗಳಲ್ಲಿ - ಬ್ಯಾಕ್ಟೀರಿಯಗಳು ಕಂಡುಬರುತ್ತವೆ. ಮಾನವರ ಆರೋಗ್ಯದ ದ್ರಷ್ಟಿಯಿಂದ ಬ್ಯಾಕ್ಟೀರಿಯಗಳ ಪಾತ್ರ ಗಮನಾರ್ಹವಾದದ್ದು - ಕೆಲವು ರೀತಿಯ ಬ್ಯಾಕ್ಟೀರಿಯಗಳು ನಮ್ಮ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ, ಇನ್ನು ಕೆಲವು ಮಾನವರಲ್ಲಿ ಅನೇಕ ರೀತಿಯ ರೋಗಗಳಿಗೆ ಕಾರಣವಾಗಿವೆ. ಚಾರಿತ್ರಿಕವಾಗಿ, ಕುಷ್ಠ, ಪ್ಲೇಗ್ ಮೊದಲಾದ ರೋಗಗಳಿಗೆ ಕಾರಣವಾಗುವ ಮೂಲಕ ಬ್ಯಾಕ್ಟೀರಿಯಗಳು ಅಪಾರ ಹಾನಿಯನ್ನೂ ತಂದೊಡ್ಡಿವೆ. ಆಂಟಿಬಯಾಟಿಕ್ಗಳ ಆವಿಷ್ಕಾರದ ನಂತ ಬ್ಯಾಕ್ಟೀರಿಯಗಳ ರೋಗಕಾರಕ ಗುಣಗಳನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯುವಲ್ಲಿ ಸಫಲತೆ ದೊರಕಿದೆ.

ಚರಿತ್ರೆ

ಬ್ಯಾಕ್ಟೀರಿಯಗಳ ಶಾಸ್ತ್ರೀಯ ಅಧ್ಯಯನವನ್ನು ಮೊದಲ ಬಾರಿಗೆ ನಡೆಸಿದ ವಿಜ್ಞಾನಿ ಆಂಟನ್ ವಾನ್ ಲೀವನ್‍ಹಾಕ್. ೧೬೭೪ರಲ್ಲಿ ತಮ್ಮದೇ ರಚನೆಯ ಸೂಕ್ಷ್ಮದರ್ಶಕದ ಮೂಲಕ ಬ್ಯಾಕ್ಟೀರಿಯಗಳನ್ನು ಇವರು ಗಮನಿಸಿದರು. "ಬ್ಯಾಕ್ಟೀರಿಯ" ಪದವನ್ನು ಬಳಕೆಗೆ ತಂದವರು ಎರೆನ್‍ಬರ್ಗ್ ಎಂಬ ವಿಜ್ಞಾನಿ (೧೮೨೮ ರಲ್ಲಿ).

ಜೈವಿಕ ರಚನೆ

 src=
ವಿವಿಧ ಬ್ಯಾಕ್ಟೀರಿಯಗಳ ಜೈವಿಕ ರಚನೆ

ವಿವಿಧ ಬ್ಯಾಕ್ಟೀರಿಯಗಳು ಅನೇಕ ಆಕಾರ-ಗಾತ್ರಗಳಲ್ಲಿ ಕಂಡು ಬಂದರೂ, ಬಹುಪಾಲು ಬ್ಯಾಕ್ಟೀರಿಯಗಳು ವರ್ತುಲ/ದಂಡಾಕಾರದಲ್ಲಿ ಇದ್ದು ೦.೫-೫ ಮೈಕ್ರಾನ್ ಉದ್ದ ಇರುತ್ತವೆ. ಕೆಲ ಬ್ಯಾಕ್ಟೀರಿಯಗಳು ೦.೫ ಮಿ.ಮೀ. ಉದ್ದವಿದ್ದು ಬರಿಗಣ್ಣಿಗೆ ಕಂಡರೆ, ಇನ್ನು ಕೆಲವು ೦.೨ ಮೈಕ್ರಾನ್ ಅಷ್ಟೇ ಇರುವದೂ ಉಂಟು. ಗಾತ್ರದಲ್ಲಿ ಇಷ್ಟು ವೈವಿಧ್ಯತೆಯಿದ್ದರೂ, ಆಕಾರದಲ್ಲಿ ಪ್ರಮುಖವಾಗಿ ದುಂಡು (ಕಾಕಸ್) ಅಥವ ಕೋಲಿನಾಕಾರ (ಬ್ಯಾಸಿಲಸ್) ಹೊಂದಿರುತ್ತವೆ.

ಸರಳ ಜೀವರಚನೆಯಿದ್ದರೂ, ಕೆಲವೊಮ್ಮೆ ಅನೇಕ ಬ್ಯಾಕ್ಟೀರಿಯಾಗಳು ಸಂಯೋಗದಲ್ಲಿ ಕ್ಲಿಷ್ಟ ವಿನ್ಯಾಸಗಳಲ್ಲೂ ಕಂಡುಬರುತ್ತವೆ. ಉದಾಹರಣೆಗೆ, ಮಿಕ್ಸೋಬ್ಯಾಕ್ಟೀರಿಯ ತಳಿಯು ಅಹಾರ ಅಲಭ್ಯ ಸಮಯಗಳಲ್ಲಿ ಸುಮಾರು ೧೦೦,೦೦೦ ಜೀವಿಗಳ ೦.೫ ಸೆಂಟಿಮೀಟರ್ಗಳಷ್ಟು ಗಾತ್ರದ ಸಂಯೋಗಗಳನ್ನು ಹೊಂದುತ್ತವೆ. ಇನ್ನು ಕೆಲವು ತಳಿಗಳು (ಉದಾ. ಕ್ಲ್ಯಾಮೀಡಿಯ) ಕೇಂದ್ರಿಕೆಯುಳ್ಳ ಇತರ ಜೀವಿಗಳ ಜೀವಕೋಶದ ಒಳಗೆ ಮಾತ್ರ ಜೀವಿಸಬಲ್ಲವು.

ನೋಡಿ

ಹೆಚ್ಚಿನ ಓದಿಗೆ

ಉಲ್ಲೇಖ

??

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಬ್ಯಾಕ್ಟೀರಿಯ: Brief Summary ( Kannada )

provided by wikipedia emerging languages
 src= ಎಸ್ಚೆರೀಶಿಯ ಕೋಲಿ ಬ್ಯಾಕ್ಟೀರಿಯ