dcsimg

ಕಾಸರಕ ( Kannada )

tarjonnut wikipedia emerging languages

ಕಾಸರಕ ದಕ್ಷಿಣ ಎಷಿಯಾದ ಕಾಡುಗಳಲ್ಲಿ ಕಂಡು ಬರುವ ಪರ್ಣಪಾತಿಮರ.ಇದರ ಬೀಜ ವಾಣಿಜ್ಯಿಕವಾಗಿ ಬೆಲೆಬಾಳುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಲೊಗನಿಯಸಿಯೆಕುಟುಂಬಕ್ಕೆ ಸೇರಿದ್ದು,ಸ್ಟ್ರಿಕ್ನೋಸ್ಸಸ್ಯಕುಲದಲ್ಲಿ ಸ್ಟ್ರಿಕ್ನೋಸ್ ನಕ್ಸ್-ವೊಮಿಕ ಎಂದು ಕರೆಯಲ್ಪಡುತ್ತದೆ.ಕನ್ನಡದಲ್ಲಿ ನಂಜಿನಕೊರಡು,ಕಾತರಿಕೆ,ವಿಷಮುಷ್ಠಿ ಎಂದೂ,ತುಳುವಿನಲ್ಲಿ 'ಕಾಯೆರ್ 'ಎಂದೂ ಕರೆಯುತ್ತಾರೆ.

ಸಸ್ಯದ ಗುಣಲಕ್ಷಣಗಳು

ಮಧ್ಯಮ ಪ್ರಮಾಣದ ಮರ.ನುಣುಪಾದ ಎಲೆಗಳಿಂದ ಕೂಡಿದ್ದು ನೋಡಲು ಸುಂದರವಾಗಿದೆ.ಕೇಸರಿ ಬಣ್ಣದ ಹಣ್ಣು ಇದ್ದು ಒಳಗೆ ಗುಂಡಿಗಳಂತಿರುವ ಬೀಜವಿರುತ್ತದೆ.ಬೀಜಗಳು ವಿಷಕಾರಿ.ಹಣ್ಣಿನಲ್ಲಿಯೂ ಸ್ವಲ್ಪ ಪ್ರಮಾಣದ ವಿಷವಸ್ತು ಇದೆ.ದಾರುವು ಗಡುಸಾಗಿದ್ದು ಕಳಪೆ ಗುಣಮಟ್ಟದ್ದಾಗಿದೆ.

ಉಪಯೋಗಗಳು

ಇದರ ಬೀಜದಿಂದ 'ಸ್ಟ್ರಿಕ್ನಿನ್'(Strychnine)ಮತ್ತು 'ಬ್ರೂಸಿನ್'(Brucine)ಎಂಬ ಸಸ್ಯಕ್ಷಾರ(alkaloids)ನ್ನು ಬೇರ್ಪಡಿಸುತ್ತಾರೆ.ಇದರ ಕೊರಡನ್ನು ಹಳ್ಳಿಮದ್ದಿನಲ್ಲಿ ನಂಜುನಿವಾರಕವಾಗಿ ಬಳಸುತ್ತಾರೆ.[೧]

ಆಧಾರ ಗ್ರಂಥಗಳು

  1. ವನಸಿರಿ (ಪುಸ್ತಕ): ಅಜ್ಜಂಪುರ ಕೃಷ್ಣಸ್ವಾಮಿ
lisenssi
cc-by-sa-3.0
tekijänoikeus
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
alkuperäinen
käy lähteessä
kumppanisivusto
wikipedia emerging languages

ಕಾಸರಕ: Brief Summary ( Kannada )

tarjonnut wikipedia emerging languages

ಕಾಸರಕ ದಕ್ಷಿಣ ಎಷಿಯಾದ ಕಾಡುಗಳಲ್ಲಿ ಕಂಡು ಬರುವ ಪರ್ಣಪಾತಿಮರ.ಇದರ ಬೀಜ ವಾಣಿಜ್ಯಿಕವಾಗಿ ಬೆಲೆಬಾಳುತ್ತದೆ.

lisenssi
cc-by-sa-3.0
tekijänoikeus
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
alkuperäinen
käy lähteessä
kumppanisivusto
wikipedia emerging languages