ಶಿವನೆ(ಗಮಾರಿ)ಮದ್ಯಮ ಪ್ರಮಾಣದ ಮರ.ಇದು ಭಾರತದಾದ್ಯಂತ ಬೆಳೆಯುತ್ತದೆ.ದಕ್ಷಿಣ ಎಷಿಯಾದ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕಂಡುಬರುತ್ತದೆ.ಇದು ಒಂದು ಔಷಧೀಯ ಮರ. ಈ ಮರವು ಅತೀ ವೇಗವಾಗಿ ಬೆಳೆಯುವ ಮರವಾಗಿದ್ದು ಹೆಚ್ಚು ಮಳೆ ಬೀಳುವ ಕಣಿವೆಗಳಲ್ಲಿ ಸುಮಾರು 30 ಮೀ ಎತ್ತರ ಬೆಳೆಯುತ್ತದೆ. ಕಾಂಡದ ಸುತ್ತಳತೆ 1-5 ಮೀಟರ್ ದಪ್ಪ ಇರುತ್ತದೆ. ಇದರ ದಪ್ಪಗಿನ ಕಂದು ಬಣ್ಣದ ತೊಗಟೆಯ ಮೇಲೆ ಬಿಳಿಯ ಬಣ್ಣದ ಮಚ್ಚೆಗಳು ಕಾಣುತ್ತದೆ. ಬೇಸಿಗೆ ಕಾಲದಲ್ಲಿ ಎಲೆಗಳು ಉದುರಿದಾಗ ರೆಂಬೆಗಳ ಕೊನೆಯಲ್ಲಿ ಕಿರಿದಾದ ಕೊಂಬೆಗಳಲ್ಲಿ ಎರಡು ದಳಗಳಿರುವ ಕಂದು ಬಣ್ಣ ಲೇಪಿತ ಹಳದಿ ಬಣ್ಣದ ಹೂವುಗಳ ಗೊಂಚಲು ಕಾಣಸಿಗುತ್ತದೆ.[೧]
ಇದು ವರ್ಬೆನಾಸಿ ಕುಟುಂಬಕ್ಕೆ ಸೇರಿದ್ದು Gmelina arborea ಗ್ಮೆಲಿನ ಅರ್ಬೊರಿಯ ಎಂದು ಸಸ್ಯಶಾಸ್ತ್ರೀಯ ಹೆಸರು.
ಇದು ಬಹಳ ವೇಗವಾಗಿ ಬೆಳೆಯುವ ಮರ.ಹೃದಯಾಕಾರದ ಎಲೆಗಳು (ಚಿತ್ರ ನೋಡಿ)ತೊಗಟೆ ಎಳೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.ಹೊಪ್ಪಳಿಕೆ ಕಳಚುತ್ತದೆ.ದಾರುವು ಹಳದಿ ಛಾಯೆ ಹೊಂದಿದ್ದು,ಮೃದುವಾಗಿರುತ್ತದೆ.ಹಗುರವಾದರೂ ಸಮಾನ ಕಣ ರಚನೆ ಹೊಂದಿರುತ್ತದೆ.ಬಲಯುತವಾಗಿದ್ದು ಸೀಳಿಕೆ,ಸುರುಟುವಿಕೆ ಇರುವುದಿಲ್ಲ. ಈ ಮರ ಬೆಸಿಗೆಯಲ್ಲಿ ಎಲೆಯುದುರುವ ಮಲೆನಾಡಿನ ಮತ್ತು ಮೈದಾನ ಸೀಮೆಯ ಒಣ ಸಸ್ಯಾವರಣ ಹಾಗೂ ಕಳ್ಳಿ ಕುರುಚಲು ಗಿಡಗಳನ್ನು ಒಳಗೊಂಡ ಸಸ್ಯ.ಉದ್ದತೊಟ್ಟಿನ ಎಲೆ ಆಗಿರುತ್ತದೆ.ಬಲಿತ ಮೇಲೆ ಅವುಗಳ ಮೇಲಿನ ತುಪ್ಪಳ ಉದುರಿಹೋಗಿ ಹೊಳಪಾಗುತ್ತದೆ ಎಲೆಯ ಉದ್ದ ೧೮-೨೫ ಸೆ.ಮೀ. ಇರುತ್ತದೆ. ಜೂನ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಈ ಮರ ಹೂ ಬಿಡುತ್ತದೆ. ಹೂಗಳ ಹೊರಭಾಗ ಕಂದು ಮಿಶ್ರಿತ ಹಳದಿ. ಒಳಭಾಗವು ಹಳದಿಯಾಗಿರುತ್ತದೆ. ಹಣ್ಣುಗಳು ಗೋಳಾಕಾರ. ಬಲಿತಾದ ಹಳದಿ ಬಣ್ಣ. ಪ್ರತಿ ಹಣ್ಣಿನಲ್ಲಿ ೧-೨ ಬೀಜಗಳಿರುತ್ತದೆ.
ಇದು ಉತ್ತಮ ಜಾತಿಯ ಮರವಾಗಿದ್ದು ಹಲವಾರು ಉಪಯೋಗಗಳನ್ನು ಹೊಂದಿದೆ.ಹಲಗೆ,ಪಿಠೋಪಕರಣ,ಪೆಟ್ಟಿಗೆ,ಬಾಚಣಿಗೆ ಮುಂತಾದ ಮರ ಕೆಲಸಗಳಿಗೆ ಯೋಗ್ಯ ಮರವಾಗಿದೆ.ಕೃತಕ ಅವಯವಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.ಪದರಹಲಗೆಗಳ ತಯಾರಿಕೆಯಲ್ಲಿ ಉಪಯುಕ್ತ.
ಶಿವನೆ(ಗಮಾರಿ)ಮದ್ಯಮ ಪ್ರಮಾಣದ ಮರ.ಇದು ಭಾರತದಾದ್ಯಂತ ಬೆಳೆಯುತ್ತದೆ.ದಕ್ಷಿಣ ಎಷಿಯಾದ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕಂಡುಬರುತ್ತದೆ.ಇದು ಒಂದು ಔಷಧೀಯ ಮರ. ಈ ಮರವು ಅತೀ ವೇಗವಾಗಿ ಬೆಳೆಯುವ ಮರವಾಗಿದ್ದು ಹೆಚ್ಚು ಮಳೆ ಬೀಳುವ ಕಣಿವೆಗಳಲ್ಲಿ ಸುಮಾರು 30 ಮೀ ಎತ್ತರ ಬೆಳೆಯುತ್ತದೆ. ಕಾಂಡದ ಸುತ್ತಳತೆ 1-5 ಮೀಟರ್ ದಪ್ಪ ಇರುತ್ತದೆ. ಇದರ ದಪ್ಪಗಿನ ಕಂದು ಬಣ್ಣದ ತೊಗಟೆಯ ಮೇಲೆ ಬಿಳಿಯ ಬಣ್ಣದ ಮಚ್ಚೆಗಳು ಕಾಣುತ್ತದೆ. ಬೇಸಿಗೆ ಕಾಲದಲ್ಲಿ ಎಲೆಗಳು ಉದುರಿದಾಗ ರೆಂಬೆಗಳ ಕೊನೆಯಲ್ಲಿ ಕಿರಿದಾದ ಕೊಂಬೆಗಳಲ್ಲಿ ಎರಡು ದಳಗಳಿರುವ ಕಂದು ಬಣ್ಣ ಲೇಪಿತ ಹಳದಿ ಬಣ್ಣದ ಹೂವುಗಳ ಗೊಂಚಲು ಕಾಣಸಿಗುತ್ತದೆ.
ಎಲೆಗಳು (ಕಲ್ಕತ್ತಾ). ಹೂವು (ಕಲ್ಕತ್ತಾ).