dcsimg
Image de Madhuca longifolia var. latifolia (Roxb.) A. Chev.
Life » » Archaeplastida » » Angiosperms » » Sapotaceae »

Madhuca longifolia (J. Koenig ex L.) J. F. Macbr.

ಕಾಡು ಇಪ್ಪೆ ( kannara )

fourni par wikipedia emerging languages
Mahuwa trees in Chhattisgarh.jpg

ಕಾಡು ಇಪ್ಪೆಯು ಗಿಡ್ಡ ಕಾಂಡದ, ಹರಡಿದ ರೆಂಬೆಗಳ, ದೊಡ್ಡ ದುಂಡನೆಯ ಹಂದರದ, ಅಸ್ಥಿರ ಪರ್ಣವೃಕ್ಷ (ಬಾಸ್ಸಿಯ ಲ್ಯಾಟಿಫೊಲಿಯ). ತೊಗಟೆ ಬಣ್ಣ ಬೂದು. ಇದು ಉದ್ದುದ್ದನೆಯ ಸೀಳುಗಳಿಂದ ಕೂಡಿದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರದ ಕೆಲವು ಭಾಗಗಳಲ್ಲೂ ಒರಿಸ್ಸ, ಉತ್ತರ ಪ್ರದೇಶ, ಹಿಮಾಲಯ ತಪ್ಪಲಿನ ಕೆಲವು ಭಾಗಗಳಲ್ಲೂ ಇದರ ವ್ಯಾಪ್ತಿ ಇದೆ, ಮೈಸೂರು ದೇಶದಲ್ಲಿ ಬಲು ವಿರಳ.

ಇದರ ಹೂಗಳು ಮಾರ್ಚ-ಏಪ್ರಿಲ್‍ನಲ್ಲಿ ಅರಳುತ್ತವೆ. ಹೂಗಳ ತಿರುಳು ಮೆತು, ರುಚಿ ಸಿಹಿ. ಇವು ಅರಳುತ್ತಿದ್ದಂತೆಯೇ ಉದುರುವುವು. ಇವನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಮಾಡಿ ಹಿಟ್ಟಿನೊಂದಿಗೆ ರೊಟ್ಟಿಗೆ ಉಪಯೋಗಿಸುತ್ತಾರೆ. ಕ್ಷಾಮ ಕಾಲದಲ್ಲಿ ಜನರಿಗೆ ಇದರ ನೆರವು ಹೆಚ್ಚಿನದು. ಹೂಗಳಿಂದ ಮಧ್ಯಸಾರವನ್ನು ತಯಾರು ಮಾಡಬಹುದು. ಆಗಸ್ಟ್‍ನಲ್ಲಿ ಕಾಯಿ ಮಾಗುವುದು. ಬೀಜದಿಂದ ದೊರೆಯುವ ಮಂದವಾದ ಎಣ್ಣೆ ಕೃತಕ ಬೆಣ್ಣೆ (ಮಾರ್ಗರೈನ್), ಗ್ಲಿಸರಿನ್, ಸೋಪುಗಳ ತಯಾರಿಕೆಗಳಿಗೆ ಉಪಯುಕ್ತ. ಚೌಬೀನೆ ಉಪಯುಕ್ತವಾದರೂ ಹೂ, ಬೀಜಗಳ ಉಪಯುಕ್ತತೆ ಹೆಚ್ಚಿನದಾಗಿರುವುದರಿಂದ ಅದಕ್ಕಾಗಿ ಮರವನ್ನು ಉರುಳಿಸುವುದಿಲ್ಲ.

ಬಾಹ್ಯ ಸಂಪರ್ಕಗಳು

licence
cc-by-sa-3.0
droit d’auteur
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಕಾಡು ಇಪ್ಪೆ: Brief Summary ( kannara )