dcsimg
Strobilanthes kunthianus (Wall. ex Nees) T. Anders. ex Benth. resmi
Life » » Archaeplastida » » Angiosperms » » Ayıpençesigiller »

Strobilanthes kunthianus (Wall. ex Nees) T. Anders. ex Benth.

ನೀಲಕುರಂಜಿ ( Kannada dili )

wikipedia emerging languages tarafından sağlandı
Neelakurinji (Strobilanthes Kunthiana).jpg

ನೀಲಕುಂಜಿ ಒಂದು ಜಾತಿಯ ಹೂ. ಇದು ದಕ್ಶಿಣ ಭಾರತದಲ್ಲಿರುವ ನೀಲಗಿರಿ ಬೆಟ್ಟದಲ್ಲಿರುವ ಸೋಲಾ ಕಾಡಿನಲ್ಲಿ ಕಂಡು ಬರುತ್ತದೆ. ಇದರ ವೈಙನಿಕ ಹೆಸರು ಸ್ಟ್ರೊಬಿಯಾಂತಸ್ ಕುಂತಿಯಾನ. ನೀಲಗಿರಿ ಬೆಟ್ಟವನ್ನು ಈ ಹೆಸರಿನಲ್ಲಿ ಗುರುತಿಸಲ್ಪಡಲು ಈ ಹೂವೇಕಾರಣ ಏಕೆಂದರೆ ಈ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಈ ಹೂವು ಹನ್ನೆರಡು ವರ್ಷಗಾಲಿಗೊಮ್ಮೆ ಅರಳುತ್ತದೆ. ಅಲ್ಲಿ ವಾಸಿಸುತ್ತಿರುವ ಪಾಳ್ಯನ ಕಾಡು ಮನುಷ್ಯರು ಆವೊಂದು ಹೂವಿನ ಸಹಾಯದಿಂದ ಅವರ ವಯಸನ್ನು ಲೆಕ್ಕ ಹಾಕುತ್ತಿದ್ದರು. ಈ ವೊಂದು ಗಿಡ ಸ್ಟ್ರೊಬಿಯಾಂತಸ್ ಜಾತಿಗೆ ಸೇರಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಕ್ರಿಶ್ಚಿಯನ್ ಗಾಟ್ಫ್ರೈಡ್ ಡೇನಿಯಲ್ ನೀಸ್ ವಾನ್ ಎಸೆನ್ಬೆಕ್ ಎಂಬ ವ್ಯಕ್ತಿ ಈ ಹೂವನ್ನು ಮೊದಲು ಗುರುತಿಸಿದ್ದರು. ಈ ಕುರುಂಜಿ ಹೂವು ೨೫೦ ಜಾತಿಗಳಲ್ಲಿ ಕಂಡುಬರುತ್ತದೆ. ಅದರಲ್ಲಿ ೪೬ ಜಾತಿಯ ಹೂವುಗಳು ನಮ್ಮ ಭಾರತ ದೇಶದಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಈ ಹೂವಿನ ಜಾತಿಯಲ್ಲಿ ಕೆಲವು ವಿಚಿತ್ರ ಜಾತಿಯ ಹೂವುಗಳಿವೆ, ಅವು ಹನ್ನೆರಡು ವರ್ಷಗಳ ಬದಲಿಗೆ ಹದಿನಾರು ವರ್ಷಗಳಿಗೊಮ್ಮೆ ಅರಳುತ್ತದೆ. ದೀರ್ಘ ಕಾಲಗಳಿಗೊಮ್ಮೆ ಅರಳುವ ಈ ರೀತಿಯ ಹೂಗಳನ್ನು ಪಿಲಿಟೆಸಿಯಲ್ಸ್ ಅಂದು ಕರೆಯುತ್ತಾರೆ. ಈ ಹೂವು ೧೩೦೦ರ ರಿಂದ ೨೪೦೦ ಪರ್ವತಗಳಲ್ಲಿ ಕಂಡು ಬರುತ್ತದೆ. ಈ ಗಿಡ ಮೂವತ್ತರಿಂದ ಅರವತ್ತು ಸೆನ್‍ಟಿ ಮೀಟರ್ ಉದ್ದ ಬೆಳೆಯುತ್ತದೆ. ಆದರೆ ಇದಕ್ಕೆ ೧೮೦ ಸೆನ್‍ಟಿ ಮೀಟರ್ ತನಕ ಬೆಳೆಯುವ ಕ್ಶಮತೆ ಇದೆ. ಈ ಹೂವಿನ ಸೌಂದರ್ಯ ವನ್ನು ಸವಿಯಲು ಪ್ರಪಂಚದ ನಾನಾ ಭಾಗಗಳಿಂದ ಬರುತ್ತಾರೆ. ಇದರಿಂದ ನೀಲಗಿರಿ ಬೆಟ್ಟವು ಒಂದು ಪ್ರವಾಸಿ ತಾಣವಾಗಿದೆ

ಮಾಸ್ಟಿಂಗ್:

ಕೆಲವೊಂದು ಹೂಗಳಾದ ನೀಲಕುರಿಂಜಿ ಈ ಮಾಸ್ಟಿಂಗ್‍ಗೆ ಉದಾಹರಣೆ. ಮಾಸ್ಟಿಂಗ್ ಎಂದರೆ ಕೆಲವು ಸಾರಿ ಅತೀ ವೇಗವಾಗಿ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನು ಬಿಡುತ್ತವೆ, ಆದರಿಂದ ಗಿಡಗಳು ಮತ್ತೆ ಹುಟ್ಟುತ್ತವೆ. ಮಾಸ್ಟಿಂಗ್ ಆಗುವುದು ಬರಿ ಒಂದು ಜಾತಿಯ ಬೀಜಗಳಲ್ಲಿ ಮಾತ್ರ. ಇರುವ ಸ್ಥಳ: ನೀಲಕುರಿಂಜಿ ಒಂದುತರ ಗೋಣಿಚೀಲ ಇದ್ದ ಹಾಗೆ. ಇದು ನೀಲಗಿರಿ ಪರ್ವತ ಹಾಗೂ ಪಳನಿ ಪರ್ವತಗಳನ್ನು ಮುಚ್ಚಿಕೊಂಡಿದೆ. ಆದರೆ ಅಲ್ಲಿ ವಾಸಿಸುವ ಜನರು ಮಾಡುವ ವ್ಯವಸಾಯದಿಂದ ಈ ನೀಲಕುರಿಂಜಿ ಹೂವಿನ ಅಸ್ತಿತ್ವ ಕಡಿಮೆಯಾಗುತ್ತಿದೆ. ಈ ಹೂವು ಅತೀ ಹೆಚ್ಚಾಗಿ ಪೂರ್ವ ಘಟ್ಟ ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಸಂದುರ್ ಬೆಟ್ಟದಲ್ಲಿ ಕಂಡುಬರುತ್ತದೆ. ಈ ಹೂವು ಕೊನೇಯದಾಗಿ ೨೦೦೬ನೇ ಇಸವಿಯಲ್ಲಿ ಕೇರಳ ಹಾಗೂ ತಮಿಳು ನಾಡಿನಲ್ಲಿ ಅರಳಿತ್ತು. ಇದು ೨೦೧೮ರಲ್ಲಿ ಮತ್ತೆ ಅರಳುತ್ತದೆ[೧]. ಸಂರಕ್ಶಣೆ: ಕುರಿಂಜಿಮಾಲ ಅಭಯಾರಣ್ಯವನ್ನು ಕುರಿಂಜಿ ಹೂವಿನ ಮರಗಳು ಸರಾಸರಿ ೩೨ಕಿಲೋ ಮೀಟರ್ ಸ್ಥಳವನ್ನು ಆವರಿಸಿಕೊಂಡಿದೆ. ಅದು ಕೊತ್ತಕಂಬುರ್ ಮತ್ತು ವತವಾಡ ಹಳ್ಳಿಯ ಹಿಡುಕ್ಕಿ ಜಿಲ್ಲೆಯ ಕೇರಳದಲ್ಲಿದೆ. ಕುರಿಂಜಿ ಹೂವನ್ನು ಕಾಪಡಲು ಅನೇಕ ಸಂಸ್ಥೆಗಳು ಅನೇಕ ಯೋಜನೆಗಳನ್ನು ಮಾಡಿ, ಅನೇಕ ಸಲಹೆಗಳನ್ನು ಸಿದ್ಧಪಡಿಸಿ ಕುರಿಂಜಿಯನ್ನು ಸಂರಕ್ಶಿಲು ಚರ್ಚಿಸುತ್ತಿದ್ದಾರೆ. ಕುರಿಂಜಿ ಅನ್‍ಡವರ್ ದೇವಸ್ಥಾನ ಕೊಡೆಕೆನಲ್ ತಮಿಳುನಾಡಿನಲ್ಲಿ ಇದೆ. ಅದು ಹಿಂದು ದೇವರಾದ ಕಾರ್ತಿಕೇಯನಿಗೆ ಅರ್ಪಿಸಲು ಈ ಹೂವನ್ನು ಉಪಯೋಗಿಸುತ್ತಾರೆ. ಈ ದೇವರಿಗೂ ಮತ್ತು ಕುರಿಂಜೆಗೂ ಏನು ಸಂಬಂಧವಿಲ್ಲ. ಆದರೂ ಆ ದೇವರಿಗೆ ಇದು ಪ್ರೀಯವಾದ ಹೂವು. ಇಲ್ಲಿರುವ ದೇವರು ಕುರಿಂಜಿಮಾಲ ಅಥವಾ ಸ್ಟ್ರೊಬಿಯಾಂತಸ್ ಬೆಟ್ಟ ಇರುವುದು. ಕುರಿಂಜಿ ಅನ್‍ದವನ್‍ದಲ್ಲಿ ಇದು ಹಳೇ ಕಾಲದ ಕಾಡು ಮನುಷ್ಯರ ಪಳಾನಿ ಬೆಟ್ಟ.

ಕಲೆ:

ಕುರಿಂಜಿ ಹೂವನ್ನು ಬೆಟ್ಟದ ಯಾವ ಭಾಗದಲ್ಲಿ ಮಣ್ಣು ಕುಸಿದಿದೆ ಎಂದು ಗುರುತಿಸಲು ತಮಿಳುನಾಡಿನಲ್ಲಿ ಉಪಯೋಗಿಸುತ್ತಾರೆ. ತಮಿಳು ಸಾಹಿತ್ಯಕಾರರಾದ ಕುರುಂಟೋಕೈ ರವರ ಅತೀ ಸುಂದರವಾದ ಒಂದು ಪದ್ಯದ ಸಾಲುಗಳು ಹೀಗಿವೆ "ಕೆಂಪು ಭೂಮಿ ಮತ್ತು ಸುರಿಯುವುದು ಮಳೆ". ಇದನ್ನು ಹೊರತುಪಡಿಸಿ ಈ ಹೂವಿನ ಬಗ್ಗೆ ಒಂದು ಐತಿಹಾಸಿಕ ಕಾದಂಬರಿಯೂ ಇದೆ. ಇದನ್ನು ಕ್ಲೇರ್ ಫ್ಲಿನ್‍ರವರು 'ಕುರಿಂಜಿ ಹೂವು' ಎನ್ನುವ ಹೆಸರಿನೊಂದಿಗೆ ಆ ಪುಸ್ತಕದಲ್ಲಿ ಆ ಹೂವಿನ ರೂಪ ಮತ್ತು ಲಕ್ಶ್ಣಗಳ ಬಗ್ಗೆ ಹಾಗೂ ಅದರ ಹಿನ್ನಲೆಗಳ ಬಗ್ಗೆ ಬರೆದಿದ್ದಾರೆ. ಈ ಕುರಿಂಜಿ ಹೂವು ಹನ್ನೆರಡು ವಷಗಳಿಗೊಮ್ಮೆ ಅರಳಲು ಕಾರಣ:- ಈ ರೀತಿಯಾಗಿ ಅರಳುವ ಹೂಗಳನ್ನು ಸಂಘಜೀವಿಗಳಾಗಿ ಅರಳುವ ಹೂಗಳು ಎಂದು ಕರೆಯುತ್ತಾರೆ. ಈ ಹೂಗಳು ಅರಳಲು ಇಷ್ಟು ಸಮಯ ತೆಗೆದು ಕೊಳ್ಳಲು ಕಾರಣವೆಂದರೆ ಅವುಗಳು ಹೂವು ಅರಳಲು ಬೇಕಾದ ಸಾಮಾಗ್ರಿ ಗಳನ್ನು ಒಟ್ಟುಗೂಡಿಸಲು ಅಷ್ಟು ಸಮಯ ಬೆಕಾಗುತ್ತದೆ. ಹೂವಿವ ಸಂಖ್ಯೆಯು ಒಂದೊಂದು ಕ್ಯಾಲೆಂಡರ್ ನಲ್ಲಿ ಒಂದೊಂದು ತರಹದ ದಿನಾಂಕವನ್ನು ಕೊಟ್ಟಿರುತ್ತಾರೆ. ಆದರೆ ಅದರ ಅಗಲ ಮಾತ್ರ ಸಮವಾಗಿ ಎಲ್ಲಾ ಹೂಗಳಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಈ ಹೂಗಳ ಆಕರ್ಷಣೆಯಿಂದ ಅನೇಕ ಸಸ್ಯಹಾರಿ ಪ್ರಾಣಿಗಳು ಇದನ್ನು ತಿಂದು ಇವುಗಳನ್ನು ನಾಶಮಾಡಲು ಪ್ರಯತ್ನಿಸುತ್ತಾರೆ. ಅಂತಹ ಸಮಯದಲ್ಲಿ ಆ ಪ್ರಾಣಿಗಳನ್ನು ಹೆದರಿಸುವ ಶಕ್ತಿ ಈ ಕುರಿಂಜಿ ಹೂವಿಗಿದೆ. ಕುರಿಂಜಿ ಹೂವಿನ ಗಿಡಗಳು ಅನೇಕ ಹೂಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜನ್ಮ ಕೊಡುತ್ತದೆ. ಈ ಗಿಡಗಳು ಹೂವಾದ ನಂತರ ಕಾಯಿ ಬಿಡುತ್ತವೆ, ಅಲ್ಲಿಗೆ ಅವುಗಳ ಜೀವನ ಕೊನೆಗೊಳ್ಳುತ್ತದೆ. ಆದರೆ ಅವುಗಳು ಕಾಯಿ ಬಿಡುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಲು ಅವುಗಳು ಚಿಟ್ಟೆ ಮತ್ತು ಇರುವೆಯ ಬದಲಿಗೆ ದುಂಬಿಗಳನ್ನು ಹೆಚ್ಚಾಗಿ ಆಕರ್ಷಿಸಬೇಕು. ಈ ಗಿಡಗಳು ಕಾಯಿಗಳನ್ನು ಬಿಟ್ಟಾಗ ಅನೇಕ ಪ್ರಾಣಿಗಳನ್ನು ಆಕರ್ಷಿಸುತ್ತವೆ. ಆ ಪ್ರಾಣಿಗಳು ಈ ಬೀಜಗಳನ್ನು ಸಂಪೂರ್ಣವಾಗಿ ತಿಂದರೆ ಈ ಗಿಡಗಳು ನಾಶಗೊಳ್ಳುತ್ತವೆ. ಆದರೆ ಈ ಹೂಗಳು ಅಧಿಕ ಪ್ರಮಾಣದಲ್ಲಿ ಅರಳುವುದರಿಂದ ಈ ಗಿಡಗಳು ನಾಶವಾಗುವುದರ ಬಗ್ಗೆ ಹೆಚ್ಚು ಭಯವಿಲ್ಲ. ಏಕೆಂದರೆ ಪ್ರಾಣಿಗಳು ಈ ಗಿಡದ ಬೀಜಗಳನ್ನು ತಿನ್ನಲು ಬಂದರೂ ಅವು ಕೆಲವು ಗಿಡಗಳಿಂದ ತಿನ್ನುತ್ತವೆ, ಕೆಲವು ಗಿಡಗಳನ್ನು ಅವು ಮುಟ್ಟುವುದಿಲ್ಲ. ಇದು ಮುಂಬರುವ ಗಿಡಗಳಿಗೆ ಒಳ್ಳೆಯದಾಗುತ್ತದೆ. ಇದನ್ನು ಪರಭಕ್ಷಕ ಸಂತೃಪ್ತಿ ಎಂದು ಕರೆಯುತ್ತಾರೆ.[೨]

ಉಲ್ಲೇಖಗಳು

lisans
cc-by-sa-3.0
telif hakkı
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ನೀಲಕುರಂಜಿ: Brief Summary ( Kannada dili )