ಕಸ್ತೂರಿ ಮಲ್ಲಿಗೆಯು[೧] ಓಲಿಯೇಸೀ ಕುಟುಂಬದಲ್ಲಿನ ಮಲ್ಲಿಗೆಯ ಒಂದು ಪ್ರಜಾತಿ. ಇದು ಚಳಿಗಾಲದಲ್ಲಿ ಹೂ ಬಿಡುತ್ತದೆ. ಸಂಸ್ಕೃತದಲ್ಲಿ ಇದನ್ನು ಮಾಘ ಮಲ್ಲಿಕಾ ಎಂದು ಕರೆಯುತ್ತಾರೆ ಏಕೆಂದರೆ ಇದು ಹಿಂದೂ ಪಂಚಾಗದಲ್ಲಿನ ಮಾಘ ಮಾಸದಲ್ಲಿ ಹೂ ಬಿಡುತ್ತದೆ. ಇದು ಎಷ್ಟು ಹೂವುಗಳನ್ನು ಬಿಡುತ್ತದೆ ಎಂದರೆ ಕೆಲವೊಮ್ಮೆ ಹೂವುಗಳು ಬಹುತೇಕ ಎಲೆಗಳನ್ನು ಆವರಿಸಿ ಎಲ್ಲವನ್ನೂ ಬಿಳಿಯಾಗಿ ಮಾಡಿಬಿಡುತ್ತವೆ. ಭಾರತೀಯ ಪುರಾಣದಲ್ಲಿ, ಕುಂದ ಎಂದು ಕರೆಯಲ್ಪಡುವ ಇದು ತನ್ನ ಬಿಳುಪಿಗೆ ಪರಿಚಿತವಾಗಿದೆ. ಹಾಗಾಗಿ ಹಿಂದೂ ಪೌರಾಣಿಕ ಕಥೆಗಳಲ್ಲಿ 'ಕುಂದದಂತೆ ಬಿಳಿ' ಎಂಬ ಪದಗುಚ್ಛ ಹಲವುವೇಳೆ ಕಾಣಿಸುತ್ತದೆ. ಜೊತೆಗೆ, ಸುಂದರ ಬಿಳಿ ಹಲ್ಲುಗಳನ್ನು ಹಲವುವೇಳೆ ಕುಂದದ ಮೊಗ್ಗುಗಳಿಗೆ ಹೋಲಿಸಲಾಗುತ್ತದೆ. ಮಣಿಪುರದಲ್ಲಿ, ಕುಂದದ ಹೂವುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ, ಮತ್ತು ವಿವಾಹ ಸಮಾರಂಭದ ಅತ್ಯಗತ್ಯ ಭಾಗವಾಗಿವೆ. ವಧುವು ವರನಿಗೆ ಎರಡು ಕುಂದ ಹೂವುಗಳ ಹಾರಗಳನ್ನು ಹಾಕುತ್ತಾಳೆ. ನಂತರ ವರನು ಅವುಗಳಲ್ಲಿ ಒಂದು ಹಾರವನ್ನು ತೆಗೆದುಕೊಂಡು ವಧುವಿಗೆ ತೊಡಿಸುತ್ತಾನೆ.
ಕಸ್ತೂರಿ ಮಲ್ಲಿಗೆಯು ಓಲಿಯೇಸೀ ಕುಟುಂಬದಲ್ಲಿನ ಮಲ್ಲಿಗೆಯ ಒಂದು ಪ್ರಜಾತಿ. ಇದು ಚಳಿಗಾಲದಲ್ಲಿ ಹೂ ಬಿಡುತ್ತದೆ. ಸಂಸ್ಕೃತದಲ್ಲಿ ಇದನ್ನು ಮಾಘ ಮಲ್ಲಿಕಾ ಎಂದು ಕರೆಯುತ್ತಾರೆ ಏಕೆಂದರೆ ಇದು ಹಿಂದೂ ಪಂಚಾಗದಲ್ಲಿನ ಮಾಘ ಮಾಸದಲ್ಲಿ ಹೂ ಬಿಡುತ್ತದೆ. ಇದು ಎಷ್ಟು ಹೂವುಗಳನ್ನು ಬಿಡುತ್ತದೆ ಎಂದರೆ ಕೆಲವೊಮ್ಮೆ ಹೂವುಗಳು ಬಹುತೇಕ ಎಲೆಗಳನ್ನು ಆವರಿಸಿ ಎಲ್ಲವನ್ನೂ ಬಿಳಿಯಾಗಿ ಮಾಡಿಬಿಡುತ್ತವೆ. ಭಾರತೀಯ ಪುರಾಣದಲ್ಲಿ, ಕುಂದ ಎಂದು ಕರೆಯಲ್ಪಡುವ ಇದು ತನ್ನ ಬಿಳುಪಿಗೆ ಪರಿಚಿತವಾಗಿದೆ. ಹಾಗಾಗಿ ಹಿಂದೂ ಪೌರಾಣಿಕ ಕಥೆಗಳಲ್ಲಿ 'ಕುಂದದಂತೆ ಬಿಳಿ' ಎಂಬ ಪದಗುಚ್ಛ ಹಲವುವೇಳೆ ಕಾಣಿಸುತ್ತದೆ. ಜೊತೆಗೆ, ಸುಂದರ ಬಿಳಿ ಹಲ್ಲುಗಳನ್ನು ಹಲವುವೇಳೆ ಕುಂದದ ಮೊಗ್ಗುಗಳಿಗೆ ಹೋಲಿಸಲಾಗುತ್ತದೆ. ಮಣಿಪುರದಲ್ಲಿ, ಕುಂದದ ಹೂವುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ, ಮತ್ತು ವಿವಾಹ ಸಮಾರಂಭದ ಅತ್ಯಗತ್ಯ ಭಾಗವಾಗಿವೆ. ವಧುವು ವರನಿಗೆ ಎರಡು ಕುಂದ ಹೂವುಗಳ ಹಾರಗಳನ್ನು ಹಾಕುತ್ತಾಳೆ. ನಂತರ ವರನು ಅವುಗಳಲ್ಲಿ ಒಂದು ಹಾರವನ್ನು ತೆಗೆದುಕೊಂಡು ವಧುವಿಗೆ ತೊಡಿಸುತ್ತಾನೆ.