dcsimg

ಆಕಾಶಮಲ್ಲಿಗೆ ( Kannada )

provided by wikipedia emerging languages

ಆಕಾಶಮಲ್ಲಿಗೆ(Indian Cork Tree)ಮ್ಯಾನ್ಮಾರ್ ದೇಶದ ಮೂಲವಾಸಿ.ಭಾರತದಲ್ಲಿ ಅಲಂಕಾರಕ್ಕೆ ಉದ್ಯಾನವನಗಳಲ್ಲಿ,ಸಾಲುಮರಗಳಾಗಿ ಅಲ್ಲಲ್ಲಿ ಬೆಳೆಸಲಾಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಬಿಗ್ನೋನಿಯೆಸಿ (Bignoniaceae)ಕುಟುಂಬಕ್ಕೆ ಸೇರಿದ್ದು,ಮಿಲ್ಲಿಂಗ್ಟೋನಿಯ ಹೊರ್ಟೆನ್ಸಿಸ್( Mllingtonia hortensis)ಎಂದು ಸಸ್ಯಶಾಸ್ತ್ರೀಯ ಹೆಸರು.ಬಳಕೆಯಲ್ಲಿ ಇಂಡಿಯನ್ ಕಾರ್ಕ್ ಟ್ರೀ ಎಂದು ಕರೆಯುತ್ತಾರೆ.

ಸಸ್ಯದ ಗುಣಲಕ್ಷಣಗಳು

ಸಾದಾರಣ ಎತ್ತರಕ್ಕೆ ಬೆಳೆಯುವ ಈ ಮರ ಶಂಖುವಿನ ಆಕಾರದ ಹಂದರದಿಂದ ಅಂದವಾಗಿ ಕಾಣುತ್ತದೆ.ಸೆಪ್ಟೆಂಬರ್-ನವೆಂಬರ್ ತಿಂಗಳಲ್ಲಿ ಬಿಳಿಯ ಕೊಳವೆಯಾಕಾರದ ಹೂಗೊಂಚಲುಗಳು ಜೋತು ಬಿದ್ದಿರುವುದು.ತೊಗಟೆಯಿಂದ ಬಿರಟೆ (Cork)ದೊರೆಯುತ್ತದೆ.ದಾರುವು ಹಳದಿ ಛಾಯೆಯ ಬಿಳಿ ಬಣ್ಣದ್ದಾಗಿದ್ದು,ಮೃದುವಾಗಿದೆ.

ಉಪಯೋಗಗಳು

ತೊಗಟೆಯಿಂದ ಬಿರಟೆ,ದಾರುವು ಟೀ ಪೆಟ್ಟಿಗೆ,ಅಲಂಕಾರ ವಸ್ತುಗಳ ತಯಾರಿಕೆ ಮುಂತಾದ ಕೆಲಸಗಳಿಗೆ ಒದಗುತ್ತದೆ.ಕಾಗದ ಹಾಗೂ ರೆಯಾನ್ ತಯಾರಿಕೆ ಸೂಕ್ತ.ತೊಗಟೆಯು ಜ್ವರ ನಿವಾರಕ ಎಂದು ಹೇಳಲಾಗಿದೆ.

ಛಾಯಾಂಕಣ

ಆಧಾರ ಗ್ರಂಥಗಳು

  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಆಕಾಶಮಲ್ಲಿಗೆ: Brief Summary ( Kannada )

provided by wikipedia emerging languages

ಆಕಾಶಮಲ್ಲಿಗೆ(Indian Cork Tree)ಮ್ಯಾನ್ಮಾರ್ ದೇಶದ ಮೂಲವಾಸಿ.ಭಾರತದಲ್ಲಿ ಅಲಂಕಾರಕ್ಕೆ ಉದ್ಯಾನವನಗಳಲ್ಲಿ,ಸಾಲುಮರಗಳಾಗಿ ಅಲ್ಲಲ್ಲಿ ಬೆಳೆಸಲಾಗಿದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು