dcsimg
Image of Macrognathus pavo Britz 2010
Life » » Animals » » Vertebrates »

Osteichthyes

ಅಸ್ಥಿಮತ್ಸ್ಯಗಳು ( Kannada )

provided by wikipedia emerging languages
 src=
ಅಸ್ಥಿಮತ್ಸ್ಯ್

ಅಸ್ಥಿಮತ್ಸ್ಯಗಳು ಈಗ ಜೀವಂತವಾಗಿರುವ ಬಹು ಸಂಖ್ಯಾತ ಮೂಳೆ ಮೀನುಗಳನ್ನೊಳಗೊಂಡ ಗುಂಪು (ಆಸ್‍ಟಿಯಿಕ್‍ತಿಸ್). ಇವುಗಳ ಉಗಮ ಭೂವಿಜ್ಞಾನ ಇತಿಹಾಸದಲ್ಲೇ ಆಕಸ್ಮಿಕ. ಸೈಲೂರಿಯನ್ ಕಾಲದಲ್ಲಿ ಈ ಗುಂಪಿನ ಸುಳಿವೇ ಕಂಡಿಲ್ಲ. ಡೆವೋನಿಯನ್ ಕಾಲದ ಪೂರ್ವಾರ್ಧದಲ್ಲಿ ಕೇವಲ ಕೆಲವು ಭಿನ್ನ ಭಿನ್ನ ಅವಶೇಷಗಳು ಮಾತ್ರ ಗೋಚರಿಸಿವೆ. ಇವು ಎಲ್ಯಾಸ್ಮೊ ಬ್ರಾಂಕೈ ವರ್ಗಕ್ಕಿಂತ ಹಿಂದಿನವು. ಬಹುಶ: ಆಸ್ಟ್ರಾಕೊಡರ್ಮಿ ಬುಡಕಟ್ಟಿನಿಂದ ಇವುಗಳ ಉಗಮವಾಗಿದ್ದಿರಬಹುದು. ಇವು ಸಿಹಿನೀರಿನೆಡೆಯಿಂದ ಎಂದರೆ, ನದಿ, ಜೌಗು ಹಾಗೂ ಹೊಂಡಗಳಿಂದ ಬಂದುವು. ಮಧ್ಯ ಡೆಮೋನಿಯನ್ ಕಾಲಕ್ಕೆ ಕ್ರಾಸೋಟ್ವೆರಿಜಿಯೈ, ಡಿಪ್ನಾಯ್ ಮತ್ತು ಆಕ್ಟಿನೊಟೆರಿಜಿಯೈ ಎಂಬ ಮೂರು ಬೃಹತ್ ಗುಂಪುಗಳಾಗಿ ವಿಕಾಸಗೊಂಡವು.

ವಿಧಗಳು

ಇವುಗಳಲ್ಲಿ ಬಹುಪಾಲು ಮೀನುಗಳು ಮೃದುವಾದ ಸೈಕ್ಲಾಯಿಡ್ ಮತ್ತೆ ಕೆಲವು ಗ್ಯಾನಾಯಿಡ್ ಹುರುಪೆಗಳನ್ನು ಹೊಂದಿವೆ. ಅಸ್ಥಿಪಂಜರ ಎಲುಬಿನಿಂದ ಗಡುಸಾಗಿದೆ. ಬಾಯಿ ತುದಿಯಲ್ಲಿದೆ. ಬಾಲದ ಈಜುರೆಕ್ಕೆ ಡಿಫಿ ಅಥವಾ ಹೋಮೊಸೆರ್ಕಲ್ ರೀತಿಯವು. ಈಜುರೆಕ್ಕೆಯ ಕದಿರುಗಳು ಮೂಳೆಯಿಂದಾದವುಗಳು. ಕಿವಿರು ಕವಚ ಕಿವಿರು ರಂಧ್ರಗಳನ್ನು ಮುಚ್ಚುತ್ತದೆ. ಕಿವಿರುಗಳು ಮಧ್ಯ ತಡಿಕೆ (iಟಿಣeಡಿbಡಿಚಿಟಿಛಿhiಚಿಟ seಠಿಣಚಿ) ಕಿರಿದು; ಕಿವಿರುಗಳಲ್ಲಿ ತಂತುಗಳಿವೆ. ಕೆಳದವಡೆಯಲ್ಲಿ ಅನೇಕ ಮೂಳೆಗಳಿವೆ. ಈಜು ಬುರುಡೆ (ಏರ್ ಬ್ಲಾಡರ್) ಇರುವುದು ಸಾಮಾನ್ಯ. ಗಾಳಿಯ ಕೋಶಗಳಿವೆ. ಅಂಡಾಶಯನಾಳಗಳು ಅಂಡಾಶಯಕ್ಕೆ ನೇರ ಸಂಪರ್ಕ ಹೊಂದಿವೆ. ದೇಹದ ಹೊರಗೆ ನೀರಿನಲ್ಲಿ ಮೊಟ್ಟೆಗಳು ಗರ್ಭಕಟ್ಟುತ್ತವೆ. ಆಸ್ಟಿಯಿಕ್ತಿಸ್ ಮೀನುಗಳಲ್ಲಿ ಕೊಯನಿಕ್ತಿಸ್ ಮತ್ತು ಅಕ್‍ಟಿನೋಪಟೆರಿಗೈ ಎಂಬ ಎರಡು ಉಪವರ್ಗಗಳುಂಟು. ಕೊಯನಿಕ್ತಿಸ್ ಮೀನುಗಳ ಶ್ವಾಸಕೋಶದ ಉಸಿರಾಡುವಿಕೆಗೆ ಸಂಬಂಧಿಸಿರುವ ಒಳನಾಸಿಕ ರಂಧ್ರಗಳನ್ನು ಹೊಂದಿವೆ. ಈ ಗುಂಪಿನಿಂದ ದ್ವಿಚರಪ್ರಾಣಿಗಳು ವಿಕಸಿಸಿವೆ. ಯಾವ ಕಾಲದಲ್ಲಿಯೂ ಹೆಚ್ಚಿನ ಪ್ರಸಾರ ಪಡೆಯಲ್ಲಿಲ್ಲ. ಇತ್ತೀಚೆಗೆ ಕಂಡುಹಿಡಿಯಲ್ಪಟ್ಟು ಸೀಲೂಕ್ಯಾಂತ್ ಜಾತಿಯ ಲ್ಯಾಟಿಮೆರಿಯ (oಡಿಜeಡಿ: ಛಿಡಿಚಿssಚಿ ಠಿಣeಡಿಥಿgii) ಮತ್ತು ಡಿಪ್ನಾಯ್ ಗುಂಪಿನ ಕೆಲವು ಪ್ರಭೇದಗಳಿಗೆ ಮಾತ್ರ ಒಳಪಟ್ಟಿವೆ. ಈ ಮೀನುಗಳು ಡೆವೋನಿಯನ್ ಕಾಲದಿಂದ ಕೇವಲ ಅಲ್ಪಬದಲಾವಣೆಯಿಂದ ಉಳಿದು ಬಂದ ಅವಶಿಷ್ಟ ಗುಂಪು. ಡೆವೋನಿಯನ್ ಕಾಲದಲ್ಲಿ ಕ್ರಾಸೋಪ್‍ಟೆರಿಗೈ ಮೀನುಗಳು ವಿಶೇಷವಾಗಿದ್ದುದುಟು. ಅವು ಕಾಸ್ಮಾಯಿಡ್ ಬಗೆಯ ಹುರುಪೆಗಳನ್ನು ಹೊಂದಿದ್ದವು. ಅವಕ್ಕೆ ಸ್ಪೈರಕಲ್ ಮತ್ತು ಪೈನಿಯಲ್ ರಂಧ್ರ ಇದ್ದವು. ಚಕ್ರವ್ಯೂಹ ರಚನೆಯ ಹಲ್ಲುಗಳಿದ್ದವು. ಈಜುರೆಕ್ಕೆಯ ಬುಡದಲ್ಲಿ ಮಾಂಸಭರಿತವಾದ ಭಾಗವಿದ್ದು, ಅದು ಎಲುಬಿನ ಪಂಜರದಿಂದ ಧೃಡತೆ ಹೊಂದಿದೆ. ಮೊದಲ ಕ್ರಾಸಾಪ್ಟೆರಿಜಿಯೈ ಮೀನುಗಳು ಮಾಂಸಾಹಾರಿಗಳು ಮತ್ತು ಸಿಹಿ ನೀರಿನ ವಾಸಿಗಳು. ನೀರು ಬತ್ತಿದ್ದ ಕಾಲದಲ್ಲಿ ಗಾಳಿಯ ಉಸಿರಾಡುವಿಕೆಗೆ ಒಳನಾಸಿಕ ರಂಧ್ರಗಳು ಬಹುಶಃ ಸಹಾಯವಾಗಿದ್ದಿರಬಹುದು. ಕ್ರಾಸಾಪ್ಟೆರಿಜಿಯನ್‍ಗಳ ಒಂದು ವಿಭಾಗವಾದ ಸೀಲೊಕ್ಯಾಂತಿನಿಗಳು ಸಮುದ್ರಜೀವನವನ್ನು ಅವಲಂಬಿಸಿದವು. ಇತ್ತೀಚೆಗೆ ಕಂಡುಹಿಡಿದಿರುವ ಲ್ಯಾಮಿಟೇರಿಯ ಜೀವಂತಲುಪ್ತ ಜೀವಿಗಳ ರೀತಿಯಲ್ಲಿವೆಯೆನ್ನಬಹುದು. ಡೆವೋನಿಯನ್ ಮತ್ತು ಕಾರ್ಬೋನಿಫೆರಸ್ ಕಾಲಗಳಲ್ಲಿ ಕಾಣಿಸಿದ ಅಸ್ಟಿಯೋಲೆಪಿಡ್ ಮೀನುಗಳು ವಿಶೇಷವಾಗಿ ಹಿಂದುಳಿದ ಜೀವಿಗಳು. ಆದರೆ ಅವು ಪ್ರಾಚೀನ ದ್ವಿಚರ ಪ್ರಾಣಿಗಳನ್ನು ಹೋಲುತ್ತಿದ್ದವು.

ಕ್ರಾಸೋಪ್ಟೆರಿಜಿಯನ್ ಬುಡದಿಂದ ಡೆವೋನಿಯನ್ ಕಾಲದಲ್ಲಿ ಹೊರಬಂದ ಗುಂಪು ಡಿಪ್ನಾಯ್ ಮೀನುಗಳು. ಇದಕ್ಕೆ ಸೇರಿದ ಮೀನುಗಳು ಕಿವಿರು ಹಾಗೂ ಶ್ವಾಸಕೋಶಗಳನ್ನು ಹೊಂದಿದ್ದು ಜೌಗು ಮತ್ತು ಸಿಹಿ ನೀರಿನಲ್ಲಿ ವಾಸಿಸುತ್ತವೆ. ಡಿಪ್ನಾಯ್ ಮೀನುಗಳು ಈಗಲೂ ಉಳಿದಿದ್ದು ಅವನತಿ ಹೊಂದಿರುವ ಹಾಗು ಸಂಕೀರ್ಣತೆ ಪಡೆದ ಮೂರು ಜಾತಿಗಳಾಗಿವೆ. ನಿಯಾಸಿರಟೋಡಸ್, ಲೆಪಿಡೋಸೈರನ್ ಮತ್ತು ಪ್ರೊಟಾಪ್ಟರಸ್ ಇವೇ ಆ ಮೂರು ಜಾತಿಯ ಉದಾಹರಣೆಗಳು ಇವು ಪ್ರಥಮವಾಗಿ ಡೆವೊನಿಯನ್ ಮಧ್ಯಕಾಲದಲ್ಲಿ ಕಾಣಿಸಿಕೊಂಡು ಪರ್ವಿಯನ್ ಮತ್ತು ಟ್ರೈಯಾಸಿಕ್ ಕಾಲಗಳಲ್ಲಿ ಸ್ವಲ್ಪ ವೃದ್ಧಿಯಾಗಿ ಅನಂತರ ವಿರಳವಾದವು. ಈ ಮೀನುಗಳು ಈಗ ಕ್ವೀನ್ಸ್‍ಲೆಂಡ್, ದಕ್ಷಿಣ ಅಮೇರಿಕ ಮತ್ತು ಆಫ್ರಿಕಗಳಲ್ಲಿ ಸಿಹಿನೀರುಗಳಲ್ಲಿ ಜೀವಂತವಾಗಿವೆ. ಇದು ಪರಿಮಿತ ಪ್ರಸರಣಕ್ಕೆ ಒಂದು ಉದಾಹರಣೆ.

ಆಕ್ಟಿನೋಪೆರಿಗೈ[೧] ಮೀನುಗಳಲ್ಲಿ ಒಳನಾಸಿಕ ರಂಧ್ರಗಳಿಲ್ಲ. ಇವು ಕದಿರುಳ್ಳ ಈಜುರೆಕ್ಕೆಗಳ ಮೀನುಗಳು. ಜೋಡಿ ಈಜುರೆಕ್ಕೆಗಳ ತಳದಲ್ಲಿ ಮಾಂಸವಿಲ್ಲ. ಈಜುರೆಕ್ಕೆಯ ಪೊರೆಗಳಿಗೆ ಕೊಂಬಿನ (ಹಾರ್ನಿ) ಕದಿರುಗಳ ಆಧಾರವಾಗಿವೆ. ದೇಹದ ಹೊದಿಕೆ ಗ್ಯಾನಾಯಿಡ್ ಬಗೆಯ ಹುರುಪೆಗಳಿಂದ ಕೂಡಿದೆ. ಇದರ ಉಪ್ಪುನೀರಿನ ಪ್ರಭೇದಗಳಲ್ಲಿ ಕಾಡ್, ಸೋಲ್, ಹೆರ್ರಿಂಗ್ ಮತ್ತು ಈಲ್‍ಗಳಲ್ಲದೆ ಇನ್ನಿತರ ಬಗೆಯವೂ ಸೇರಿವೆ. ಇವು ಎಲ್ಲ ದೇಶಗಳ ಸರೋವರ ಮತ್ತು ಹೊಳೆಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಕೆಲವು ವಿಚಿತ್ರವಾದ ಮತ್ತು ಪ್ರಾಚೀನ ಕಾಲದಿಂದ ಉಳಿದು ಬಂದಿರುವ ಸ್ವರ್ಜನ್ ಗಾರ್‍ಪೈಕ್, ಬೋಫಿನ್ ಹಾಗೂ ಇತರ 20,000ಕ್ಕೂ ಹೆಚ್ಚಾದ ಮೂಳೆಯ ಮೀನುಗಳ ಪ್ರಭೇದಗಳೂ ಸೇರಿವೆ. ಅತಿ ಹಿಂದಿನಿಂದ ಕಂಡುಬಂದ ಆಕ್ಟಿನೋಪ್ಟೆರಿಜಿಯನ್ ಮೀನುಗಳು ಮಧ್ಯ ಡೆವೋನಿಯನ್ ಕಾಲದ ಸಿಹಿ ನೀರಿನಿಂದ ಬಂದುವಲ್ಲದೆ ಕ್ರಾಸಾಪ್ಟೆರಿಜಿಯನ್ ಮೀನುಗಳಿಗಿಂತ ಬಹು ವಿರಳವಾದವು. ಆದರೆ ಅವು ಈಗ ಸಾಧಾರಣವಾಗಿ ಕಾಣಸಿಗುವ ಮೀನುಗಳು. ಪೇಲಿಯೋಜೋಯಿಕ್ ಕಾಲದಲ್ಲಿಯೇ ಪುನಃ ಪ್ರವೇಶಿಸಿದ್ದುಂಟು. ಟ್ರೈಯಾಸಿಕ್‍ನಲ್ಲಿ ಉಪ್ಪುನೀರಿನ ಒಂದು ಬೃಹತ್ ಪ್ರಸರಣ ಆಯಿತು. ಈಗಿನ ಬಹುಸಂಖ್ಯಾತ ಸಿಹಿನೀರಿನ ಮೂಳೆಯ ಮೀನುಗಳು ನದಿಗಳು ಮತ್ತು ಸರೋವರಗಳಿಗೆ ಮೊದಲ ಮರು ಪ್ರವೇಶದಿಂದ ವಿಕಾಸಗೊಂಡಿವೆ. ಈ ಉಪವರ್ಗ ಕಾಂಡ್ರಾಸ್ಟಿಯೈ, ಹಾಲಾಸ್ಟಿಯೈ ಮತ್ತು ಟೆಲಿಯಾಸ್ಟಿಯೈ ಎಂಬ ಮೂರು ವಿಶೇಷ ಪಂಗಡಗಳಾಗಿ (ಸುಪರ್ ಆರ್ಡರ್ಸ್) ವಿಭಾಗಿಸಲ್ಪಟ್ಟಿದೆ. ಕಾಂಡ್ರಾಸ್ಟಿಯೈ ಮೀನುಗಳು ಪೆಲಿಯೋಜೋಯಿಕ್ ಯುಗದಲ್ಲಿ ಪೆಲಿಯೋನಿಸ್ಕಿಡ್ ಮೀನುಗಳಿಂದ ಪ್ರತಿನಿಧಿಸಲ್ಪಟ್ಟಿವೆ. ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಸಣ್ಣ ಮೀನುಗಳಿಗೆ ಹೆಟರೋಸರ್ಕಲ್ ರೂಪದ ಬಾಲದ ಈಜುರೆಕ್ಕೆಯೂ ಗ್ಯಾನಾಯಿಡ್ ಹುರುಪೆಗಳೂ ಮೃದ್ವಸ್ಥಿಯಿಂದ ಮಾಡಿದ ಅಸ್ಥಿಪಂಜರವೂ ಇದ್ದುವು. ಅಸಿಪೆನ್ಸರ್ ಸ್ಕಾಫಿರಿಂಕಸ್ ಪೋಲ್ಯೋಡಾನ್, ಕ್ರಾಸೊಫೋಲಿಸ್, ಸೆಫೋರಸ್ ಎಂಬ ಅವನತಮುಖವಾದ ಸಂಕೀರ್ಣತೆ ಹೊಂದಿದ ಐದು ಪ್ರಭೇದಗಳನ್ನುಳಿದು ಮಿಕ್ಕವೆಲ್ಲ ಬಹುವಾಗಿ ಅಳಿದುಹೋದವು. ಹಾಲಾಸ್ಟಿಯೈ ಗುಂಪಿನಲ್ಲಿ ಕದಿರಿನ ಈಜುರೆಕ್ಕೆಗಳುಳ್ಳ ಮೀನುಗಳಿವೆ. ಮೈಮೇಲೆ ಹುರುಪೆಗಳುಳ್ಳ ಮೂಳೆಯ ಒಳ ಅಸ್ಥಪಂಜರವುಳ್ಳ ಏಮಿಯ ಮತ್ತು ಲೆಪಿಡಾಸ್ಟಿಯಸ್ ಜಾತಿಗಳು ಈ ಗುಂಪನ್ನು ಪ್ರತಿನಿಧಿಸುತ್ತವೆ. ಮೂಳೆಯ ಮೀನುಗಳ ವಿಕಾಸಕ್ಕೆ ಇವು ಎಡೆ ಕೊಡುವುದರಿಂದ ಪ್ರಾಮುಖ್ಯ ಪಡೆದಿವೆ.

ಮೂಳೆ ಮೀನುಗಳು[೨] : ಇವು ಆಧುನಿಕ ಕಾಲದ ಮೀನುಗಳು. ಈಗ ಜೀವಂತವಾಗಿರುವ 90% ಭಾಗದಷ್ಟು ಮೀನುಗಳು ಈ ವರ್ಗದಲ್ಲಿವೆ. ಅವು ಬೇಗ ವೃದ್ಧಿಯಾಗಿ ಸಿನೋಜೋಯಿಕ್ ಕಾಲದಲ್ಲಿ ವಿಸ್ತಾರವಾದ ಪ್ರದೇಶಗಳಿಗೆ ಹರಡಿಕೊಂಡವು. ದೇಹದ ರಚನೆಯಲ್ಲಿ ಸಂಕೀರ್ಣತೆಯನ್ನು ತಾಳಿರುವುದಲ್ಲದೆ ಅನೇಕ ಪರಿವರ್ತನೆಗಳನ್ನೂ ಹೊಂದಿದುವು. ಅವು ಸಿಹಿ ನೀರಿನಲ್ಲಿಯೂ ಉಪ್ಪುನೀರಿನಲ್ಲಿಯೂ ಜೌಗುಗಳಲ್ಲಿಯೂ ವಾಸಿಸುತ್ತವೆ. ಈ ಮೀನುಗಳು 35 ಕುಟುಂಬಗಳಲ್ಲಿ ಈಗ ಬದುಕಿರುವ ಮೂಳೆಯಮೀನುಗಳ ಸುಮಾರು ೨೦೦೦೦ ಪ್ರಭೇದಗಳು ಒಳಗೊಂಡಿವೆ. ಮಾನವರನೇಕರು ಆಹಾರಕ್ಕಾಗಿ ಈ ಮೀನುಗಳನ್ನು ಅವಲಂಬಿಸಿರುವರು. ಜೊತೆಗೆ ದೊಡ್ಡ ದೊಡ್ಡ ಕೈಗಾರಿಕೆಗಳು ಈ ಮೂಲಕ ಸ್ಥಾಪಿತವಾಗಿವೆ. (ಪಿ.ಎ.ಆರ್.)

ಉಲ್ಲೇಖಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಅಸ್ಥಿಮತ್ಸ್ಯಗಳು: Brief Summary ( Kannada )

provided by wikipedia emerging languages
 src= ಅಸ್ಥಿಮತ್ಸ್ಯ್

ಅಸ್ಥಿಮತ್ಸ್ಯಗಳು ಈಗ ಜೀವಂತವಾಗಿರುವ ಬಹು ಸಂಖ್ಯಾತ ಮೂಳೆ ಮೀನುಗಳನ್ನೊಳಗೊಂಡ ಗುಂಪು (ಆಸ್‍ಟಿಯಿಕ್‍ತಿಸ್). ಇವುಗಳ ಉಗಮ ಭೂವಿಜ್ಞಾನ ಇತಿಹಾಸದಲ್ಲೇ ಆಕಸ್ಮಿಕ. ಸೈಲೂರಿಯನ್ ಕಾಲದಲ್ಲಿ ಈ ಗುಂಪಿನ ಸುಳಿವೇ ಕಂಡಿಲ್ಲ. ಡೆವೋನಿಯನ್ ಕಾಲದ ಪೂರ್ವಾರ್ಧದಲ್ಲಿ ಕೇವಲ ಕೆಲವು ಭಿನ್ನ ಭಿನ್ನ ಅವಶೇಷಗಳು ಮಾತ್ರ ಗೋಚರಿಸಿವೆ. ಇವು ಎಲ್ಯಾಸ್ಮೊ ಬ್ರಾಂಕೈ ವರ್ಗಕ್ಕಿಂತ ಹಿಂದಿನವು. ಬಹುಶ: ಆಸ್ಟ್ರಾಕೊಡರ್ಮಿ ಬುಡಕಟ್ಟಿನಿಂದ ಇವುಗಳ ಉಗಮವಾಗಿದ್ದಿರಬಹುದು. ಇವು ಸಿಹಿನೀರಿನೆಡೆಯಿಂದ ಎಂದರೆ, ನದಿ, ಜೌಗು ಹಾಗೂ ಹೊಂಡಗಳಿಂದ ಬಂದುವು. ಮಧ್ಯ ಡೆಮೋನಿಯನ್ ಕಾಲಕ್ಕೆ ಕ್ರಾಸೋಟ್ವೆರಿಜಿಯೈ, ಡಿಪ್ನಾಯ್ ಮತ್ತು ಆಕ್ಟಿನೊಟೆರಿಜಿಯೈ ಎಂಬ ಮೂರು ಬೃಹತ್ ಗುಂಪುಗಳಾಗಿ ವಿಕಾಸಗೊಂಡವು.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು