dcsimg

ಅರಿಸಿನ ಗುರುಗಿ ( канадски )

добавил wikipedia emerging languages

ಅರಿಸಿನ ಗುರುಗಿ : ಗಟ್ಟಿಫೆರೀ (ಕ್ಲೂಸಿಯೇಸೀ) ಕುಟುಂಬದ ಗಾರ್ಸಿನಿಯ ಮೊರೆಲ ಎಂಬ ವೃಕ್ಷ. ಇದಕ್ಕೆ ಅರದಾಳ, ಕಣ್‍ಕುಟಿಗ, ದೇವನಹುಳಿ ಎಂಬ ಹೆಸರುಗಳೂ ಇವೆ. ಇದು ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಚಿಕ್ಕ ಗಾತ್ರದ ಮರ, ಇದರ ಅಂಟು ಔಷದಿಗೂ ಬಣ್ಣಕ್ಕೂ ಉಪಯುಕ್ತವಾಗಿದೆ; ಕ್ರಿಮಿನಾಶಕವೂ ಹೌದು. ಇದರ ವಿಶೇಷ ವ್ಯವಸಾಯ ಥೈಲೆಂಡ್ ಪ್ರದೇಶಗಳಲ್ಲಿದೆ. ಮಳೆಗಾಲದಲ್ಲಿ ಕಾಂಡದಲ್ಲಿ ಗೀರಿ ಅಂಟನ್ನು ಶೇಖರಿಸುತ್ತಾರೆ. ಒಣಗಿದ ಅಂಟನ್ನು ನೀರಿಗೆ ಹಾಕಿದರೆ ಹಳದಿ ಬಣ್ಣದ ಜಿಡ್ಡುದ್ರವ ಬರುತ್ತದೆ. ಅಮೋನಿಯ ದ್ರಾವಣ ಹಾಕಿದಾಗ ಕರಗಿ ಬರುವ ಹಳದಿ ದ್ರವ ಜಿಂಕ್ ಅಲ್ಯೂಮಿನಿಯಮ್, ಸುಣ್ಣ ಇತ್ಯಾದಿ ಬಣ್ಣಗಚ್ಚುಗಳಿಂದ ಹಳದಿ ಅಥವಾ ಕೆಂಪು ಬಣ್ಣಕೊಡುತ್ತದೆ. ಬೀಜದ ಎಣ್ಣೆ ದೀಪ ಉರಿಸಲು ಬರುತ್ತದೆ. ಕೊಬ್ಬನ್ನು ತುಪ್ಪದಂತೆ ಬಳಸುತ್ತಾರೆ.

(ಎ.ಕೆ.ಎಸ್.)

  1. Garcinia morella on www.globinmed.com
лиценца
cc-by-sa-3.0
авторски права
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
изворно
посети извор
соработничко мреж. место
wikipedia emerging languages

ಅರಿಸಿನ ಗುರುಗಿ: Brief Summary ( канадски )

добавил wikipedia emerging languages

ಅರಿಸಿನ ಗುರುಗಿ : ಗಟ್ಟಿಫೆರೀ (ಕ್ಲೂಸಿಯೇಸೀ) ಕುಟುಂಬದ ಗಾರ್ಸಿನಿಯ ಮೊರೆಲ ಎಂಬ ವೃಕ್ಷ. ಇದಕ್ಕೆ ಅರದಾಳ, ಕಣ್‍ಕುಟಿಗ, ದೇವನಹುಳಿ ಎಂಬ ಹೆಸರುಗಳೂ ಇವೆ. ಇದು ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಚಿಕ್ಕ ಗಾತ್ರದ ಮರ, ಇದರ ಅಂಟು ಔಷದಿಗೂ ಬಣ್ಣಕ್ಕೂ ಉಪಯುಕ್ತವಾಗಿದೆ; ಕ್ರಿಮಿನಾಶಕವೂ ಹೌದು. ಇದರ ವಿಶೇಷ ವ್ಯವಸಾಯ ಥೈಲೆಂಡ್ ಪ್ರದೇಶಗಳಲ್ಲಿದೆ. ಮಳೆಗಾಲದಲ್ಲಿ ಕಾಂಡದಲ್ಲಿ ಗೀರಿ ಅಂಟನ್ನು ಶೇಖರಿಸುತ್ತಾರೆ. ಒಣಗಿದ ಅಂಟನ್ನು ನೀರಿಗೆ ಹಾಕಿದರೆ ಹಳದಿ ಬಣ್ಣದ ಜಿಡ್ಡುದ್ರವ ಬರುತ್ತದೆ. ಅಮೋನಿಯ ದ್ರಾವಣ ಹಾಕಿದಾಗ ಕರಗಿ ಬರುವ ಹಳದಿ ದ್ರವ ಜಿಂಕ್ ಅಲ್ಯೂಮಿನಿಯಮ್, ಸುಣ್ಣ ಇತ್ಯಾದಿ ಬಣ್ಣಗಚ್ಚುಗಳಿಂದ ಹಳದಿ ಅಥವಾ ಕೆಂಪು ಬಣ್ಣಕೊಡುತ್ತದೆ. ಬೀಜದ ಎಣ್ಣೆ ದೀಪ ಉರಿಸಲು ಬರುತ್ತದೆ. ಕೊಬ್ಬನ್ನು ತುಪ್ಪದಂತೆ ಬಳಸುತ್ತಾರೆ.

(ಎ.ಕೆ.ಎಸ್.)

Garcinia morella on www.globinmed.com
лиценца
cc-by-sa-3.0
авторски права
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
изворно
посети извор
соработничко мреж. место
wikipedia emerging languages