ಕುದಿಪ್ಪು ಬಂಗುಡೆ ಜಾತಿಗೆ ಸೇರಿದ ಎಲುಬು ಮೀನು (ಲ್ಯಾಕ್ಟೇರಿಯಸ್).ಆಂಗ್ಲ ಭಾಷೆಯಲ್ಲಿ ಇದನ್ನು ಫಾಲ್ಸ್ ಟ್ರವೆಲ್ಲಿ ಎಂದು ಕರೆಯುತ್ತಾರೆ.
ಇದು ಲ್ಯಾಕ್ಟರಿಡೆ ಕುಟುಂಬದ ಸದ್ಯದ ಏಕೈಕ ಸದಸ್ಯ.
ಭಾರತ ಮತ್ತು ಚೀನಾ ಸಮುದ್ರಗಳಲ್ಲಿ ಇದರ ವಾಸ. ಪೆಸಿಫಿಕ್ ಮಹಾಸಾಗರದ ಬಂಡೆ ದ್ವೀಪಗಳಲ್ಲೂ ಇದನ್ನು ಕಾಣಬಹುದು. ಈ ಸಮುದ್ರತೀರಗಳಲ್ಲಿ ವಾಸಿಸುವ ಜನರು ಕುದಿಪ್ಪು ಮೀನನ್ನು ಹಸಿಯಾಗಿಯೋ ಉಪ್ಪುಹಾಕಿ ಒಣಗಿಸಿಯೋ ಆಹಾರವಾಗಿ ಉಪಯೋಗಿಸುತ್ತಾರೆ. ಈ ಮೀನು ಸ್ವಲ್ಪ ಸಪ್ಪೆಯಾಗಿರುವುದರಿಂದ ತಿನ್ನಲು ಅಷ್ಟು ರುಚಿಯಾಗಿರುವುದಿಲ್ಲ. ಮಲಬಾರಿನ ಕ್ವಿಲಾನ್ ಸಮುದ್ರತೀರದಲ್ಲಿ ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಮಾತ್ರ ಈ ಮೀನುಗಳು ಹಿಂಡು ಹಿಂಡಾಗಿ ಬರುತ್ತವೆ. ಉಳಿದ ತಿಂಗಳುಗಳಲ್ಲಿ ಅವು ಅತಿ ವಿರಳ.
ಮೀನಿನ ಶರೀರ ಸ್ವಲ್ಪಮಟ್ಟಿಗೆ ನೀಳ ಚಪ್ಪಟೆ. ಇದರ ಉದ್ದ ಸುಮಾರು 10", ತಲೆಯ ಉದ್ದ 1/4", ಬಾಲ 1/4". ಶರೀರದ ಎತ್ತರ ಆ ಪ್ರಾಣಿಯ ಒಟ್ಟು ಉದ್ದದ 2/7 ಭಾಗದಷ್ಟಿರುತ್ತದೆ. ಮೀನಿನ ರೂಪರೇಖೆ ಬೆನ್ನಿನ ಮೇಲಿರುವ ಈಜುರೆಕ್ಕೆಯ ತನಕ ಕ್ರಮವಾಗಿ ಉಬ್ಬಿರುತ್ತದೆ. ಬಾಯಿ ದೊಡ್ಡದು ಮತ್ತು ಓರೆ. ಮೇಲುದವಡೆ ಕಣ್ಣಿನ ಮಧ್ಯದ ಕೆಳಭಾಗದ ತನಕ ಚಾಚಿಕೊಂಡಿದೆ. ಮೀನು ತನ್ನ ಬಾಯಿಯನ್ನು ಮುಚ್ಚಿಕೊಂಡಿರುವಾಗ ಅದರ ಕೆಳದವಡೆಯ ತುದಿ ಮೇಲ್ಭಾಗದಲ್ಲಿರುವಂತೆ ಕಾಣುತ್ತದೆ. ತಲೆಯ ಹಿಂಭಾಗದ ಶಿಖೆ ಪರಿಪೂರ್ಣವಾಗಿ ಬೆಳೆದಿರುತ್ತದೆ. ಕೆಳದವಡೆಯ ಪಾಶ್ರ್ವದಲ್ಲಿ ಒಂದೇ ಪಙÂ್ತಯ ಬಾಗಿರುವ ಹಲ್ಲುಗಳಿವೆ. ನಾಲಗೆ, ಪಾಲಟೈನ್ ಮತ್ತು ವೋಮರ್ (ಬಾಯಂಗಳ) ಮೂಳೆಗಳಲ್ಲಿ ಹಲ್ಲುಗಳಿರುತ್ತವೆ. ಮ್ಯಾಕ್ಸಿಲ ಮೂಳೆಗಳಲ್ಲಿ ಹಲ್ಲುಗಳಿರುವುದಿಲ್ಲ. ನೀರಿನಲ್ಲಿ ಸರಾಗವಾಗಿ ಚಲಿಸಲು ಈ ಮೀನಿಗೆ ಮುಳ್ಳುಗಳಿರುವ ಈಜುರೆಕ್ಕೆಗಳಿವೆ. ಇವು ಪಾರದರ್ಶಕ. ಬೆನ್ನಿನ ಮೇಲಿರುವ ಮೊದಲನೆಯ ಈಜುರೆಕ್ಕೆಯ ಮುಳ್ಳು ಬಲಹೀನವಾಗಿದೆ; ಮೂರನೆಯದು ಉದ್ದವಾಗಿದೆ. ಈಜುರೆಕ್ಕೆಯ ಪೊರೆ ಕಚ್ಚುಕಚ್ಚಾಗಿದೆ. ಎರಡನೆಯ ಈಜುರೆಕ್ಕೆ ಮುಂಭಾಗದಲ್ಲಿ ಎತ್ತರವೂ ಮೊದಲನೆಯ ಈಜುರೆಕ್ಕೆಗೆ ಸಮವೂ ಆಗಿದೆ; ಇದರ ಎತ್ತರ ಇಡೀ ಶರೀರದ ಎತ್ತರದಲ್ಲಿ ಅರ್ಧದಷ್ಟಿದೆ. ಗುದದ್ವಾರದ ಬಳಿ ಇರುವ ಈಜುರೆಕ್ಕೆ ಬೆನ್ನಿನ ಮೇಲಿರುವ ಎರಡನೆಯ ಈಜುರೆಕ್ಕೆಯನ್ನು ಹೋಲುತ್ತದೆ. ಮೀನಿನ ಶರೀರದ ಹೊರಗಡೆ ಸೂಕ್ಷ್ಮವಾದ ಸೈಕ್ಲಾಯಿಡ್ ಹುರುಪೆಗಳಿವೆ. ಇವುಗಳ ಹೊದಿಕೆ ಎಲ್ಲ ಮೀನುಗಳಲ್ಲಿರುವಂತೆ ಈ ಮೀನಿನಲ್ಲಿಯೂ ತ್ವರಿತ ಚಲನೆಗೆ ಸಹಾಯಕವಾಗಿರುವುದಲ್ಲದೆ ಶರೀರಕ್ಕೆ ರಕ್ಷಣೆಯನ್ನೂ ನೀಡುತ್ತದೆ. ಪಾಶ್ರ್ವಿಕ ಜ್ಞಾನೇಂದ್ರಿಯಗಳು ಚಿಕ್ಕ ಹಾಗೂ ಪ್ರತ್ಯೇಕವಾದ ಕೊಳವೆಗಳಲ್ಲಿ ಇವೆ. ಹೊಟ್ಟೆಯಲ್ಲಿ ಹತ್ತು ಬೆನ್ನೆಲುಬುಗಳೂ ಬಾಲದಲ್ಲಿ ಹದಿನಾಲ್ಕು ಬೆನ್ನೆಲುಬುಗಳೂ ಇವೆ. ಇವು ಪೋಣಿಸಿದ ಮಣಿಗಳಂತೆ ಕಾಣುತ್ತವೆ.ಇದರ ಉದ್ದ ಸುಮಾರು ೧೬ ಇಂಚಿನ ವರೆಗೆ ಇರುವುದಾದರೂ ಸಾಮಾನ್ಯವಾಗಿ ೧೨ ಇಂಚು ಇರುತ್ತದೆ.
ಸಮುದ್ರದಲ್ಲಿ ತೇಲುತ್ತಿರುವ ಅಸಂಖ್ಯಾತ ಜೀವರಾಶಿಗಳು ಈ ಮೀನುಗಳ ಆಹಾರ.
ಕುದಿಪ್ಪು ಬಂಗುಡೆ ಜಾತಿಗೆ ಸೇರಿದ ಎಲುಬು ಮೀನು (ಲ್ಯಾಕ್ಟೇರಿಯಸ್).ಆಂಗ್ಲ ಭಾಷೆಯಲ್ಲಿ ಇದನ್ನು ಫಾಲ್ಸ್ ಟ್ರವೆಲ್ಲಿ ಎಂದು ಕರೆಯುತ್ತಾರೆ.