ಕೆಂಪು ಚಿಟ್ಟುಕೋಳಿ (ಗ್ಯಾಲೋಪೆರ್ಡಿಕ್ಸ್ ಸ್ಪೇಡೀಷಿಯಾ) ಫೆಸೆಂಟ್ ಕುಟುಂಬದ ಸದಸ್ಯ ಮತ್ತು ಭಾರತದಲ್ಲಿ ಮಾತ್ರವೆ ಕಂಡು ಬರುವ ಹಕ್ಕಿ. ಇದು ಕಾಡುಗಳಲ್ಲಿ ಇರುವ ಒಂದು ಬಹಳ ರಹಸ್ಯವಾದ ಹಕ್ಕಿ. ಅಂದರೆ ಇದನ್ನು ನೋಡುವುದು ಬಹಳ ಕಷ್ಟ. ಈ ಹಕ್ಕಿಯು ಒಂದು ವಿಶಿಷ್ಟ ಕರೆಯನ್ನು ಹೊಂದಿದೆ. ಇದು ಕೆಂಪು ಮತ್ತು ಉದ್ದನೆಯ ಬಾಲದ ಕೋಳಿಯಂತಿರುತ್ತದೆ. ಕಾಲಿನ ಮೇಲೆ ೨-೩-ಮುಳ್ಳುಗಳನ್ನು (ಚಿಟ್ಟು) ಹೊಂದಿರುತ್ತದೆ.
ಈ ಹಕ್ಕಿಯ ಒಟ್ಟಾರೆ ಬಣ್ಣ ಕೆಂಗಂದು. ಇತರೆ ದೊಡ್ಡ ಪಕ್ಷಿಗಳ ರೀತಿಯ ಈ ಹಕ್ಕಿಯು ಸ್ವಲ್ಪ ಉದ್ದ ಬಾಲವನ್ನು ಹೊಂದಿರುತ್ತದೆ. ಮೇಲಿನ ಭಾಗಗಳು ಮುಖ ಮತ್ತು ಕುತ್ತಿಗೆ ಹೆಚ್ಚು ಬೂದು ಬಣ್ಣದ್ದು. ಕೆಳಭಾಗಗಳು ಕಂದು ಕಂದು ಬಣ್ಣ ಮತ್ತು ದಟ್ಟ ಬಣ್ಣದ ಗೆರೆಗಳನು ಒಳಗೊಂಡಿರುತ್ತದೆ. ಮರಿಗಳ ತಲೆಯ ಉದ್ದಕ್ಕೂ ಒಂದು ದಾಲ್ಚಿನ್ನಿ ಬಣ್ಣದ ಕಂದು ತಲೆ ಮತ್ತು ಒಂದು ಕಪ್ಪು ಕಂದು ಬಣ್ಣದ ಪಟ್ಟೆಯನ್ನು ಹೊಂದಿರುತ್ತವೆ.
ಈ ಜಾತಿಯ ಹಕ್ಕಿಗಳು ಸಾಮಾನ್ಯವಾಗಿ ಬೆಟ್ಟದ ಪ್ರದೇಶಗಳು, ಪೊದೆಗಳು ಶುಷ್ಕ ಮತ್ತು ತೇವಾಂಶವುಳ್ಳ-ಎಲೆಯುದುರುವ ಭಾರತದ ಕಾಡುಗಳಲ್ಲಿ ಕಂಡು ಬರುತ್ತದೆ.
ಕೆಂಪು ಚಿಟ್ಟುಕೋಳಿಗಳು ಸಾಮಾನ್ಯವಾಗಿ ಮೂರರಿಂದ ಐದು ಹಕ್ಕಿಗಳ ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಇವುಗಳು ನಡೆಯುವಾಗ, ದೇಶೀಯ ಕೋಳಿಗಳಂತೆ ಎತ್ತರಿಸಿ ನಡೆಯುತ್ತವೆ. ಇದರೆ ಮಖ್ಯ ಆಹಾರ ಮರಗಳಿಂದ ಉದುರಿದ ಬೀಜಗಳು, ಹಣ್ಣುಗಳು, ಮೃದ್ವಂಗಿಗಳು ಮತ್ತು ಕೀಟಗಳು. ಸಾಮಾನ್ಯವಾಗಿ ಸ್ವಲ್ಪ ದೂರ ಹಾರುವ ಮತ್ತು ವರ್ಷವಿಡೀ ಉತ್ತಮವಾಗಿ ನಿರ್ಧರಿಸಲಾದ ಪ್ರಾಂತ್ಯಗಳಲ್ಲೆ ಅವು ಉಳಿಯತ್ತವೆ ಮತ್ತು ಮರಗಳಲ್ಲಿ ವಿಶ್ರಮಿಸುತ್ತವೆ.
ಸಂತಾನೋತ್ಪತ್ತಿಯ ಋತುವು ಪ್ರಮುಖವಾಗಿ ಮಳೆಗಾಲದ ಮೊದಲು ಅಂದರೆ ಜೂನ್ ನಿಂದ ಜನವರಿವರೆಗೆ. ಈ ಹಕ್ಕಿಯು ನೆಲದ ಮೇಲೆ ಗೂಡುಕಟ್ಟುತ್ತದೆ ಮತ್ತು ಒಮ್ಮೆಲೆ ಮೂರರಿಂದ ಐದು ಮೊಟ್ಟೆಗಳನ್ನಿಡುತ್ತದೆ ಹಾಗೂ ಮೊಟ್ಟೆಗಳಿಗೆ ಕಾವು ಕೊಡುವ ಕೆಲಸ ಗಂಡಿನದು. (monogynous)