dcsimg

ಗೋಪೀ ಹಕ್ಕಿ ( Kannada )

tarjonnut wikipedia emerging languages

'ಗೋಪೀ ಹಕ್ಕಿ' (Malabar Whistling Thrush) ಮುಖ್ಯವಾಗಿ ಪಶ್ಚಿಮ ಘಟ್ಟ, ಪೂರ್ವ ಘಟ್ಟ ಮತ್ತು ಮಧ್ಯ ಭಾರತದಲ್ಲಿ ಕಂಡು ಬರುವ ಪಕ್ಷಿ.

ವೈಜ್ಞಾನಿಕ ಹೆಸರು

ಇದು ಮುಸಿಕ್ಯಾಪಿಡೇ ಕುಟುಂಬ, ಟರ್ಡಿನೇ ಉಪಕುಟುಂಬಕ್ಕೆ ಸೇರಿದ ಪಕ್ಷಿ. ಮೈಯೋಫೋನಸ್ ಹಾರ್ಸ್‌ಫೀಲ್ಡೀ ಎಂಬುದು ಇದರ ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಶ್ರೀವದ ಎಂದೂ ತುಳುವಿನಲ್ಲಿ ಗೋಪೀಪೀ ಎಂದೂ ಕರಯುತ್ತಾರೆ.

ಲಕ್ಷಣಗಳು

ಗೊರವಂಕಕ್ಕಿಂತ ಸ್ವಲ್ಪ ದೊಡ್ಡ ಪಕ್ಷಿ. ಮಿರುಗುವ ಕಡು ನೀಲ ಬಣ್ಣವಿದೆ. ಕೊಕ್ಕು, ಕಾಲುಗಳು ಕಪ್ಪಗಿರುತ್ತದೆ.

ಆವಾಸ

ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ನೆಲ, ಜಲಪಾತದ ಬಳಿ, ಮರಗಳಲ್ಲಿ ವಾಸಿಸುತ್ತವೆ. ಬೇರು, ಹುಲ್ಲುಗಳಿಂದ ಕೂಡಿದ ಬಟ್ಟಲಿನಾಕಾರದ ಗೂಡು ಕಟ್ಟಿ ಮಣ್ಣಿನ ಕವಚ ರಚಿಸುತ್ತವೆ.ಹಣ್ಣು ಮತ್ತು ಕೀಟಗಳು ಈ ಹಕ್ಕಿಗಳ ಆಹಾರ.

ಸಂತಾನೋತ್ಪತ್ತಿ

ಫೆಬ್ರವರಿ-ಆಗಸ್ಟ್ ತಿಂಗಳಲ್ಲಿ ಕಂದು ಚುಕ್ಕೆಗಳಿರುವ ೩/೪ ಮೊಟ್ಟೆಗಳಿಂದ ಮರಿ ಮಾಡುತ್ತವೆ.

ಆಧಾರ

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

  1. BirdLife International (2008). Myophonus horsfieldii. In: IUCN 2008. IUCN Red List of Threatened Species. Retrieved 12 December 2009.
  2. Delacour 1942 (Auk 146-264) writes "the proper spelling is Myiophoneus Temminck and Laugier, 1822 Myophonus T. and L., 1822 is an orthographic error, as well as Myophoneus in their tables, x859, while Myiophonus Agassiz, 1846, is an unnecessary emendation."
lisenssi
cc-by-sa-3.0
tekijänoikeus
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
alkuperäinen
käy lähteessä
kumppanisivusto
wikipedia emerging languages

ಗೋಪೀ ಹಕ್ಕಿ: Brief Summary ( Kannada )

tarjonnut wikipedia emerging languages

'ಗೋಪೀ ಹಕ್ಕಿ' (Malabar Whistling Thrush) ಮುಖ್ಯವಾಗಿ ಪಶ್ಚಿಮ ಘಟ್ಟ, ಪೂರ್ವ ಘಟ್ಟ ಮತ್ತು ಮಧ್ಯ ಭಾರತದಲ್ಲಿ ಕಂಡು ಬರುವ ಪಕ್ಷಿ.

lisenssi
cc-by-sa-3.0
tekijänoikeus
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
alkuperäinen
käy lähteessä
kumppanisivusto
wikipedia emerging languages