dcsimg

ಜೈಗೊಪೆಟಾಲಮ್ ( Kannada )

provided by wikipedia emerging languages

ಜೈಗೊಪೆಟಾಲಮ್ - ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಅಪ್ಪು ಸಸ್ಯ. ದೃಢಕಾಯವಾಗಿ ಬೆಳೆದು ಆಕರ್ಷಕವಾದ ಹೂಗಳನ್ನು ಬಿಡುವುದರಿಂದ ಇದನ್ನು ಅಲಂಕಾರಸಸ್ಯವಾಗಿ ಬೆಳೆಸಲಾಗುತ್ತದೆ. ಇದರ ತವರು ಬ್ರಜಿಲ್.

 src=
Zygopetalum crinitum

ಇದರಲ್ಲಿ ಸುಮಾರು 18 ಪ್ರಭೇದಗಳುಂಟು. ಇವುಗಳೆಲ್ಲವೂ ಮೂಲಿಕೆ ಮಾದರಿಯ ಬಿಡಗಳು. ಕಾಂಡ ಅಂಡಾಕಾರದ. ಇಲ್ಲವೆ ಉದ್ದುದ್ದನೆಯ ನಕಲಿ ಗೆಡ್ಡೆಯಾಗಿ (ಸ್ಯೂಡೊಬಲ್ಬ್) ಮಾರ್ಪಟ್ಟಿದೆ. ಎಲೆಗಳು ಗೆಡ್ಡಯ ತುದಿಯಿಂದ ಸಂಖ್ಯೆಯ ಎರಡು ಇಲ್ಲವೆ ಹಲವಾರು. ಹೂಗಳು ದೊಡ್ಡವು. ಸುಂದರವಾಗಿವೆ ಉದ್ದವಾದ ತೊಟ್ಟಿನ ಮೇಲೆ ಒಂಟೊಂಟಿಯಾಗಿ ಇಲ್ಲವೆ ಸರಳ ರೇಸಿಮ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪತ್ರಗಳೂ ದಳಗಳೂ ಬಲು ದೊಡ್ಡವು ಸುಮಾರು 2"-4" ಉದ್ದ ಇರುತ್ತವೆ. ಇವುಗಳ ಬಣ್ಣ ಹಸಿರು ಇಲ್ಲವೆ ಕಡು ಉದಾ-ಕಂದು. ಜೊತೆಗೆ ದಳಗಳ ಮೇಲೆ ಕಂದು ಬಣ್ಣದ ಮಚ್ಚೆಗಳಿರುವುದುಂಟು. ಇದರಿಂದ ಹೂಗಳು ಬಲು ಆಕರ್ಷಕವಾಗಿ ಕಾಣುತ್ತವೆ.

ಜೈಗೊಪೆಟಾಲಮನ್ನು ಸುಲಭವಾಗಿ ಬೆಳೆಸಬಹುದು. ಚೆನ್ನಾಗಿ ಕೊಳೆತ ಕಾಂಪೋಸ್ಟ್ ಗೊಬ್ಬರ, ನಾರಿನಂಥ ಹಾವಸೆ ಮತ್ತು ಇದ್ದಿಲುಗಳ ಮಿಶ್ರಣ ಹಾಕಿ ಕುಂಡಗಳಲ್ಲಿ ಬೆಳೆಸುವುದು ವಾಡಿಕೆ. ಸುತ್ತಲಿನ ಉಷ್ಣತೆ 60º — 70º ಈ. ಇದ್ದರೆ ಗಿಡದ ಬೆಳೆವಣಿಗೆ ಉತ್ತಮ. ನಕಲಿ ಗೆಡ್ಡೆಗಳ ತುಂಡುಗಳಿಂದ ಗಿಡವನ್ನು ವೃದ್ಧಿಸಬಹುದು. ತೋಟಗಾರಿಕೆಯಲ್ಲಿ ಹೆಸರುವಾಸಿಯಾಗಿರುವ ಪ್ರಭೇದಗಳು ಇವು-ರಾಸ್ಟ್ರೇಟಮ್ ಮೆಕೆಯಿ, ಗಾಟೆಯರಿ, ಕ್ರೈನಿಟಮ್, ಇಂಟರಮೀಡಿಯಮ್ ಮತ್ತು ಮ್ಯಾಕ್ಸಿಲೇರ್.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು