dcsimg

ಅಳಿಲು ( Kannada )

provided by wikipedia emerging languages
ಇದು ಸಂಪೂರ್ಣವಾದ ವಿವರಗಳ ಅಳಿಲು ಸಂತತಿಯ (ಸ್ಕಿಯುರಿಡೇ) ಬಗೆಗಿನ ಲೇಖನವಾಗಿದೆ. ಬಹುತೇಕ ಮರದ ಅಳಿಲುಗಳ ಪ್ರಭೇದಗಳನ್ನು ಬಳಸಿದ ಕಡೆ "ಅಳಿಲುಗಳು" ಎಂದು ಮತ್ತು ಉಳಿದೆಡೆ ಅಳಿಲು(ಅಸ್ಪಷ್ಟತೆಯ ನಿವಾರಣೆ) ಎಂದು ತಿಳಿಯಬೇಕು.

 src=
ಹಲವಾರು ಜಾತಿಯ ಅಳಿಲುಗಳು ಕೃಷ್ಣವರ್ಣ ಹೊಂದಿರುತ್ತವೆ. ಯುಎಸ್‌ಎ ಮತ್ತು ಕೆನಡಾದ ದೊಡ್ಡ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕಪ್ಪು ಅಳಿಲು.

ಅಳಿಲುಗಳು ಸಣ್ಣ ಅಥವಾ ಮಧ್ಯಮ ಗಾತ್ರದ ರೋಡೆಂಟ್‌ಗಳ ಸ್ಕಿಯುರಿಡೇ ಎಂದು ಕರೆಯಲಾಗುವ ದೊಡ್ಡ ಜಾತಿಗೆ ಸೇರಿವೆ. ಮರದ ಅಳಿಲುಗಳು, ನೆಲದಲ್ಲಿನ ಅಳಿಲುಗಳು, ಚಿಪ್-ಮುಂಕ್‌ಗಳು, ಮರ್ಮೊಟ್‌ಗಳು (ವುಡ್ ಚುಂಕ್‌ಗಳು ಇದರಲ್ಲಿ ಸೇರಿವೆ), ಹಾರುವ ಅಳಿಲುಗಳು ಮತ್ತು ಮೈದಾನದ ನಾಯಿಗಳು ಇದೇ ಜಾತಿಗೆ ಸೇರುತ್ತವೆ. ಅಳಿಲುಗಳ ಮೂಲ ಸ್ಥಳ ಅಮೆರಿಕ, ಯೂರಸಿಯ, ಮತ್ತು ಆಫ್ರಿಕಾ ನಂತರ ಆಸ್ಟ್ರೇಲಿಯಾಕ್ಕೆ ಪರಿಚಯಿಸಲಾಯಿತು ಸುಮಾರು ನಲವತ್ತು ಮಿಲಿಯನ್ ವರ್ಷಗಳ ಹಿಂದೆ ಅಳಿಲುಗಳು ಮೊದಲ ಬಾರಿಗೆ ಅಧಿಕೃತವಾಗಿ ಕಂಡದ್ದು ಇಯೊಸಿನ್‌ನಲ್ಲಿ, ಇವು ಬಹುತೇಕ ನೀರುನಾಯಿ ಮತ್ತು ಡೊರ್‌ಮೈಸ್ ಎಂಬ ಜಾತಿಗೆ ಸಂಬಂಧಿಸಿದ್ದು.

ಪದವ್ಯುತ್ಪತ್ತಿ

ಅಳಿಲು ಶಬ್ದವನ್ನು ಹಳೆ ಫ್ರೆಂಚ್‌ಎಸ್ಕುರೆಲ್ ಇಂದ ಅಂಗ್ಲೋ-ನಾರ್ಮನ್ಎಸ್‌ಕ್ವಿರೆಲ್ ಮುಖಾಂತರ ಅಧಿಕೃತವಾಗಿ 1327ರಲ್ಲಿ ಪಡೆಯಲಾಗಿದೆ. ಎಸ್ಕುರೆಲ್ ಎಂಬುದು ಲ್ಯಾಟಿನ್ಸೈಉರಸ ಹಾಗು ಇದನ್ನು ಗ್ರೀಕ್‌ನಿಂದ ಪಡೆದದ್ದು.[೧] ಈ ಶಬ್ಧ ಗ್ರೀಕ್‌ನ σκιουροςನಿಂದ ಬಂದದ್ದು , ಸ್ಕಿಔರೋಸ್ ಅಂದರೆ ಸಣ್ಣ ಬಾಲದ, ದಟ್ಟವಾದ ಪೊದೆಗಳಿರುವಲ್ಲಿ ಇರುವ ಸದಸ್ಯರಿಗೆ ಸಂಬಂದಿಸಿದ್ದು.[೨] 'ācweorna' ಎಂಬುದರ ಮೂಲ ಹಳೆಯ ಇಂಗ್ಲಿಷ್, ಇದು ಮಧ್ಯ ಇಂಗ್ಲಿಷ್ನಲ್ಲಿ (ಅಕ್ವೆನಾ ಎಂದು) ಬದಲಾಯಿಸುವ ಮುಂಚೆ ಮಾತ್ರ ಬಳಕೆಯಲ್ಲಿತ್ತು.[೧] ಹಳೆಯ ಇಂಗ್ಲಿಷ್ ಶಬ್ದದ ಮೂಲ ಜರ್ಮನ್‌ನ ಸಾಮುದಾಯಿಕವಾಗಿದೆ, ಜೊತೆಗೆ { ೧}ಒಂದೇ ಮೂಲದವುಗಳು ಉದಾಹರಣೆಗೆ ಜರ್ಮನ್‌Eichhorn /Eichhörnchen ಮತ್ತು ನಾರ್ವೆಯ ಎಕೊರ್ನ್

ಗುಣಲಕ್ಷಣಗಳು

 src=
ಪ್ರಾಚೀನ ರಾಕ್ಷಸ ಅಳಿಲಿನ ತಲೆಬುರುಡೆ (ರಟಫಾ ಜಾತಿ). ಕೆನ್ನೆ ಮೂಳೆಯ ಹೊರಭಾಗದಲ್ಲಿ ಮೇಲ್ತರದ ಸ್ಕಿಯುರೊಮಾರ್ಫಸ್ ಆಕಾರ ಹೊಂದಿರುವುದನ್ನು ಗಮನಿಸಿ.

ಅಳಿಲುಗಳು ಸಾಮಾನ್ಯವಾಗಿ ಸಣ್ಣ ಪ್ರಾಣಿಗಳು, ಅತಿ ಕಡಿಮೆ ಉದ್ದದ 7–10 cm (2.8–3.9 in) ಹಾಗು ತೂಕದ 10 g (0.35 oz), ಆಫ್ರಿಕದಲ್ಲಿನ ಗಿಡ್ಡ ಅಳಿಲು ಇಂದ ಉನ್ನತ ಪರ್ವತದ ಕಾಡಿನ ಪ್ರಾಣಿ 53–73 cm (21–29 in) ಉದ್ದ ಹಾಗು 5 to 8 kg (11 to 18 lb) ತೂಕದವರೆಗೂ ಇರುತ್ತವೆ. ಅಳಿಲುಗಳು ಸಾಮಾನ್ಯವಾಗಿ ತೆಳುವಾದ ದೇಹ, ದಟ್ಟವಾದ ಬಾಲ ಹಾಗು ದೊಡ್ಡದಾದ ಕಣ್ಣುಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಅವುಗಳ ಚರ್ಮ ಮೆತ್ತಗೆ ರೇಷ್ಮೆಯಂತೆ ಇರುತ್ತದೆ, ಅಲ್ಲದೆ ಇತರೆ ಕೆಲವು ಪ್ರಬೇಧಗಳಿಗಿಂತ ದಪ್ಪವೇ ಆಗಿರುತ್ತದೆ. ಬೇರೆ ಬೇರೆ ವರ್ಗದ ಅಳಿಲುಗಳ ಬಣ್ಣಗಳ ನಡುವೆ ತುಂಬಾ ವ್ಯತ್ಯಾಸ ಇರುತ್ತದೆ. ಹಿಂಭಾಗದಲ್ಲಿರುವ ಕಾಲುಗಳು ಮುಂಭಾಗದ ಕಾಲುಗಳಿಗಿಂತ ಉದ್ದವಿರುತ್ತವೆ ಹಾಗು ಪ್ರತಿ ಪಾದದಲ್ಲಿ ನಾಲ್ಕು ಅಥವಾ ಐದು ಬೆರಳುಗಳಿರುತ್ತವೆ. ಮುಂಭಾಗದ ಕಾಲಿನ ಪಾದದಲ್ಲಿ ಹೆಬ್ಬೆರಳು ಇರುತ್ತದೆ, ಅಲ್ಲದೆ ಇದು ಕಡಿಮೆ ಬೆಳವಣಿಗೆ ಹೊಂದಿರುತ್ತದೆ. ಪಾದದ ಕೆಳಮೇಲ್ಮೈನಲ್ಲಿ ಮೆತ್ತನೆಯ ಪ್ಯಾಡ್ ಇರುತ್ತದೆ.[೩] ಅತಿ ಎತ್ತರ ವಲಯದ ಗಾಳಿಯಿಲ್ಲದ ಪ್ರದೇಶಗಳನ್ನು ಬಿಟ್ಟು ಬಹುತೇಕ ಎಲ್ಲ ಉಷ್ಣವಲಯದ, ಮಳೆಕಾಡಿನಿಂದ ಹಿಡಿದು ಕಡಿಮೆ ಗಾಳಿಯಿರುವ ಮರುಭೂಮಿ ಪ್ರದೇಶಗಳಲ್ಲೂ ಅಳಿಲುಗಳು ಕಾಣಸಿಗುತ್ತವೆ. ಇವುಗಳು ಬಹುಮುಖ್ಯವಾಗಿ ಹುಲ್ಲು ತಿನ್ನುವ ಪ್ರಾಣಿಗಳಾಗಿದ್ದು ಕಾಳು, ಕಡಿಗಳನ್ನು ತಿನ್ನುತ್ತವೆ, ಆದರೆ ಹಲವು ಸಣ್ಣ ಹುಳುಗಳನ್ನು ಮತ್ತು ಚಿಕ್ಕ ಪ್ರಾಣಿಗಳನ್ನು ತಿನ್ನುತ್ತವೆ. ದೊಡ್ಡ ಕಣ್ಣುಗಳ ಕಾರಣದಿಂದ ಅಳಿಲುಗಳ ದೃಷ್ಟಿ ತುಂಬಾ ಉತ್ತಮವಾಗಿದೆ, ಅಲ್ಲದೆ ಗಿಡಗಳಲ್ಲಿ ವಾಸಿಸುವ ಪ್ರಭೇದಗಳಿಗೆ ಇದು ತುಂಬಾ ಮುಖ್ಯ. ಇವುಗಳು ಹಿಡಿಯಲು ಹಾಗು ಹತ್ತಲು ತುಂಬಾ ಸಾಮರ್ಥ್ಯವುಳ್ಳ ಹಾಗು ಗಟ್ಟಿಮುಟ್ಟಾದ ಕಾಲುಗುರುಗಳನ್ನು ಹೊಂದಿವೆ.[೪] ಬಹುತೇಕವುಗಳು ಕಾಲು ಹಾಗು ಪಾದದ ಮೇಲೆ ಬಿರುಗೂದಲುಗಳನ್ನು ಹಾಗು ಒಳ್ಳೆಯ ಸ್ಪರ್ಶ ಜ್ಞಾನವನ್ನು ಹೊಂದಿವೆ.[೩] ಅಳಿಲುಗಳ ಹಲ್ಲುಗಳು ರೋಡೆಂಟ್ ರೀತಿಯಲ್ಲಿವೆ, ಅಗೆಯಲು ಅನುಕೂಲವಾಗುವ ರೀತಿಯಲ್ಲಿ ಜೀವನಪರ್ಯಂತ ಬೆಳೆಯುವ ಬಾಚಿಹಲ್ಲುಗಳನ್ನೂ ಹೊಂದಿವೆ, ಹಾಗು ಗಲ್ಲದ ಬಳಿಯ ಹಲ್ಲುಗಳು ಅಗಲವಾದ ಅಥವಾ ಕಿರಿದಾದ ಸಂದುಗಳನ್ನೂ ಹೊಂದಿವೆ. ಅಳಿಲುಗಳು ವಿಶೇಷವಾದ ಹಲ್ಲುಗಳ ರಚನೆಯನ್ನು ಹೊಂದಿವೆ:

  1. REDIRECT Template:Dentition

ನಡವಳಿಕೆ

ಅಳಿಲುಗಳು ಅವುಗಳ ತಳಿಯನ್ನ ಅವಲಂಬಿಸಿ ಮೂರರಿಂದ ಆರು ತಿಂಗಳವರೆಗೆ, ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮರಿ ಹಾಕುತ್ತವೆ. ಎಳೆಯ ಹುಟ್ಟಿದ ಮರಿಗಳು, ಕೂದಲುಗಳಿಲ್ಲದ, ಹಲ್ಲುಗಳಿಲ್ಲದೆ, ಅಸಾಹಾಯಕ ಸ್ಥಿತಿ ಮತ್ತು ಕುರುಡಾಗಿ ಇರುತ್ತವೆ. ಬಹುತೇಕ ಎಲ್ಲ ಪ್ರಭೇದಗಳಲ್ಲು, ಹೆಣ್ಣು ಎಳೆಯ ಮರಿಗಳನ್ನು ಆರರಿಂದ ಹತ್ತು ತಿಂಗಳುಗಳ ವರೆಗೆ ಪೋಷಿಸುತ್ತವೆ. ಮತ್ತು ಮೊದಲ ವರ್ಷದಲ್ಲಿ ಅವು ಲೈಂಗಿಕವಾಗಿ ಪಕ್ವವಾಗುತ್ತವೆ. ನೆಲದಲ್ಲಿ ವಾಸಿಸುವ ಪ್ರಭೇದಗಳು ಸಮಾಜಮುಖಿ ಪ್ರಾಣಿಗಳು, ಇವು ಬಹುತೇಕ ಅಭಿವೃದ್ದಿ ಹೊಂದಿದ ಪ್ರದೇಶಗಲ್ಲಿ ವಾಸಿಸುತ್ತವೆ. ಆದರೆ ಮರದಲ್ಲಿ ವಾಸಿಸುವ ಜೀವಿಗಳು ಒಂಟಿಯಾಗಿರುತ್ತವೆ.[೩] ನೆಲದ ಮತ್ತು ಗಿಡದ ಅಳಿಲುಗಳು ದೈನಿಕ ಚಟುವಟಿಕೆಯ ಲಕ್ಷಣಗಳನ್ನು, ಹಾಲು ಉತ್ಪಾದಿಸುವ ಹಾರುವ ಅಳಿಲುಗಳು ಹಾಗು ಅವುಗಳ ಸಂತತಿಯ ಅಳಿಲುಗಳು ಬೇಸಿಗೆಯಲ್ಲಿ ಚಟುವಟಿಕೆಯಿಂದ ಇರುವುದನ್ನು ಹೊರತುಪಡಿಸಿ ಇತರೆ ಹಾರುವ ಅಳಿಲುಗಳು ರಾತ್ರಿ ಚಟುವಟಿಕೆಯನ್ನು ಹೊಂದಿರುತ್ತವೆ.[೫]

ಆಹಾರವನ್ನು ನೀಡುವುದು

ಮೊಲ ಅಥವಾ ಜಿಂಕೆಗಳ ಹಾಗೆ ಸೆಲ್ಯುಲೋಸ್ ಅನ್ನು ಜೀರ್ಣ ಮಾಡಿಕೊಳ್ಳಲಾಗುವುದಿಲ್ಲ ಮತ್ತು ಪ್ರೋಟಿನ್, ಕಾರ್ಬೋಹೈಡ್ರೇಟ್ ಹಾಗೂ ಕೊಬ್ಬಿನಂಶ ಜಾಸ್ತಿ ಇರುವ ಆಹಾರದ ಮೇಲೆಯೇ ಅವಲಂಬಿಸಿರುತ್ತದೆ. ತಣ್ಣನೆಯ ಪ್ರದೇಶದಲ್ಲಿ, ಬೇಗ ಹೊರ ಹೊರಡುವುದು ಅಳಿಲುಗಳಿಗೆ ಅತಿ ಕಷ್ಟದಾಯಕ ಸಮಯ, ಏಕೆಂದರೆ ಇ ಸಮಯದಲ್ಲಿ ಬಿತ್ತಿರುವ ಕಾಳುಗಳು ಮಳಕೆಯೋಡೆಯಲು ಶುರುವಾಗಿರುತ್ತದೆ ಅಲ್ಲದೆ ಹೊಸ ಆಹಾರದ ಮೂಲಗಳಿನ್ನು ದೊರಕಿರುವುದಿಲ್ಲ. ಈ ಸಮಯದಲ್ಲಿ ಅಳಿಲುಗಳು ಮರಗಳ ಮೊಗ್ಗುಗಳ ಮೇಲೆ ತುಂಬಾ ಅವಲಂಬಿತವಾಗಿರುತ್ತವೆ. ಅಳಿಲುಗಳಿಗೆ ಬಹುತೇಕ ಪೋಷಕಾಂಶಗಳು ವಿವಿಧ ಗಿಡದ ಮೂಲಗಳಾದ ಕಾಯಿಯಿಂದ, ಬೀಜಗಳಿಂದ, ಕಾನಿಫೆರ್ ತುದಿಯಿಂದ, ಹಣ್ಣುಗಳಿಂದ, ನಾಯಿಕೊಡೆ ಮತ್ತು ಹಸಿರು ತರಕಾರಿಗಳಿಂದ ದೊರಕುತ್ತವೆ. ಹೀಗಿದ್ದರು ಹಸಿವೆಯಾದಾಗ ಕೆಲವು ಅಳಿಲುಗಳು ಮಾಂಸವನ್ನು ತಿನ್ನುತ್ತವೆ.[೬] ಅಳಿಲುಗಳು ಸಾಮಾನ್ಯವಾಗಿ ಹುಳುಗಳನ್ನೂ, ತತ್ತಿಗಳನ್ನು, ಸಣ್ಣ ಪಕ್ಷಿಗಳನ್ನೂ, ಸಣ್ಣ ಹಾವುಗಳನ್ನೂ ಮತ್ತು ಚಿಕ್ಕದಾದ ಪ್ರಾಣಿಗಳನ್ನು ಸೇವಿಸುತ್ತವೆ. ವಾಸ್ತವವಾಗಿ ಕೆಲವು ಉಷ್ಣವಲಯದಲ್ಲಿನ ಪ್ರಭೇದಗಳು ಬಹುತೇಕ ಪೋಷಕಾಂಶಗಳನ್ನು ಕೀಟಗಳಿಂದ ಪಡೆಯುತ್ತವೆ. ನೆಲದಲ್ಲಿನ ಬಹುತೇಕ ಅಳಿಲುಗಳ ಪ್ರಭೇದಗಳು, ಅದರಲ್ಲೂ ವಿಶೇಷವಾಗಿ ಹದಿಮೂರು ಗೆರೆಗಳಿರುವ ನೆಲದ ಅಳಿಲುಗಳು ದರೋಡೆಕೋರ ಅಳಿಲುಗಳಾಗಿರುವುದನ್ನು ಗಮನಿಸಬಹುದು.[೭] ಉದಾಹರಣೆಗೆ ಬೈಲೆಯ್ ಎಂಬ ಹದಿಮೂರು ಗೆರೆಗಳನ್ನು ಹೊಂದಿರುವ ನೆಲದ ಅಳಿಲು ಸಣ್ಣ ಕೋಳಿಗಳನ್ನು ಬೇಟೆಯಾಡುತ್ತವೆ.[೮] ವಿಸ್ಟ್ರಂಡ್ ಎಂಬಾತ ಕೆಲವು ಪ್ರಭೇದಗಳು ಆಗತಾನೆ ಕೊಂದ ಹಾವುಗಳನ್ನು ತಿನ್ನುವುದನ್ನು ದಾಖಲಿಸಿದ್ದಾನೆ.[೯] ವ್ಹಿಟೇಕರ್ ಎಂಬಾತ ಹದಿಮೂರು ಗೆರೆಗಳುಳ್ಳ ನೆಲದ 139 ಅಳಿಲುಗಳ ಹೊಟ್ಟೆಗಳನ್ನು ಪರೀಕ್ಷಿಸಿ, ಅವುಗಳಲ್ಲಿ ನಾಲ್ಕು ಪ್ರಭೇದಗಳಲ್ಲಿ ಪಕ್ಷಿಯ ಮಾಂಸವನ್ನು, ಒಂದರಲ್ಲಿ ಸಣ್ಣ ಬಾಲದ ಇಲಿಯನ್ನು ಕಂಡನು. ಬಾರ್ಡ್ ಲೀ ಎಂಬಾತ ಬಿಳಿ ಬಾಲದ ಎರಳೆ ಅಳಿಲಿನ 609 ಪ್ರಭೇದಗಳ ಪೈಕಿ 10% ಪ್ರಭೇದಗಳ ಹೊಟ್ಟೆಯಲ್ಲಿ ಕಶೇರುಕ ಪ್ರಾಣಿ, ಬಹುತೇಕ ಹಲ್ಲಿಗಳು ಮತ್ತು ಇಲಿ ಇರುವುದನ್ನು ದಾಖಲಿಸುತ್ತಾನೆ.[೧೦] ಮಾರ್ಗಾರ್ತ್ (1985) ಎಂಬಾತ ಬಿಳಿ ಬಾಲದ ಎರಳೆ ಅಳಿಲು ರೇಷ್ಮೆಯಂತಹ ಸಣ್ಣ ಇಲಿಯನ್ನು ಬೇಟೆಯಾಡಿ ತಿನ್ನುವದನ್ನು ಗಮನಿಸಿದ್ದಾನೆ.[೧೧]

ವಿಂಗಡಣೆ

 src=
ರತುಫಿನೇ ಜಾತಿಯ ನಸುಬೂದುಬಣ್ಣದ ರಾಕ್ಷಸ ಅಳಿಲು(ರಟಫಾ ಮ್ಯಾಕ್ರೊ‍ಉರಾ)
 src=
ಟೆರೊಮೈನಿಯ ದಕ್ಷಿಣದ ಹಾರುವ ಅಳಿಲು (ಗ್ಲಾಕೊಮಿಸ್ ವೊಲನ್ಸ್)
 src=
ಕ್ಯಲ್ಲೊಸಿಯುರಿನಿಯ ಪ್ರಿವೋಸ್ಟ್‌ನ ಅಳಿಲು (ಕ್ಯಲ್ಲೊಸಿಯುರಸ್ ಪ್ರಿವೋಸ್ಟಿ)
 src=
ಕ್ಸೆರಿನಿಯ ಪಟ್ಟೆಹೊಂದಿಲ್ಲದ ನೆಲದ ಅಳಿಲು (ಕ್ಸೆರಸ ರುಟಿಲಸ್)
 src=
ಮರ್ಮೊಟಿನಿಯ ಆಲ್ಪೈನ್ ಮರ್ಮೋಟ್ (ಮರ್ಮೊಟಾ ಮರ್ಮೊಟಾ)

ಅಳಿಲುಗಳನ್ನು ಪ್ರಮುಖವಾಗಿ 50 ಪಂಗಡಗಳು ಹಾಗು 280 ವರ್ಗಗಳೊಂದಿಗೆ, 5 ಉಪಪ್ರಬೇಧಗಳಾಗಿ ವಿಂಗಡಿಸಲಾಗಿದೆ. ಅತಿ ಹಳೆಯ ಅಳಿಲಿನ ಪಳಿಯುಳಿಕೆಯಾದ ಹೆಸ್ಪೆರೊಪೀಟ್ಸ್ ಅನ್ನು ಕಾಡ್ರೋನಿಯಾನ್ ಕಾಲದ (ಸುಮಾರು 40-35 ಮಿಲಿಯನ್ ವರ್ಷಗಳ ಹಿಂದೆ ಇಯೊಸಿನ್ ಕಾಲದ) ಇತ್ತೀಚಿನ ಹಾರುವ ಅಳಿಲುಗಳಿಗೆ ಹೋಲಿಸಬಹುದಾಗಿದೆ.[೧೨] ಇಯೊಸಿನ್ ಇಂದ ಮಿಯೊಸಿನ್ ಕಾಲವರೆಗೆ ವಿವಿಧ ಬಗೆಯ ಅಳಿಲುಗಳನ್ನು ಈಗ ಲಭ್ಯವಿರುವ ಅಳಿಲುಗಳೊಂದಿಗೆ ಹೋಲಿಕೆ ಮಾಡಲಾಗದು. ಇವುಗಳಲ್ಲಿ ಬಹುತೇಕ ಕೆಲವಾದರೂ ಹಳೆಯ ತಳಹದಿಯ "ಮೂಲದ ಅಳಿಲುಗಳ" (ಈಗಿರುವ ಎಲ್ಲ ಅಳಿಲುಗಳು ಒಂದೇ ಗುಂಪಿನ) ಸ್ವಲ್ಪ ಹೋಲಿಕೆಯನ್ನು ಹೊಂದಿವೆ. ಇವುಗಳ ಹಳೆಯ ಮತ್ತು ಪೂರ್ವದ, ವಿಭಾಗಗಳನ್ನು ಮತ್ತು ವೈವಿಧ್ಯಗಳನ್ನೂ ಗಮನಿಸಿದರೆ ಬಹುತೇಕ ಅಳಿಲುಗಳು ಉತ್ತರ ಅಮೆರಿಕದಿಂದ ಬಂದವು ಅನಿಸುತ್ತವೆ.[೧೩] ಇವುಗಳ ಹೊರತಾಗಿ ಕೆಲವೊಮ್ಮೆ ಕೆಲವು ಹಳೆಯ ಪಳಿಯುಳಿಕೆಗಳು, ಈಗಿನ ಅಳಿಲುಗಳ ಜೊತೆಗೆ ನೇರವಾದ ಸಂಬಂಧ ಹೊಂದಿರುತ್ತವೆ. ಇವುಗಳಲ್ಲಿ ಮುಖ್ಯವಾಗಿ ಮೂರು ತಲೆಮಾರುಗಳಿವೆ, ಅವುಗಲ್ಲಿ ರತುಫಿನೇ (ಪೂರ್ವದ ರಾಕ್ಷಸ ಅಳಿಲುಗಳು) ಸಹ ಒಂದು. ಇವುಗಳು ಏಷಿಯಾದ ಉಷ್ಣವಲಯದ ಅಂಚಿನ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಪ್ರಭೇದಗಳು. ಸ್ಕಿಯುರಿಲ್ಲಿನೇ ಪೀಳಿಗೆಯಲ್ಲಿ, ನಿಯೊಟ್ರೊಪಿಕಲ್ ಪಿಗ್ಮಿ ಅಳಿಲು ಮಾತ್ರ ದಕ್ಷಿಣ ಅಮೆರಿಕಾದ ಉಷ್ಣವಲಯದ ಅಂಚಿನ ಪ್ರದೇಶಗಳಲ್ಲಿ ಇವೆ. ಮೂರನೆಯ ತಲೆಮಾರಿನವುಗಳು ಬಹುತೇಕ ಇತರೆ ಎಲ್ಲ ಸಹ ಪಂಗಡಗಳನ್ನೂ ಹೊಂದಿದೆ ಹಾಗೂ ಇವು ಬಹುತೇಕ ಎಲ್ಲ ಕಡೆಯೂ ಕಾಣಸಿಗುತ್ತವೆ. ಈ ಸಿದ್ಧಾಂತದಿಂದ ಕಂಡುಬರುವುದೇನೆಂದರೆ ಬಹುತೇಕ ಎಲ್ಲ ಅಳಿಲುಗಳ ತಲೆಮಾರು ಮತ್ತು ಪಳಿಯುಳಿಕೆಗಳು ಉತ್ತರ ಅಮೇರಿಕಾದಲ್ಲಿ ಜೀವಿಸುತ್ತಿದ್ದವು, ಮೂರು ತಲೆಮಾರಿನ ಅಳಿಲುಗಳು ಅಲ್ಲಿಂದಲೇ ಶುರುವಾಗಿವೆ. ಒಂದು ವೇಳೆ ಅಳಿಲುಗಳು ಯೋರೋಸಿಯದಿಂದ ಬಂದಿದ್ದರೆ ಉದಾಹರಣೆಗೆ ಒಂದಾದರು ತಲೆಮಾರು ಆಫ್ರಿಕಾದಲ್ಲಿ ಕಂಡುಬರುತ್ತಿದ್ದವು, ಆದರೆ ಆಫ್ರಿಕಾದಲ್ಲಿನ ಅಳಿಲುಗಳು ತೀರಾ ಇತ್ತೀಚಿನ ಉಗಮ.[೧೩] ಅಳಿಲುಗಳ ಮುಖ್ಯವಾದ ಗುಂಪನ್ನು ಮೂರು ಭಾಗಗಳಾಗಿ ವಿಭಾಗಿಸಬಹುದು, ಇದರಲ್ಲೇ ಬಹುತೇಕ ಎಲ್ಲ ಉಪ ವಿಭಾಗಗಳು ಬರುತ್ತವೆ. ಸ್ಕಿಯುರಿನೇ, ಹಾರುವ ಅಳಿಲುಗಳನ್ನು (ಟೆರೊಮೈಯಿನಿ) ಹೊಂದಿದೆ, ಮತ್ತು ಸಿಯುರಿನಿ ಎಂಬುದು ಅಮೆರಿಕಾದ ಗಿಡದ ಅಳಿಲುಗಳಿಗೆ ಸಂಬಂಧಿಸಿದ್ದು, ಇವುಗಳ ಪೂರ್ವಕಾಲದನ್ನು ಬೇರೆ ಉಪಕುಟುಂಬ ಎಂದು ವಿಭಾಗಿಸಿದ್ದು ಈಗ ಸ್ಕಿಯುರಿನೇ ಕುಟುಂಬವೆಂದು ಪರಿಗಣಿಸಲಾಗಿದೆ. ದೇವದಾರು ಮರದ ಅಳಿಲುಗಳು (ಟಾಮಿಯಸಿರಸ್ ) ಬಹುತೇಕ ಮರದ ಅಳಿಲುಗಳ ವಂಶವಾಹಿಗೆ ಸೇರುತ್ತವೆ, ಅದರೂ ಹಾರುವ ಅಳಿಲಿನ ಹಾಗೆ ಕಾಣುತ್ತವೆ, ಆದ್ದರಿಂದ ಕೆಲವೊಮ್ಮೆ ಇವುಗಳನ್ನು ಬೇರೆಯ ಪಂಗಡವಾದ ಟಾಮಿಯಸಿರಿನಿ[೧೪] ಗೆ ಪರಿಗಣಿಸಲಾಗುವುದು. ಮುಖ್ಯವಾಗಿ ಅಳಿಲುಗಳ ಸಂತತಿಯನ್ನು ಮೂರು ವಿಭಾಗಗಳನ್ನಾಗಿ ವಿಭಾಗಿಸಲು ಭೌಗೋಳಿಕ ಮತ್ತು ಪರಿಸರಗಳ ಕಡೆಗೆ ಗಮನ ಕೊಡಬೇಕು. 70 ರಿಂದ 80 ಪ್ರಭೇದಗಳನ್ನೊಳಗೊಂಡ, ಮೂರರಲ್ಲಿ ಎರಡು ಸಹ ಕುಟುಂಬಗಳು ಬಹುತೇಕ ಸಮನಾದ ಗಾತ್ರವನ್ನು ಹೊಂದಿವೆ. ಮೂರನೆಯದು ಬಹುತೇಕ ಎರಡರಷ್ಟಿರುತ್ತದೆ. ಸಿಯುರಿನೇ, ವೃಕ್ಷಕ್ಕೆ ಸಂಬಂಧಿಸಿದ (ಮರದಲ್ಲಿ ವಾಸಿಸುವ) ಅಳಿಲುಗಳು ಬಹುತೇಕ ಅಮೇರಿಕಾದಲ್ಲಿ ಹಾಗೂ ಕಡಿಮೆ ಪ್ರಮಾಣದಲ್ಲಿ ಯುರೇಸಿಯಾದಲ್ಲಿ ಇವೆ. ಇನ್ನೊಂದು ಕಡೆ ಕ್ಯಲ್ಲೊಸಿಯುರಿನೇ ಎಂಬುದು ಬಹಳ ಹೋಲಿಕೆ ಇಲ್ಲದ ಎಷಿಯಾದ ಉಷ್ಣವಲಯದ ಅಂಚಿನ ಪ್ರದೇಶಗಳ ಅಳಿಲುಗಳು. ಇದು ವೃಕ್ಷಕ್ಕೆ ಸಂಬಂಧಿಸಿದ ಆದರೆ ದೈಹಿಕವಾಗಿ ವಿಶೇಷವಾದುದು ಮತ್ತು ಅವುಗಳ ಬಣ್ಣದ ಚರ್ಮದಿಂದಾಗಿ ನೋಡಲು ಬಹಳ "ಸೊಗಸಾಗಿರುತ್ತದೆ". ಕ್ಸೆರಿನೇ ಎಂಬುದು ದೊಡ್ಡ ಉಪಕುಟುಂಬ, ಇದು ಮುಖ್ಯವಾಗಿ ಭೌಮಿಕವಾದುವು(ನೆಲದಲ್ಲಿ ವಾಸಿಸುವ) ಹಾಗು ಇವುಗಳಲ್ಲಿ ಬಹು ಸಂಖ್ಯೆಯಲ್ಲಿ ಮರದ ಹಾಗು ಪ್ರಸಿದ್ಧ ಪ್ರಯರಿ ನಾಯಿಗಳು ಇರುತ್ತವೆ, ಜೊತೆಗೆ ಆಫ್ರಿಕಾದ ಮರದ ಅಳಿಲುಗಳನ್ನು ಹೊಂದಿವೆ, ಇವು ಬಹುತೇಕ ಇತರೆ ಒಟ್ಟಿಗೆ ಇರದ ಅಳಿಲುಗಳ ಹಾಗಲ್ಲದೆ ಗುಂಪಿನಲ್ಲಿ ವಾಸಿಸುವ ಅಳಿಲುಗಳು.[೧೩]

ಆಕರಗಳು

  1. ೧.೦ ೧.೧ "Squirrel". Online Etymology Dictionary. Retrieved 2008-02-07.
  2. ವ್ಹಿಟೇಕರ್ & ಎಲ್ಮನ್ (1980): 370
  3. ೩.೦ ೩.೧ ೩.೨ ಮಿಲ್ಟನ್ (1984)
  4. "ಸ್ಕ್ವಿರಲ್" - ಹೌಸ್ಟಫ್‌ವರ್ಕ್ಸ್
  5. Törmälä, Timo (1980). "Timing of circadian activity in the flying squirrel in central Finland". Acta Theriologica. 25 (32–42): 461–474. Retrieved 2007-07-11. Unknown parameter |coauthors= ignored (|author= suggested) (help)
  6. "Tree Squirrels". The Humane Society of the United States. Retrieved 2009-01-09.
  7. Friggens, M. (2002). "Carnivory on Desert Cottontails by Texas Antelope Ground Squirrels". The Southwestern Naturalist. 47 (1): 132–133. doi:10.2307/3672818.
  8. Bailey, B. (1923). "Meat-eating propensities of some rodents of Minnesota". Journal of Mammalogy. 4: 129.
  9. Wistrand, E.H. (1972). "Predation on a Snake by Spermophilus tridecemlineatus". American Midland Naturalist. 88 (2): 511–512. doi:10.2307/2424389.
  10. Bradley, W. G. (1968). "Food habits of the antelope ground squirrel in southern Nevada". Journal Of Mammalogy. 49 (1): 14–21. doi:10.2307/1377723.
  11. Morgart, J.R. (1985). "Carnivorous behavior by a white-tailed antelope ground squirrel Ammospermophilus leucurus". The Southwestern Naturalist. 30 (2): 304–305. doi:10.2307/3670745. Unknown parameter |month= ignored (help)
  12. ಎಮ್ರಿ, ಆರ್.ಜೆ. ಮತ್ತು ಕೊರ್ತ್, ಡಬ್ಲು.ಡಬ್ಲು. 2007. ಉತ್ತರ ಅಮೇರಿಕಾದ ಮಧ್ಯ-ಸೆನೋಜೋಯಿಕ್ ಕಾಲದ ಒಂದು ಹೊಸ ಜಾತಿಯ ಅಳಿಲು(ರೊಡೆನ್ಷಿಯಾ, ಸ್ಕಿಯುರಿಡೇ). ಜರ್ನಲ್ ಆಫ್ ವರ್ಟಿಬ್ರೇಟ್ ಪ್ಯಾಲೆಯಂಟಾಲಜಿ 27(3):693–698.
  13. ೧೩.೦ ೧೩.೧ ೧೩.೨ ಸ್ಟೆಪ್ಪನ್ & ಹ್ಯಾಮ್ (2006)
  14. ಸ್ಟೆಪ್ಪನ್ ಎಟ್ ಅಲ್. (2004), ಸ್ಟೆಪ್ಪನ್ & ಹ್ಯಾಮ್ (2006)

ಗ್ರಂಥಗಳಲ್ಲಿನ ಉಲ್ಲೇಖಗಳು

ಹೊರಗಿನ ಕೊಂಡಿಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಅಳಿಲು: Brief Summary ( Kannada )

provided by wikipedia emerging languages
ಇದು ಸಂಪೂರ್ಣವಾದ ವಿವರಗಳ ಅಳಿಲು ಸಂತತಿಯ (ಸ್ಕಿಯುರಿಡೇ) ಬಗೆಗಿನ ಲೇಖನವಾಗಿದೆ. ಬಹುತೇಕ ಮರದ ಅಳಿಲುಗಳ ಪ್ರಭೇದಗಳನ್ನು ಬಳಸಿದ ಕಡೆ "ಅಳಿಲುಗಳು" ಎಂದು ಮತ್ತು ಉಳಿದೆಡೆ ಅಳಿಲು(ಅಸ್ಪಷ್ಟತೆಯ ನಿವಾರಣೆ) ಎಂದು ತಿಳಿಯಬೇಕು.

 src= ಹಲವಾರು ಜಾತಿಯ ಅಳಿಲುಗಳು ಕೃಷ್ಣವರ್ಣ ಹೊಂದಿರುತ್ತವೆ. ಯುಎಸ್‌ಎ ಮತ್ತು ಕೆನಡಾದ ದೊಡ್ಡ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕಪ್ಪು ಅಳಿಲು.

ಅಳಿಲುಗಳು ಸಣ್ಣ ಅಥವಾ ಮಧ್ಯಮ ಗಾತ್ರದ ರೋಡೆಂಟ್‌ಗಳ ಸ್ಕಿಯುರಿಡೇ ಎಂದು ಕರೆಯಲಾಗುವ ದೊಡ್ಡ ಜಾತಿಗೆ ಸೇರಿವೆ. ಮರದ ಅಳಿಲುಗಳು, ನೆಲದಲ್ಲಿನ ಅಳಿಲುಗಳು, ಚಿಪ್-ಮುಂಕ್‌ಗಳು, ಮರ್ಮೊಟ್‌ಗಳು (ವುಡ್ ಚುಂಕ್‌ಗಳು ಇದರಲ್ಲಿ ಸೇರಿವೆ), ಹಾರುವ ಅಳಿಲುಗಳು ಮತ್ತು ಮೈದಾನದ ನಾಯಿಗಳು ಇದೇ ಜಾತಿಗೆ ಸೇರುತ್ತವೆ. ಅಳಿಲುಗಳ ಮೂಲ ಸ್ಥಳ ಅಮೆರಿಕ, ಯೂರಸಿಯ, ಮತ್ತು ಆಫ್ರಿಕಾ ನಂತರ ಆಸ್ಟ್ರೇಲಿಯಾಕ್ಕೆ ಪರಿಚಯಿಸಲಾಯಿತು ಸುಮಾರು ನಲವತ್ತು ಮಿಲಿಯನ್ ವರ್ಷಗಳ ಹಿಂದೆ ಅಳಿಲುಗಳು ಮೊದಲ ಬಾರಿಗೆ ಅಧಿಕೃತವಾಗಿ ಕಂಡದ್ದು ಇಯೊಸಿನ್‌ನಲ್ಲಿ, ಇವು ಬಹುತೇಕ ನೀರುನಾಯಿ ಮತ್ತು ಡೊರ್‌ಮೈಸ್ ಎಂಬ ಜಾತಿಗೆ ಸಂಬಂಧಿಸಿದ್ದು.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು