dcsimg

ಕುಂಟಲ ( канадски )

добавил wikipedia emerging languages

ಕುಂಟಲ ಎಂಬುದು ಮಿರ್ಟೇಸಿಯೆ ಕುಟುಂಬಕ್ಕೆ ಸೇರಿದ ಒಂದು ಮರ. ಕರ್ನಾಟಕದ ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಮರ ಬೆಳೆಯುತ್ತದೆ. ಉಳಿದಂತೆ ಶ್ರೀ ಲಂಕಾ, ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಬೆಳೆಯುತ್ತದೆ. ಇದನ್ನು ಕುಂಟು ನೇರಳೆ ಎಂಬುದಾಗಿ ಕೂಡಾ ಕರೆಯುತ್ತಾರೆ[೨].

ಗುಣ ಲಕ್ಷಣ

ಮರವು ಸುಮಾರು ೬ ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಸರಳವಾಗಿದ್ದು ವಿರುದ್ಧ ದಿಕ್ಕಿನಲ್ಲಿರುತ್ತವೆ. ತೊಗಟೆಯು ಸುಮಾರಾಗಿ ದಪ್ಪವಿದ್ದು ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ. ಹೂಗಳು ಸಣ್ಣವು, ಬಿಳಿಯ ಬಣ್ಣದಲ್ಲಿದ್ದು ಗಂಡು, ಹೆಣ್ಣು ಎರಡೂ ಭಾಗಗಳನ್ನು ಹೊಂದಿರುತ್ತವೆ. ಇದರ ಹಣ್ಣುಗಳು ಕಡು ನೇರಳೆ/ನೀಲಿ ಬಣ್ಣವನ್ನು ಹೊಂದಿದ್ದು, ಸಿಹಿ, ಒಗರು ಹಾಗೂ ಹುಳಿ ಮಿಶ್ರಿತ ರುಚಿಯನ್ನು ಹೊಂದಿರುತ್ತವೆ. ಗಾತ್ರದಲ್ಲಿ ಹಣ್ಣುಗಳು ಸುಮಾರು ೫ ಮಿ.ಮೀ ನಿಂದ ೧ ಸೆಂ.ಮೀ ವರೆಗೂ ಇರುತ್ತವೆ.

ಉಲ್ಲೇಖ

лиценца
cc-by-sa-3.0
авторски права
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
изворно
посети извор
соработничко мреж. место
wikipedia emerging languages

ಕುಂಟಲ: Brief Summary ( канадски )

добавил wikipedia emerging languages

ಕುಂಟಲ ಎಂಬುದು ಮಿರ್ಟೇಸಿಯೆ ಕುಟುಂಬಕ್ಕೆ ಸೇರಿದ ಒಂದು ಮರ. ಕರ್ನಾಟಕದ ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಮರ ಬೆಳೆಯುತ್ತದೆ. ಉಳಿದಂತೆ ಶ್ರೀ ಲಂಕಾ, ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಬೆಳೆಯುತ್ತದೆ. ಇದನ್ನು ಕುಂಟು ನೇರಳೆ ಎಂಬುದಾಗಿ ಕೂಡಾ ಕರೆಯುತ್ತಾರೆ.

лиценца
cc-by-sa-3.0
авторски права
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
изворно
посети извор
соработничко мреж. место
wikipedia emerging languages